ನವದೆಹಲಿ: ಸೋಮವಾರ ಭಾರತೀಯ ಷೇರುಪೇಟೆ ಸೂಚ್ಯಂಕಗಳ ಏರಿಕೆಯ ನಡುವೆಯೂ ಜೊಮ್ಯಾಟೊ ಷೇರು ಭಾರೀ ಕುಸಿತ ಕಂಡಿದೆ. ಮತ್ತೆ ನೆಲಕಚ್ಚಿದ ಜೊಮ್ಯಾಟೊ ಷೇರಿನಿಂದಾಗಿ ಹೂಡಿಕೆದಾರರು ಕೈಸುಟ್ಟುಕೊಳ್ಳುವಂತಾಗಿದೆ. ಇದೀಗ ಟೊಮೆಟೊ ಬೆಲೆಗೆ ಜೊಮ್ಯಾಟೊ ಷೇರು ಬಂದು ನಿಂತಿದ್ದು, ಹೂಡಿಕೆದಾರರು ಕೈಕೈ ಹಿಸುಕಿಕೊಳ್ಳುವಂತಾಗಿದೆ.


COMMERCIAL BREAK
SCROLL TO CONTINUE READING

ಸೋಮವಾರದ ಷೇರುಪೇಟೆ ವಹಿವಾಟಿನ ಅಂತ್ಯದ ಸಮಯಕ್ಕೆ ಜೊಮ್ಯಾಟೊ ಷೇರು ಶೇ.6.60ರಷ್ಟು(4 ರೂ. 65 ಪೈಸೆ) ಕುಸಿತ ಕಂಡಿದ್ದು, 65.85 ರೂ.ಗೆ ಬಂದು ತಲುಪಿದೆ. 52 ವಾರಗಳ ಗರಿಷ್ಠ ಮಟ್ಟದಿಂದ ಜೊಮ್ಯಾಟೊ ಷೇರು ಶೇ.43.23ರಷ್ಟು ಕುಸಿತ ಕಂಡಿದೆ. ಕಳೆದ 1 ವಾರದಲ್ಲಿ ಜೊಮ್ಯಾಟೊ ಷೇರು ಶೇ.3.16ರಷ್ಟು ಕುಸಿತ ಕಂಡಿದೆ. ಕಳೆದೊಂದು ತಿಂಗಳಿನಲ್ಲಿ ಚೇತರಿಕೆ ಕಂಡಿದ್ದ ಜೊಮ್ಯಾಟೊ ಷೇರು ಮತ್ತೆ ಪಾತಾಳ ಗರಡಿ ತಲುಪಿದೆ.


ಇದನ್ನೂ ಓದಿ: Gold-Sliver Price: ಏರಿಕೆ ಕಂಡ ಹಳದಿಲೋಹದ ಬೆಲೆ: ಗ್ರಾಹಕರಿಗೆ ಬಿಸಿಮುಟ್ಟಿಸಿದ ಚಿನ್ನದ ದರ


ಸೋಮವಾರ ವಹಿವಾಟಿನ ಆರಂಭದಲ್ಲಿ 72.65. ರೂ. ದರದಲ್ಲಿ ವಹಿವಾಟು ನಡೆಸುತ್ತಿದ್ದ ಜೊಮ್ಯಾಟೊ ಷೇರು ವಹಿವಾಟಿನ ಅಂತ್ಯಕ್ಕೆ 4.65 ರೂ. ಕುಸಿದು ಕಂಡು 65.85 ರೂ.ಗೆ ತಲುಪಿದೆ. ಷೇರುಪೇಟೆ ಹಸಿರು ಬಣ್ಣದಲ್ಲಿ ವಹಿವಾಟು ಅಂತ್ಯಗೊಳಿಸಿದರೂ ಜೊಮ್ಯಾಟೊ ಷೇರು ಮಾತ್ರ ಹೂಡಿಕೆದಾರರಿಗೆ ದೊಡ್ಡ ನಿರಾಸೆ ಮೂಡಿಸಿದೆ.


ಸೆನ್ಸೆಕ್ಸ್ & ನಿಫ್ಟಿ ಏರಿಕೆ


ಶುಕ್ರವಾರ ಹಸಿರು ಬಣ್ಣದಲ್ಲಿ ಅಂತ್ಯಕಂಡಿದ್ದ ಭಾರತೀಯ ಷೇರುಪೇಟೆ ಸೋಮವಾರವೂ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿತು. ನಿಫ್ಟಿ 50 ಸೂಚ್ಯಂಕ 132.80(ಶೇ.0.85) ಅಂಕ ಮೇಲೇರಿ 15,832.05 ಮಟ್ಟದಲ್ಲಿ ವಹಿವಾಟು ಮುಂದುವರಿಸಿದೆ. ಅದೇ ರೀತಿ ಸೆನ್ಸೆಕ್ಸ್ ಸೂಚ್ಯಂಕ 433.28(ಶೇ.0.82) ಅಂಕ ಮೇಲೇರಿ 53.161.28ನಲ್ಲಿ ವಹಿವಾಟು ಅಂತ್ಯಗೊಳಿಸಿತು.


ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ವೇತನದಲ್ಲಿ 40 ಸಾವಿರ ರೂ.ಗಳವರೆಗೆ ಹೆಚ್ಚಳ!


ಪೇಟಿಎಂ(ಶೇ.8.22), ಅದಾನಿ ಗ್ರೀನ್ ಎನರ್ಜಿ(ಶೇ.3.23), ಎಲ್ & ಟಿ ಇನ್ಫೋಟೆಕ್(ಶೇ.3.21) ಮತ್ತು ಕೋಲ್ ಇಂಡಿಯಾ(ಶೇ.3.12) ಸೋಮವಾರದ ಟಾಪ್ ಗೇನರ್‍ ಷೇರುಗಳಾದರೆ, ಜೊಮ್ಯಾಟೊ(ಶೇ.6.60), ಎಚ್‍ಡಿಎಫ್‍ಸಿ ಅಸೆಟ್ ಮ್ಯಾನೇಜ್‍ಮೆಂಟ್ ಕಂಪನಿ(ಶೇ.3.20), ಬಯೋಕಾನ್(ಶೇ.2.14) ಮತ್ತು ಚೋಳಮಂಡಲಂ ಇನ್‍ವೆಸ್ಟ್(ಶೇ.2.08)ರಷ್ಟು ಕುಸಿತ ಕಂಡು ಟಾಪ್ ಲೂಸರ್‍ಗಳಾದವು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ