Government Alert SBI Customer: ಎಸ್ ಬಿ ಐ ಗ್ರಾಹಕರಿಗೆ ಸರ್ಕಾರದ ಎಚ್ಚರಿಕೆ, ಈ ಸಂದೇಶ ತಕ್ಷಣ ಡಿಲೀಟ್ ಮಾಡಿ

Government Alert SBI Customer - ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿ ಬರುವ ಕರೆಗಳಿಗೆ ಹಾಗೂ ಎಸ್ಎಂಎಸ್ ಗಳಿಗೆ ಪ್ರತಿಕ್ರಿಯೆ ನೀಡದಂತೆ  ಎಸ್ಬಿಐ ಗ್ರಾಹಕರಿಗೆ ಮನವಿ ಮಾಡಿದೆ.

Written by - Nitin Tabib | Last Updated : May 22, 2022, 12:25 PM IST
  • ಎಸ್ಬಿಐ ಗ್ರಾಹಕರಿಗೆ ಪಿಐಬಿ ಎಚ್ಚರಿಕೆ
  • ಈ ಸಂದೇಶವನ್ನು ತಕ್ಷಣ ಡಿಲೀಟ್ ಮಾಡಿ
  • ಏನಿದೆ? ಆ ನಕಲಿ ಸಂದೇಶದಲ್ಲಿ?
Government Alert SBI Customer: ಎಸ್ ಬಿ ಐ ಗ್ರಾಹಕರಿಗೆ ಸರ್ಕಾರದ ಎಚ್ಚರಿಕೆ, ಈ ಸಂದೇಶ ತಕ್ಷಣ ಡಿಲೀಟ್ ಮಾಡಿ title=
Fake Message About SBI

SBI Customer Alert: ನೀವೂ ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ, ಸರ್ಕಾರ ನಿಮಗಾಗಿ ಒಂದು ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಹೌದು, ಸರ್ಕಾರಿ ಸಂಸ್ಥೆಯಾಗಿರುವ ಪ್ರೆಸ್ ಇನ್ಫಾರ್ಮಶನ್ ಬ್ಯೂರೋ (ಪಿಐಬಿ) ಈ ಸಲಹೆಯಿಂದ ಕೂಡಿದ ಎಚ್ಚರಿಕೆ ನೀಡಿದೆ. ಪಿಐಬಿ ಸರ್ಕಾರದ ನೀತಿಗಳು, ಕಾರ್ಯಕ್ರಮ, ಉಪಕರಣಗಳು ಮತ್ತು ಸಾಧನಗಳ ಮತ್ತು ಸಾಧನೆಗಳ ಕುರಿತು ಪ್ರಿಂಟ್ ಹಾಗೂ ಇಲೆಕ್ಟ್ರಾನಿಕ್ ಮಾಹಿತಿಯನ್ನು ನೀಡುವ ಸರ್ಕಾರದ ನೋಡಲ್ ಎಜೆನ್ಸಿಯಾಗಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳುವ ಫೋನ್ ಕರೆ ಹಾಗೂ ಎಸ್ಎಂಎಸ್ ಗಳಿಗೆ ಪ್ರತಿಕ್ರಿಯೆ ನೀಡದಂತೆ ನೋಡಲ್ ಏಜೆನ್ಸಿ ಎಸ್ಬಿಐ ಗ್ರಾಹಕರಿಗೆ ಮನವಿ ಮಾಡಿದೆ. ಅಷ್ಟೇ ಅಲ್ಲ ಸಂದೇಶಗಳಲ್ಲಿ ಬರುತ್ತಿರುವ ಲಿಂಕ್ ಗಳ ಮೇಲೆಯೂ ಕೂಡ ಕ್ಲಿಕ್ಕಿಸದಂತೆ ವಿನಂತಿಸಿದೆ.

ಪಿಐಬಿಯ ತನ್ನ ಟ್ವೀಟ್ ನಲ್ಲಿ, "ನಿಮ್ಮ @TheOfficialSBI ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳುವ ಸಂದೇಶವು # FAKE ಆಗಿದೆ." ಎಂದು ಹೇಳಿದೆ.ಇದಲ್ಲದೆ ಪಿಐಬಿ ತನ್ನ ಟ್ವೀಟ್ ನಲ್ಲಿ ಇಂತಹ ಎಸ್ಎಂಎಸ್ ನ ಒಂದು ಫೋಟೋವನ್ನು ಕೂಡ ಹಂಚಿಕೊಂಡಿದೆ. 

>> ನಿಮ್ಮ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಲು ಕೇಳುವ ಇಮೇಲ್‌ಗಳು/SMS ಗೆ ಪ್ರತಿಕ್ರಿಯಿಸಬೇಡಿ.

>> ನಮಗೂ ಇಂತಹ ಯಾವುದೇ ಸಂದೇಶ ಬಂದಿದ್ದರೆ, ಅದನ್ನು ತಕ್ಷಣವೇ report.phishing@sbi.co.in ಗೆ ವರದಿ ಮಾಡಿ .

 

ಇದನ್ನೂ ಓದಿ-Petrol-Diesel Price: ಕೇಂದ್ರದಿಂದ ವಾಹನ ಸವಾರರಿಗೆ ಸಿಹಿ ಸುದ್ದಿ: ತೈಲ ಬೆಲೆಯಲ್ಲಿ ಭಾರೀ ಇಳಿಕೆ

ನಕಲಿ SMS ಪಡೆದ SBI ಬಳಕೆದಾರರಿಗೆ ಏನು ಮಾಡಲು ಕೋರಲಾಗಿದೆ
PIB ನ ಟ್ವೀಟ್ ವೈರಲ್ ಆಗುತ್ತಿರುವ ಎಸ್ಬಿಐ ನ ನಕಲಿ SMS ನ ಚಿತ್ರವನ್ನು ಕೂಡ ಒಳಗೊಂಡಿದೆ. ನಕಲಿ ಎಸ್ಎಂಎಸ್ ನಲ್ಲಿ  "ಆತ್ಮೀಯ A/c ಹೋಲ್ಡರ್ ನಿಮ್ಮ SBI ಬ್ಯಾಂಕ್ ದಾಖಲೆಗಳ ಅವಧಿ ಮುಗಿದಿದೆ. ಹೀಗಾಗಿ ಖಾತೆಯನ್ನು ಅನ್ನು ನಿರ್ಬಂಧಿಸಲಾಗುತ್ತದೆ https://sbikvs.ll ಈಗ ಕ್ಲಿಕ್ ಮಾಡಿ, ನೆಟ್ ಬ್ಯಾಂಕಿಂಗ್ ಮೂಲಕ ನವೀಕರಿಸಿ". "ಆತ್ಮೀಯ ಖಾತೆದಾರರೆ ನಿಮ್ಮ SBI ಬ್ಯಾಂಕ್ ದಾಖಲೆಗಳ ಅವಧಿ ಮುಕ್ತಾಯಗೊಂಡಿದ್ದು, ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗುವುದು ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ದಾಖಲೆಗಳನ್ನು ನವೀಕರಿಸಲು ಇಲ್ಲಿ ಕ್ಲಿಕ್ ಮಾಡಿ https://sbikvs.ll" ಎಂದು ಬರೆಯಲಾಗಿದೆ.

ಇದನ್ನೂ ಓದಿ-Vegetable Price: ಗ್ರಾಹಕರೇ ಗಮನಿಸಿ... ಇಂದಿನ ತರಕಾರಿ ಬೆಲೆ ಹೇಗಿದೆ ಗೊತ್ತಾ?

ಇಂತಹ ನಕಲಿ ಎಸ್ ಎಂಎಸ್ ಬರುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಮಾರ್ಚ್‌ನಲ್ಲಿ, ಹಲವಾರು ಎಸ್‌ಬಿಐ ಬಳಕೆದಾರರಿಗೆ ಆರ್‌ಬಿಐನ ಕೆವೈಸಿ ಮಾನದಂಡಗಳನ್ನು ಅನುಸರಿಸದಿದ್ದಕ್ಕಾಗಿ ನಿಮ್ಮ ಎಸ್‌ಬಿಐ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿಕೊಳ್ಳುವ ಎಸ್‌ಎಂಎಸ್ ಬರುತ್ತಿದ್ದವು. ಈ ಸಂದೇಶದಲ್ಲಿ ಲಿಂಕ್ ವೊಂದನ್ನು ಕೂಡ ನೀದಲಾಗಿತ್ತು ಮತ್ತು ಅದರ ಮೇಲೆ ಕ್ಲಿಕ್ ಮಾಡುವ ಮೂಲಕ KYC ಅನ್ನು ಪೂರ್ಣಗೊಳಿಸಲು ಬಳಕೆದಾರರಿಗೆ ಕೋರಲಾಗಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News