ಡಿಸೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ

Bank Holidays in December 2020: ಡಿಸೆಂಬರ್ ತಿಂಗಳಲ್ಲಿ ಬರುವ ರಜೆಗಳ ಪಟ್ಟಿಯನ್ನು ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ.

Last Updated : Nov 30, 2020, 02:24 PM IST
  • ಡಿಸೆಂಬರ್ ತಿಂಗಳಲ್ಲಿ ಬರುವ ರಜೆಗಳ ಪಟ್ಟಿಯನ್ನು ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ.
  • ದೇಶಾದ್ಯಂತ ಬ್ಯಾಂಕುಗಳಿಗೆ ಎಲ್ಲಾ ಭಾನುವಾರದಂದು ರಜೆ ಇರಲಿದೆ. ಇದಲ್ಲದೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಬ್ಯಾಂಕುಗಳಿಗೆ ರಜೆ ಇರಲಿದೆ.
ಡಿಸೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ title=

ನವದೆಹಲಿ: ಡಿಸೆಂಬರ್ ತಿಂಗಳಲ್ಲಿ ಬರುವ ರಜೆಗಳ ಪಟ್ಟಿಯನ್ನು ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ದೇಶಾದ್ಯಂತ ಬ್ಯಾಂಕುಗಳಿಗೆ ಎಲ್ಲಾ ಭಾನುವಾರದಂದು ರಜೆ ಇರಲಿದೆ. ಇದಲ್ಲದೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಬ್ಯಾಂಕುಗಳಿಗೆ ರಜೆ ಇರಲಿದೆ. ಇವು ವಾಡಿಕೆಯ ರಜಾದಿನಗಳು. ಇದಲ್ಲದೆ ರಾಷ್ಟ್ರೀಯ ರಜಾದಿನಗಳು ಮತ್ತು ಇತರ ಪ್ರಾದೇಶಿಕ ರಜಾದಿನಗಳಲ್ಲಿಯೂ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.

ವರ್ಷದ ಕೆಲವು ರಾಷ್ಟ್ರೀಯ ರಜಾದಿನಗಳು ಹೊಸ ವರ್ಷ, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ದೀಪಾವಳಿ, ಹೋಳಿ, ಕ್ರಿಸ್‌ಮಸ್, ಈದ್ ದಿನದಂದು ದೇಶಾದ್ಯಂತ ಬ್ಯಾಂಕುಗಳಿಗೆ ರಜೆ ಇರಲಿದೆ. ಹಾಗೆ ನೋಡುವುದಾದರೆ ಡಿಸೆಂಬರ್ ತಿಂಗಳಲ್ಲಿ ಕೇವಲ ಒಂದು ರಾಷ್ಟ್ರೀಯ ರಜಾದಿನವಿದೆ. ಅದು ಕ್ರಿಸ್‌ಮಸ್ (Christmas). ಇದಲ್ಲದೆ ವಿವಿಧ ರಾಜ್ಯಗಳಲ್ಲಿ ಕೆಲವು ಪ್ರಾದೇಶಿಕ ರಜಾದಿನಗಳು ಇರಲಿವೆ.

ಬದಲಾಗಲಿದೆ Lakshmi Vilas Bank ಹೆಸರು

ಅಂತಹ ಪರಿಸ್ಥಿತಿಯಲ್ಲಿ ಗ್ರಾಹಕರು ತಮ್ಮ ಪ್ರಮುಖ ಕೆಲಸಗಳನ್ನು ಮಾಡಲು ಬ್ಯಾಂಕಿಗೆ ಹೋಗಲು ಯೋಜಿಸುತ್ತಿದ್ದರೆ ಅದಕ್ಕೂ ಮುನ್ನ ಈ ತಿಂಗಳು ತಮ್ಮ ಪ್ರದೇಶದಲ್ಲಿ ಯಾವ ದಿನ ಬ್ಯಾಂಕ್ ರಜೆ (Bank Holiday) ಇರಲಿದೆ ಎಂದು ತಿಳಿದಿರಬೇಕು. ಇದಕ್ಕಾಗಿ ಅವರು ತಮ್ಮ ಬ್ಯಾಂಕ್ ಮತ್ತು ಶಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ವಾಟ್ಸಾಪ್‌ನಲ್ಲಿಯೇ ತೆರೆಯಿರಿ Fixed Deposit, ಇಲ್ಲಿದೆ ಅದನ್ನು ಬಳಸುವ ಸುಲಭ ವಿಧಾನ

ಡಿಸೆಂಬರ್ 2020 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ:

ಡಿಸೆಂಬರ್ 1: ನಾಗಾಲ್ಯಾಂಡ್‌ನಲ್ಲಿ ರಾಜ್ಯ ಪ್ರತಿಷ್ಠಾನ ದಿನದ ರಜೆ
ಡಿಸೆಂಬರ್ 1: ಅರುಣಾಚಲ ಪ್ರದೇಶದಲ್ಲಿ ಫೇತ್ ಡೇ ರಜೆ
ಡಿಸೆಂಬರ್ 3: ಕರ್ನಾಟಕದಲ್ಲಿ ಕನಕದಾಸ ಜಯಂತಿ ರಜೆ 
ಡಿಸೆಂಬರ್ 3: ತ್ರಿಪುರದಲ್ಲಿ ವಿಶ್ವ ಅಂಗವಿಕಲ ದಿನ
ಡಿಸೆಂಬರ್ 3: ಗೋವಾದಲ್ಲಿ ಹಬ್ಬ ಫ್ರಾನ್ಸಿಸ್ ಕ್ಸೇವೈರ್ ಡೇ ಹಾಲಿಡೇ
ಡಿಸೆಂಬರ್ 5: ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ ಜನ್ಮದಿನ
ಡಿಸೆಂಬರ್ 12: ಎರಡನೇ ಶನಿವಾರ
ಡಿಸೆಂಬರ್ 18: ಮೇಘಾಲಯದಲ್ಲಿ ಯು ಸೊಸೊ ಥಾಮ್ ಅವರ ಜಯಂತಿ
ಡಿಸೆಂಬರ್ 18: ಛತ್ತೀಸ್‌ಗಢದಲ್ಲಿ ಗುರುಗಾಸಿ ದಾಸ್ ಜಯಂತಿ
ಡಿಸೆಂಬರ್ 19: ಗೋವಾ ವಿಮೋಚನಾ ದಿನ
ಡಿಸೆಂಬರ್ 19: ಪಂಜಾಬ್‌ನಲ್ಲಿ ಗುರು ತೇಜ್ ಬಹದ್ದೂರ್ ಜಿ ಹುತಾತ್ಮ ದಿನ
ಡಿಸೆಂಬರ್ 25: ಕ್ರಿಸ್‌ಮಸ್ (ರಾಷ್ಟ್ರೀಯ ರಜಾದಿನ)
ಡಿಸೆಂಬರ್ 30: ಸಿಕ್ಕಿಂನಲ್ಲಿ ತಮು ಲೋಸರ್
ಡಿಸೆಂಬರ್ 30: ಮೇಘಾಲಯದಲ್ಲಿ ಯು ಕಿಯಾಂಗ್ ನಂಗ್ಬಾ
ಡಿಸೆಂಬರ್ 30: ಮಣಿಪುರದಲ್ಲಿ ಹೊಸ ವರ್ಷದ ಮುನ್ನಾದಿನ ರಜೆ ಇರಲಿದೆ

Trending News