ನವದೆಹಲಿ: ಅಡಾಣಿ ಗ್ರೂಪ್ ಸಾಲದ ವಿಷಯ ಇದೀಗ ಭಾರಿ ಸದ್ದು ಮಾಡಲಾರಂಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಕಂಪನಿ Amundi ಭಾರತೀಯ ಸ್ಟೇಟ್ ಬ್ಯಾಂಕ್ ನೇರವಾಗಿ ಎಚ್ಚರಿಕೆ ನೀಡಿದೆ. ಹೌದು, ಒಂದು ವೇಳೆ ಭಾರತೀಯ ಸ್ಟೇಟ್ ಬ್ಯಾಂಕ್ ಅಡಾಣಿ ಗ್ರೂಪ್ ಗೆ ಸೇರಿರುವ ಕಾರ್ಮಾಯಿಕಲ್ ಕೋಲ್ ಮೈನ್ಸ್ ಕಂಪನಿಗೆ ನೀಡುತ್ತಿರುವ ರೂ.5000 ಕೋಟಿ ಸಾಲವನ್ನು ತಕ್ಷಣವೇ ನಿಲ್ಲಿಸದೆ ಹೋದರೆ SBIನ ಗ್ರೀನ್ ಬಾಂಡ್ಸ್ ಗಳ ಮಾರಾಟ ಮಾಡುವುದಾಗಿ ಹೇಳಿದೆ.
ಇದನ್ನು ಓದಿ- ತನ್ನ ಗ್ರಾಹಕರಿಗೆ ಎಚ್ಚರಿಕೆ ರವಾನಿಸಿದ SBI, ಈ ದಿನ ವ್ಯವಹಾರಕ್ಕೆ ಅಡಚಣೆ ಎದುರಾಗಲಿದೆ
SBIಗೆ ಫ್ರಾನ್ಸ್ ಕಂಪನಿಯಿಂದ ಎಚ್ಚರಿಕೆ
ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಡೈರೆಕ್ಟರ್ ಆಫ್ ಇನ್ಸ್ಟಿಟ್ಯೂಷನಲ್ ಕಾರ್ಪೋರೆಟ್ ಕ್ಲೈಂಟ್ಸ್ & ESG ಜೀನ್ ಜೈಕ್ಸ್ ಬಾರ್ಬರಿಜ್ ಕೆ, ಅಡಾಣಿ ಗ್ರೂಪ್ ನ ಈ ಪ್ರಾಜೆಕ್ಟ್ ಗೆ ಭಾರತೀಯ್ಸ್ ಸ್ಟೇಟ್ ಬ್ಯಾಂಕ್ (SBI) ಸಾಲ ನೀಡಬಾರದು, ಆದರೆ ಇದು ಬ್ಯಾಂಕ್ ನ ನಿರ್ಣಯವಾಗಿದೆ, ಒಂದು ವೇಳೆ ಬ್ಯಾಂಕ್ ಈ ರೀತಿ ಮಾಡಿದರೆ ನಾವು ಕೂಡಲೇ ಬ್ಯಾಂಕ್ ನ ಬಾಂಡ್ ಗಳನ್ನು ಮಾರಾಟ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ- ATM ಕಾರ್ಡ್ ಮೇಲೆ ನಿಮ್ಮ ಮಗುವಿನ ಫೋಟೋ ಮುದ್ರಿಸಿ, ಈ ಬ್ಯಾಂಕ್ ಆರಂಭಿಸಿದೆ ಸೇವೆ
ನಾವು ನಮ್ಮ ಹೇಳಿಕೆಯನ್ನು ನೀಡಿದ್ದೇವೆ, ಈಗ SBI ಉತ್ತರಿಸಬೇಕು
AMUNDI ಬಳಿ Amundi Planet Green Emerging Fund ಅಡಿ SBI ಗ್ರೀನ್ ಬಾಂಡ್ಸ್ ಗಳಿವೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ SBI ಆಸ್ಟ್ರೇಲಿಯಾದ ವಿವಾದಾತ್ಮಕ ಕಲ್ಲಿದ್ದಲು ಗಣಿ ಯೋಜನೆಗೆ ಸಾಲ ನೀಡುತ್ತಿದೆ ಎಂಬುದು ನಮಗೆ ತಿಳಿದುಬಂದಿದೆ ಎಂದಿದೆ.
ಇದನ್ನು ಓದಿ- ಗುಡ್ ನ್ಯೂಸ್! ಜನ ಧನ್ ಖಾತೆಗಳಲ್ಲಿ ಈ ವಹಿವಾಟುಗಳಿಗೆ ಇಲ್ಲ ಶುಲ್ಕ
ಕೋಲ್ ಮೇನ್ ಕಂಪನಿಗೆ ವಿರೋಧ
ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿರುವ ಅಡಾಣಿಯ ಬಹು-ಮಿಲಿಯನ್ ಡಾಲರ್ ಕಾರ್ಮೈಕಲ್ ಕಲ್ಲಿದ್ದಲು ಗಣಿ ಮೊದಲಿನಿಂದಲೂ ವಿವಾದದ ಸುಳಿಯಲ್ಲಿದೆ. ಈ ಯೋಜನೆಯು ಪರಿಸರಕ್ಕೆ ಅಪಾಯ ಎಂದು ವಿವರಿಸಲಾಗಿದೆ ಮತ್ತು ಅಲ್ಲಿ ಅನೇಕ ಪ್ರತಿಭಟನೆಗಳು ನಡೆಯುತ್ತಿವೆ. ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೆಲವರು ಅಡಾಣಿಗೆ ಸಾಲ ನೀಡದಂತೆ ಬ್ಯಾನರ್ಗಳನ್ನು ಪ್ರದರ್ಶಿಸಿದ್ದಾರೆ. ಪ್ರತಿಭಟನಾಕಾರರು ಪೋಸ್ಟರ್ಗಳೊಂದಿಗೆ ಗ್ರೌಂಡ್ ಗೆ ಇಳಿದಿದ್ದಾರೆ. ಅವರು 'No $1b Adani loan' ಎಂಬ ಫಲಕ ಹಿಡಿದು ಪ್ರತಿಭಟಿಸಿದ್ದಾರೆ. ಸಿಡ್ನಿ ಮೈದಾನದ ಹೊರಗೆ ಹಲವಾರು ಪ್ರತಿಭಟನಾಕಾರರು ಜಮಾಯಿಸಿದ್ದರು. ಅದರ ನಂತರ ಈ ವಿಷಯವು ಪತ್ರಿಕೆಗಳಲ್ಲಿ ಭಾರಿ ಹೆಡ್ಲೈನ್ ಸೃಷ್ಟಿಸಿದೆ.