Service Charge: ದೇಶಾದ್ಯಂತ ಇರುವ ಯಾವುದೇ ರೆಸ್ಟೋರೆಂಟ್‌ಗಳಲ್ಲಿ ಆಹಾರ ಮತ್ತು ಪಾನೀಯದ ಬಿಲ್‌ನೊಂದಿಗೆ ಸೇವಾ ಶುಲ್ಕವನ್ನು ಗ್ರಾಹಕರಿಂದ ಕೇಳಿದರೆ, ಸೇವಾ ಶುಲ್ಕವನ್ನು ಪಾವತಿಸಬೇಕೇ ಅಥವಾ ಬೇಡವೇ ಎಂಬುದು ಗ್ರಾಹಕರ ವಿವೇಚನೆಗೆ ಬಿಟ್ಟ ವಿಷಯವಾಗಿರಲಿದೆ. ಒಂದು ವೇಳೆ ರೆಸ್ಟೋರೆಂಟ್ ಮಾಲೀಕರು ಗ್ರಾಹಕರ ಒಪ್ಪಿಗೆಯಿಲ್ಲದೆ ಸೇವಾ ಶುಲ್ಕವನ್ನು ಪಡೆದರೆ, ಅದು ಕಾನೂನುಬಾಹಿರವಾಗಿರಲಿದೆ. ಗ್ರಾಹಕರು ಸೇವಾ ಶುಲ್ಕವನ್ನು ಪಾವತಿಸಲು ಬದ್ಧರಾಗಿರುವುದಿಲ್ಲ. ಇನ್ಮುಂದೆ ಗ್ರಾಹಕರು ರೆಸ್ಟೋರೆಂಟ್‌ನಲ್ಲಿ ಸೇವಾ ಶುಲ್ಕವನ್ನು ಪಾವತಿಸಲು ಸ್ಪಷ್ಟವಾಗಿ ನಿರಾಕರಿಸಬಹುದು. ಜೂನ್ 2 ರಂದು ಕೇಂದ್ರ ಸರ್ಕಾರ ಈ ಕುರಿತು ಒಂದು ಮಹತ್ವದ ಸಭೆಯನ್ನು ಕರೆದಿದ್ದು, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದ ಸಂಘಟನೆಗಳು ಈ ಸಭೆಯಲ್ಲಿ ಭಾಗಿಯಾಗಲಿವೆ. ಇದಲ್ಲದೆ, Zomato, Swiggy, Delhivery, Zepto, Ola, Uber ನಂತಹ ಪೂರೈಕೆದಾರರನ್ನು ಸಹ ಈ ಸಭೆಗೆ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಜೂನ್ 2 ರಂದು ಬೃಹತ್ ಸಭೆ ನಡೆಯಲಿದೆ
ಸಭೆಯ ಅಧ್ಯಕ್ಷತೆಯನ್ನು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಸಿಂಗ್ ವಹಿಸಲಿದ್ದಾರೆ. ಎನ್‌ಆರ್‌ಎಐ-ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾವನ್ನೂ ಕೂಡ ಸಭೆಗೆ ಆಮಂತ್ರಿಸಲಾಗಿದೆ. ಈ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ವಾಸ್ತವದಲ್ಲಿ, ಗ್ರಾಹಕರ ಸಹಾಯವಾಣಿಯಲ್ಲಿ ಸತತ ದೂರುಗಳು ಬಂದ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ. ಸರ್ಕಾರವು ಎಲ್ಲಾ ರೀತಿಯ ದೂರುಗಳನ್ನು ವರ್ಗಗಳಾಗಿ ವಿಭಜಿಸುತ್ತಿದೆ ಎಂದು ನಮ್ಮ ಅಂಗ ಸಂಸ್ಥೆಯಾಗಿರುವ ಝೀ ಬ್ಯುಸಿನೆಸ್ ಈಗಾಗಲೇ ವರದಿ ಮಾಡಿತ್ತು.


ಸೇವಾ ಶುಲ್ಕ ಕಡ್ಡಾಯವಲ್ಲ
ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯವು ಆಹಾರ ಬಿಲ್‌ನಲ್ಲಿ ಲೆವಿ ಅಥವಾ ಸೇವಾ ಶುಲ್ಕಗಳು ಇನ್ಮುಂದೆ ಮಾನ್ಯವಾಗಿರುವುದಿಲ್ಲ ಎಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ರೀತಿಯ ಶುಲ್ಕವು ಕಡ್ಡಾಯವಲ್ಲ, ಬದಲಿಗೆ ಗ್ರಾಹಕರು ಅದನ್ನು ನೀಡಬೇಕೆ ಅಥವಾ ಬೇಡವೇ ನಿರ್ಧರಿಸಬೇಕು. ಗ್ರಾಹಕರು ಕುಟುಂಬ ಸಮೇತ ಊಟಕ್ಕೆ ಹೋದಾಗ ಸೇವಾ ಶುಲ್ಕ ಪಾವತಿಸಲು ಇಚ್ಛಿಸದಿದ್ದರೆ, ಅವರನ್ನು ಬಲವಂತಪಡಿಸುವಂತಿಲ್ಲ. ಅನ್‌ಫೇರ್ ಟ್ರೇಡ್ ಆಫ್ ಪ್ರಾಕ್ಟೀಸ್ ಕಾಯ್ದೆಯ ಅಡಿಯಲ್ಲಿ ಈ ರೀತಿ ಮಾಡುವವರ ಮೇಲೆ ಕ್ರಮ ಜರುಗಿಸಲಾಗುವುದು ಎನ್ನಲಾಗಿದೆ.


ಸೇವಾ ಶುಲ್ಕಕ್ಕೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳು ಯಾವುವು?
ಸೇವಾ ಶುಲ್ಕಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಏಪ್ರಿಲ್ 21, 2017 ರಂದು ಹೊರಡಿಸಿದ ಮಾರ್ಗಸೂಚಿಗಳಲ್ಲಿ, ಕೆಲವು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಗ್ರಾಹಕರ ಒಪ್ಪಿಗೆಯಿಲ್ಲದೆ ಟಿಪ್ ಅಥವಾ ಸೇವಾ ಶುಲ್ಕವನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಲಾಗಿದೆ.


>> ಗ್ರಾಹಕರ ಬಿಲ್‌ನಲ್ಲಿ ಸೇವಾ ಶುಲ್ಕವನ್ನು ಪಾವತಿಸಿದ ನಂತರವೂ ಕೂಡ ಈ ಶುಲ್ಕ ತೆರಿಗೆಯ ಭಾಗವಾಗಿರಬಹುದು ಎಂಬ ಆಲೋಚನೆಯಿಂದ ಮಾಣಿಗೆ ಪ್ರತ್ಯೇಕವಾಗಿ ಟಿಪ್ ನೀಡುತ್ತಾರೆ,


>> ಒಂದು ವೇಳೆ ಗ್ರಾಹಕರಿಗೆ ಕಡ್ಡಾಯ ಸೇವಾ ಶುಲ್ಕ ಒಪ್ಪಿಗೆ ಇರದಿದ್ದರೆ, ಹೋಟೆಲ್ ಗೆ ಬರಬೇಡಿ ಎಂದು ಹಲವು ಕಡೆಗಲ್ಲಿ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಬರೆಯಲಾಗಿರುತ್ತದೆ.


>> ಆಹಾರದ ಬೆಲೆಯ ಜೊತೆಗೆ ಸೇವೆಯ ಬೆಲೆಯನ್ನು ಕೂಡ ಅದರಲ್ಲಿ ಸೇರಿಸಲಾಗಿರುತ್ತದೆ ಎಂಬುದು ಸಾಮಾನ್ಯವಾಗಿ ನಂಬಲಾಗುತ್ತದೆ. ಹೀಗಿರುವಾಗ ಅನ್ ಫೇರ್ ಟ್ರೇಡ್ ಅಂಡ್ ಪ್ರಾಕ್ಟೀಸ್ ಅಡಿ ಗ್ರಾಹಕರು ಗ್ರಾಹಕ್ ನ್ಯಾಯಾಲಯವನ್ನು ಸಂಪರ್ಕಿಸಬಹುದು.


ಇದನ್ನೂ ಓದಿ-7th Pay Commission: ಹೊಸ ಸೂತ್ರದಡಿ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ, ಪ್ರತಿವರ್ಷ ಮೂಲವೇತನದಲ್ಲಿ ಪರಿಷ್ಕರಣೆ!


>> ಗ್ರಾಹಕರು ಮೆನು ಕಾರ್ಡ್ ನೋಡಿದಾಗ ಅದರಲ್ಲಿ ಆಹಾರ ಪದಾರ್ಥದ ಬೆಲೆ ಮತ್ತು ತೆರಿಗೆಯನ್ನು ಬರೆಯಲಾಗಿರುತ್ತದೆ. ಅದನ್ನು ಪಾವತಿಸಲು ಸಿದ್ಧರಾಗಿರುವಾಗ ಮಾತ್ರ ಗ್ರಾಹಕರು ಆಹಾರವನ್ನು ಆರ್ಡರ್ ಮಾಡುತ್ತಾರೆ. ಆದರೆ, ಇದರ ಹೊರತಾಗಿ, ಗ್ರಾಹಕರ ಒಪ್ಪಿಗೆಯಿಲ್ಲದೆ ತೆಗೆದುಕೊಳ್ಳುವ ಯಾವುದೇ ಶುಲ್ಕವು ಅನ್ಯಾಯದ ವ್ಯಾಪಾರದ ಅಭ್ಯಾಸವಾಗಿರಲಿದೆ.


ಇದನ್ನೂ ಓದಿ-ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ಪಡೆಯುವ ಅವಕಾಶ


>> ಟಿಪ್ ಕೊಡುವುದು ಅಥವಾ ಬಿಡುವುದು ಇದು ಗ್ರಾಹಕರ ಅಧಿಕಾರ ಕ್ಷೆತ್ರದಲ್ಲಿರುತ್ತದೆ. ಹೀಗಿರುವಾಗ 'ಸೇವಾ ಶುಲ್ಕವು ಗ್ರಾಹಕರ ವಿವೇಚನೆಗೆ ಬಿಟ್ಟ ವಿಷಯವಾಗಿರಲಿದೆ ಮತ್ತು ಸೇವಾ ಶುಲ್ಕದ ಕಾಲಮ್ ಅನ್ನು ನೀವು ಖಾಲಿ ಬಿಡಬಹುದು' ಎಂದು ಬಿಲ್‌ನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು, ಇದರಿಂದ ಗ್ರಾಹಕರು ಹಣ ಪಾವತಿಸುವ ಮೊದಲು ಅದರಲ್ಲಿ ತಾವು ಕೊಡಬೇಕಾದ ಟಿಪ್ ಅನ್ನು ಖುದ್ದಾಗಿ ಭರ್ತಿ ಮಾಡಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.