Hubli Krupa Jain In UPSC Exam: ದೇಶದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಾವುದೇ ಕೋಚಿಂಗ್ ಸಹಾಯವಿಲ್ಲದೇ ಸ್ವಂತ ಪರಿಶ್ರಮದಿಂದಲೇ ಹುಬ್ಬಳ್ಳಿಯ ಯುವತಿಯೊಬ್ಬರು 440 ನೇ ರ್ಯಾಂಕ್ ಪಡೆಯುವ ಮೂಲಕ ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಹುಬ್ಬಳ್ಳಿಯ ಅಭಯ ಜೈನ್ ಹಾಗೂ ಇಂದಿರಾ ಜೈನ್ ಅವರ ಪುತ್ರಿ ಕೃಪಾ ಎ ಜೈನ್‌ (Krupa A Jain) ಎಂಬುವವರೇ ಯು.ಪಿ.ಎಸ್.ಸಿಯಲ್ಲಿ 440 ನೇ ರ್ಯಾಂಕ್ ಪಡೆದ ಸಾಧಕಿ. 


ಕಿರಾಣಿ ವರ್ತಕರ ಮಗಳಾದ ಕೃಪಾ ಜೈನ್  ಓದಿರುವುದು ಇಂಜಿನಿಯರಿಂಗ್ (Engineering) ಆಗಿದ್ದರೂ ಸಿವಿಲ್ ಸರ್ವೀಸ್  (Civil Service) ಮಾಡಬೇಕು ಎಂಬುವಂತ ಮಹದಾಸೆಯಲ್ಲಿಯೇ ಸತತ ಪರಿಶ್ರಮದಿಂದ ತಾವು ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಓದುವುದನ್ನೇ ಫ್ಯಾಷನ್ ಆಗಿಸಿಕೊಂಡ ಯುವತಿ ಈಗ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ್ ಪಡೆಯುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ.


ಇದನ್ನೂ ಓದಿ- UPSC Civil Services Result: ಕನ್ನಡದಲ್ಲಿ‌ UPSC ಪರೀಕ್ಷೆ ಬರೆದು ಯಶಸ್ಸು ಕಂಡ PSI ಶಾಂತಪ್ಪ!


ಇನ್ನೂ ಬೆಂಗಳೂರಿನಲ್ಲಿ ಆರ್.ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿ ಬೆಂಗಳೂರಿನ ಸಿಸ್ಕೋ ಕಂಪನಿಯಲ್ಲಿ ಕೆಲಸ ನಿರ್ವಹಿಸಿ 2020ರಲ್ಲಿ ಯು.ಪಿ.ಎಸ್.ಸಿ (UPSC) ಮಾಡಲೇಬೇಕು ಎಂದು ಛಲತೊಟ್ಟು ದೆಹಲಿಗೆ ತೆರಳಿ ಯಾವುದೇ ಕೋಚಿಂಗ್ ಇಲ್ಲದೆಯೇ ಸ್ವಂತ ಪರಿಶ್ರಮ, ನಿರಂತರ ಪ್ರಯತ್ನದ ಮೂಲಕ ಈಗ ಮಹತ್ವದ ಸಾಧನೆ ಮಾಡಿದ್ದಾರೆ. 


ಕಳೆದ ವರ್ಷ ಯು ಪಿ ಎಸ್ ಸಿಯಲ್ಲಿ ರೈಲ್ವೆ ಜಾಬ್ ಆಗಿದ್ದರೂ ಕೂಡ ಮರಳಿ ಯತ್ನ ಮಾಡಿ ಈಗ 440ನೇ ರ್ಯಾಂಕ್ ಪಡೆದಿದ್ದಾರೆ‌. ಯುವತಿಯ ಸಾಧನೆಗೆ ಹೆತ್ತವರು ಹಾಗೂ ಕುಟುಂಬಸ್ಥರು ಖುಷಿಯನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ- UPSC Success Story: ಕೋಚಿಂಗ್ ಇಲ್ಲದೆ ಕೇವಲ 22ನೇ ವಯಸ್ಸಿನಲ್ಲಿ IAS ಆದ ಚಂದ್ರಜ್ಯೋತಿ ಸಿಂಗ್!


ಬೆಂಗಳೂರಿನಲ್ಲಿ ಆರ್.ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿ ಬೆಂಗಳೂರಿನ ಸಿಸ್ಕೋ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದ ಕೃಪಾ ಎ ಜೈನ್ 2020ರಲ್ಲಿ ಯು.ಪಿ.ಎಸ್.ಸಿ ಮಾಡಲೇಬೇಕು ಎಂದು ಛಲತೊಟ್ಟು ದೆಹಲಿಗೆ ತೆರಳಿ ಯಾವುದೇ ಕೋಚಿಂಗ್ ಇಲ್ಲದೆಯೇ ಸ್ವಂತ ಪರಿಶ್ರಮ, ನಿರಂತರ ಪ್ರಯತ್ನದ ಮೂಲಕ ಮಹತ್ವದ ಸಾಧನೆ ಮಾಡಿರುವ ಯುವಕಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.