Gold-Sliver Price: ಏರಿಕೆ ಕಂಡ ಹಳದಿಲೋಹದ ಬೆಲೆ: ಗ್ರಾಹಕರಿಗೆ ಬಿಸಿಮುಟ್ಟಿಸಿದ ಚಿನ್ನದ ದರ

ಆದರೆ ಬೆಳ್ಳಿ ದರದಲ್ಲಿ ಇಳಿಕೆ ಕಂಡಿದ್ದು, ಕೆಜಿ  ಬೆಳ್ಳಿಗೆ 200 ರೂ ಕಡಿತವಾಗಿದೆ. ಈ ಮೂಲಕ ಚಿನ್ನದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಬೆಳ್ಳಿ ಬೆಲೆ ಕುಸಿದಿರುವುದು ಕೊಂಚ ನೆಮ್ಮದಿ ತರಿಸಿದೆ. 

Written by - Bhavishya Shetty | Last Updated : Jun 26, 2022, 09:19 AM IST
  • ಇಂದಿನ ಚಿನ್ನ ಬೆಳ್ಳಿ ದರ ಇಲ್ಲಿದೆ
  • ಭಾರೀ ಏರಿಕೆಯಾಯು ಚಿನ್ನದ ಬೆಲೆ
  • ಕೊಂಚ ಇಳಿಕೆ ಕಂಡ ಬೆಳ್ಳಿ ದರ
Gold-Sliver Price: ಏರಿಕೆ ಕಂಡ ಹಳದಿಲೋಹದ ಬೆಲೆ: ಗ್ರಾಹಕರಿಗೆ ಬಿಸಿಮುಟ್ಟಿಸಿದ ಚಿನ್ನದ ದರ title=
Gold price

ಬೆಂಗಳೂರು: Gold Price Today : ಕಳೆದ ದಿನ ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿತ್ತು. ಆದರೆ ಇಂದು ಮತ್ತೆ ಏರಿಕೆಯಾಗಿದ್ದು, 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ ಹೆಚ್ಚಳವಾಗಿದೆ. ಇನ್ನು 10 ಗ್ರಾಂ 24 ಕ್ಯಾರೆಟ್‌ ಬಂಗಾರದ ಬೆಲೆಯಲ್ಲಿ 110 ರೂ. ಏರಿಕೆಯಾಗಿದೆ. ಈ ಹಿಂದೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಕಳೆದ ದಿನ ಇಳಿಕೆ ಕಂಡು ಗ್ರಾಹಕರಿಗೆ ರಿಲ್ಯಾಕ್ಸ್‌ ನೀಡಿತ್ತು. ಆದರೆ ಇಂದು ಮತ್ತೆ ಹೆಚ್ಚಳವಾದ ಬೆಲೆಯಿಂದ ಚಿನ್ನ ಪ್ರಿಯರಿಗೆ ಬೇಸರವನ್ನುಂಟು ಮಾಡಿದೆ. 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ  51,870 ರೂ ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,550 ರೂ. ಆಗಿದೆ. 

ಆದರೆ ಬೆಳ್ಳಿ ದರದಲ್ಲಿ ಇಳಿಕೆ ಕಂಡಿದ್ದು, ಕೆಜಿ  ಬೆಳ್ಳಿಗೆ 200 ರೂ ಕಡಿತವಾಗಿದೆ. ಈ ಮೂಲಕ ಚಿನ್ನದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಬೆಳ್ಳಿ ಬೆಲೆ ಕುಸಿದಿರುವುದು ಕೊಂಚ ನೆಮ್ಮದಿ ತರಿಸಿದೆ. 

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ 22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ
ಚೆನ್ನೈ 47,600 51,920
ಮುಂಬಯಿ 47,550 51,870
ದೆಹಲಿ 47,550 51,870
ಕೋಲ್ಕತ್ತಾ 47,550 51,870
ಬೆಂಗಳೂರು 47,550 51,870
ಹೈದರಾಬಾದ್ 47,550 51,870
ಕೇರಳ 47,550 51,870

ಬೆಳ್ಳಿ ಬೆಲೆಯಲ್ಲಿ ಮಾತ್ರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.  ಒಂದೇ ದಿನಕ್ಕೆ ಬೆಳ್ಳಿ ಬೆಲೆ 4,000 ರೂ. ಯಷ್ಟು ಹೆಚ್ಚಳವಾಗಿದೆ. 

ನಗರ ಇಂದಿನ ಬೆಳ್ಳಿ ದರ
ಚೆನ್ನೈ 65,700
ಮುಂಬಯಿ 59,800
ಕೋಲ್ಕತ್ತಾ 59,800
ಬೆಂಗಳೂರು 65,700
ಬೆಂಗಳೂರು 65,700
ಬೆಂಗಳೂರು 65,700

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News