SBI Alert! Google Search ಮೂಲಕ ಸೈಟ್ ಪ್ರವೇಶಿಸುವ ಮೊದಲು ಈ ನಂಬರ್ ಮತ್ತು ಲಿಂಕ್ ನೆನಪಿಡಿ
Google Search ಎಲ್ಲ ಹುಡುಕಾಟದ ಪರಿಣಾಮಗಳು ಸರಿಯಾಗಿ ಬರಬೇಕು ಎಂಬುದು ಅನಿವಾರ್ಯವಲ್ಲ ಎಂದು ದೇಶದ ಅತಿ ದೊಡ್ಡ ಬ್ಯಾಂಕ್ SBI ಅಲರ್ಟ್ ಜಾರಿಗೊಳಿಸಿದೆ.
ನವದೆಹಲಿ: ಹಲವು ಬಾರಿ ನಾವು ನಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ನೀಡುವ ಭಿಪ್ರಾಯವನ್ನು ನಂಬುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ, ಆರ್ಥಿಕ ಪೆಟ್ಟು ಬೀಳುವ ಸಾಧ್ಯತೆ ಇದೆ . ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಲ್ಲಾ ಹುಡುಕಾಟ ಫಲಿತಾಂಶಗಳು ಸರಿಯಾದ ಫಲಿತಾಂಶಗಳನ್ನು ನೀಡಬೇಕು ಎಂಬುದು ಅನಿವಾರ್ಯವಲ್ಲ ಎಂಬ ಜಾಹೀರಾತನ್ನು ಪ್ರಾರಂಭಿಸಿದೆ, ಈ ರೀತಿಯ ವರ್ತನೆಯಿಂದಾಗುವ ಹಾನಿಯಿಂದ ಗ್ರಾಹಕರು ತಪ್ಪಿಸಬೇಕು ಎಂಬುದು ಬ್ಯಾಂಕ್ ಉದ್ದೇಶ.
ಇದನ್ನು ಓದಿ-Contact Less Debit Card ಜಾರಿಗೊಳಿಸಿದೆ SBI, ಗ್ರಾಹಕರಿಗೆ ಸಿಗಲಿವೆ ಈ ಲಾಭಗಳು
ಸಾಮಾನ್ಯವಾಗಿ ಯಾವುದಾದರೊಂದು ಮಾಹಿತಿಯ ಹುಡುಕಾಟಕ್ಕೆ ನಾವು ಗೂಗಲ್ ನಂತಹ ಸರ್ಚ್ ಇಂಜಿನ್ ಬಳಕೆ ಮಾಡುತ್ತೇವೆ. ಅಷ್ಟೇ ಅಲ್ಲ ಲಿಂಕ್ ನಲ್ಲಿ ಬರುವ ಎಲ್ಲ ಪರಿಣಾಮಗಳನ್ನು ನಾವು ನಂಬುತ್ತೇವೆ. ಈ ರೀತಿಯಿಂದಾಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಎಸ್.ಬಿ.ಐ ಕೆಲ ನಂಬರ್ ಹಾಗೂ ವೆಬ್ ಸೈಟ್ ಲಿಂಕ್ ಗಳನ್ನು ಜಾರಿಗೊಳಿಸಿದೆ.
ಇದನ್ನು ಓದಿ- ಸೆಕೆಂಡ್ ಹ್ಯಾಂಡ್ Car ಖರೀದಿಗೂ ಸಿಗುತ್ತೆ ಸಾಲ, ಈ 7 ಬ್ಯಾಂಕ್ ಗಳಲ್ಲಿ ಅಂತ್ಯಂತ ಕಡಿಮೆ ಬಡ್ಡಿದರ
ಬ್ಯಾಂಕ್ ಗೆ ಸಂಬಂಧಿಸಿದ ಅಪ್ಡೇಟ್ ಗಳಿಗೆ ವಿಶ್ವಾಸಾರ್ಹ ವೆಬ್ ಸೈಟ್
ಗೂಗಲ್ ನಲ್ಲಿ ಹುಡುಕಾಟ ನಡೆಸುವಾಗ ಸರಿಯಾದ ಪರಿಣಾಮಗಳ ಜೊತೆಗೆ ಸಂಬಂಧಿತ ಪರಿಣಾಮಗಳು ಕೂಡ ಕಾಣಿಸಿಕೊಳ್ಳುತ್ತವೆ. ಇದರಿಂದ ಹಲವು ಬಾರಿ ಜನರು ಫೇಕ್ ವೆಬ್ ಸೈಟ್ ಗೆ ಹೋಗಿ ತಲುಪುತ್ತಾರೆ. ಈ ಕುರಿತು ಹೇಳಿಕೆ ನೀಡಿರುವ ಬ್ಯಾಂಕ್, SBI ಗೆ ಸಂಬಂಧಿದ ಅಪ್ಡೇಟ್ ಗಳಿಗಾಗಿ https://bank.sbi ವೆಬ್ ಸೈಟ್ ಗೆ ಭೇಟಿ ನೀಡಲು ಸಲಹೆ ನೀಡಿದೆ. ಈ ವೆಬ್ ಸೈಟ್ ಮೇಲೆ ಎಸ್.ಬಿ.ಐಗೆ ಸಂಬಂಧಿಸಿದ ಮಾಹಿತಿಗಳ ಅಪ್ಡೇಟ್ ಸಿಗಲಿದೆ. ಉದಾ- ಬ್ಯಾಂಕ್ ಬಡ್ಡಿ ದರಗಳ ಮಾಹಿತಿ ಇತ್ಯಾದಿ.
ಇದನ್ನು ಓದಿ- Adani Loan Issue: SBI ಗೆ ಎಚ್ಚರಿಕೆ ನೀಡ ಫ್ರಾನ್ಸ್ ಕಂಪನಿ, ಅಡಾಣಿ ಕಂಪನಿಗೆ ಸಾಲ ನೀಡಿದರೆ?
Toll Free ನಂಬರ್ ಗಳ ಮೂಲಕ ನಿಖರ ಮಾಹಿತಿ
ಯಾವುದೇ ವ್ಯಕ್ತಿಯಿಂದ ಮಾಹಿತಿ ಪಡೆಯುವ ಬದಲು ಬ್ಯಾಂಕ್ ನ ಗ್ರಾಹಕ ಕಾಳಜಿ ಸಂಖ್ಯೆಗಳ ಮೇಲೆ ಭರವಸೆ ಮಾಡಲು ಬ್ಯಾಂಕ್ ಸಲಹೆ ನೀಡಿದೆ. ಯಾವುದೇ ಗ್ರಾಹಕರು 1800 11 2211, 1800 425 3800 ಅಥವಾ 080 26599990 ಗೆ ಸಂಪರ್ಕ ಸಾಧಿಸಿ ಸರಿಯಾದ ಮಾಹಿತಿ ಪಡೆಯಬಹುದು ಎಂದು ಬ್ಯಾಂಕ್ ಹೇಳಿದೆ. ಗ್ರಾಹಕ ದೂರು ಪ್ರತಿನಿಧಿಗಳ ಜೊತೆಗೆ ಸಂಪರ್ಕ ಸಾಧಿಸಿ ಗ್ರಾಹಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಬ್ಯಾಂಕ್ ಹೇಳಿದೆ.