ಕೋಚಿಂಗ್ ಇಲ್ಲದೆ 2 ಬಾರಿ UPSC ಯಶಸ್ಸು; 21ನೇ ವಯಸ್ಸಿನಲ್ಲಿ IPS, ನಂತರ IAS!

IAS Divya Tanwar Success Story: ಇಂದು ದಿವ್ಯಾ ತನ್ವಾರ್ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರು ನಿರಂತರವಾಗಿ ತನ್ನ ಸ್ನೇಹಿತರು ಮತ್ತು ಅನುಯಾಯಿಗಳೊಂದಿಗೆ ಅನೇಕ ವಿಷಯವನ್ನು ಹಂಚಿಕೊಳ್ಳುತ್ತಿರುತ್ತಾರೆ.

ಐಎಎಸ್ ದಿವ್ಯಾ ತನ್ವಾರ್ ಯಶೋಗಾಥೆ: ಐಎಎಸ್ ಅಧಿಕಾರಿ ದಿವ್ಯಾ ತನ್ವರ್ ತನ್ನ ತಂದೆಯನ್ನು ಬಹಳ ಬೇಗನೇ ಕಳೆದುಕೊಂಡರು. ಆದರೆ ಅವರ ತಾಯಿ ಅವರಿಗೆ ಸಾಕಷ್ಟು ಬೆಂಬಲ ನೀಡಿದರು. ಪರಿಣಾಮ ದಿವ್ಯಾ ಇಂದು ಐಎಎಸ್ ಅಧಿಕಾರಿಯಾಗಿದ್ದಾರೆ. ಕೋಚಿಂಗ್ ಇಲ್ಲದೆ 2 ಬಾರಿ ಯುಪಿಎಸ್‍ಸಿಯಲ್ಲಿ ಯಶಸ್ಸು ಪಡೆದುಕೊಂಡ ದಿವ್ಯಾ ಕೇವಲ 21ನೇ ವಯಸ್ಸಿನಲ್ಲಿ ಐಪಿಎಲ್ ಪಾಸ್ ಆಗಿದ್ದರು. ಬಳಿಕ ಮತ್ತೆ ಪ್ರಯತ್ನಿಸಿ ತಮ್ಮ ಐಎಎಸ್‍ ಕನಸನ್ನು ನನಸು ಮಾಡಿಕೊಂಡರು. ಇವರ ಯಶಸ್ಸಿನ ಕಥೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಪ್ರತಿಯೊಬ್ಬ ಅಭ್ಯರ್ಥಿಯ ಕನಸಾಗಿರುತ್ತದೆ. ಈ ಸವಾಲಿನ ಪರೀಕ್ಷೆಯಲ್ಲಿ ಕೆಲವೇ ಕೆಲವು ಜನರು ಯಶಸ್ವಿಯಾಗುತ್ತಾರೆ, ಆದರೆ ದಿವ್ಯಾ ತನ್ವರ್ ಈ ಪರೀಕ್ಷೆಯಲ್ಲಿ 2 ಬಾರಿ ಉತ್ತೀರ್ಣರಾಗಿ ಸರ್ಕಾರದಲ್ಲಿ ಗೌರವಾನ್ವಿತ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2 /5

ದಿವ್ಯಾ ತನ್ವಾರ್ 2021ರಲ್ಲಿ UPSC ಪರೀಕ್ಷೆ ತೆಗೆದುಕೊಂಡಾಗ, ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ 438ನೇ ರ್ಯಾಂಕ್ ಗಳಿಸಿದರು. ಕೇವಲ 21ನೇ ವಯಸ್ಸಿನಲ್ಲಿ ದಿವ್ಯಾ ದೇಶದ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಪಿಎಸ್ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದರು. ಈ ಪರೀಕ್ಷೆಗೆ ಅವರು ಯಾವುದೇ ಕೋಚಿಂಗ್ ತೆಗೆದುಕೊಂಡಿರಲಿಲ್ಲ. ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ತಾವೇ ಓದಿ ಯಶಸ್ಸು ಸಾಧಿಸಿದರು. ಆದರೆ ತಮ್ಮ ಕನಸಿನ ಐಎಎಸ್ ಪಾಸ್ ಮಾಡಲು ಅವರು ಮತ್ತೊಮ್ಮೆ ಪ್ರಯತ್ನಿಸಿದ್ದರು. 2022ರಲ್ಲಿಅಖಿಲ ಭಾರತ 105ನೇ ಶ್ರೇಯಾಂಕ ಪಡೆಯುವ ಮೂಲಕ IAS ಅಧಿಕಾರಿಯಾಗಿ ತಮ್ಮ ಕನಸು ನನಸು ಮಾಡಿಕೊಂಡರು.

3 /5

ದಿವ್ಯಾ ಹರಿಯಾಣದ ಮಹೇಂದ್ರಗಢ ನಿವಾಸಿ. ತಮ್ಮ ಆರಂಭಿಕ ಶಿಕ್ಷಣದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದ ದಿವ್ಯಾ, ಹೆಚ್ಚಿನ ಶಿಕ್ಷಣಕ್ಕಾಗಿ ಮಹೇಂದ್ರಗಢದ ನವೋದಯ ವಿದ್ಯಾಲಯಕ್ಕೆ ಸೇರಿದರು. ನಂತರ ದಿವ್ಯಾ ಅವರು ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದರು. ಬಳಿಕ ಅವರು UPSCಗೆ ತಯಾರಿ ಆರಂಭಿಸಿದರು. ಆದರೆ ಅವರ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ದಿವ್ಯಾರ ತಂದೆ 2011ರಲ್ಲಿ ನಿಧನರಾದರು, ಇದು ಅವರ ಕುಟುಂಬಕ್ಕೆ ಬಹಳ ಕಷ್ಟದ ಸಮಯವಾಗಿತ್ತು.

4 /5

ದಿವ್ಯಾರ ತಾಯಿ ಬಬಿತಾ ತನ್ವಾರ್ ಆಕೆಗೆ ತುಂಬಾ ಬೆಂಬಲ ನೀಡುತ್ತಿದ್ದರು. ಏಕೆಂದರೆ ದಿವ್ಯಾ ಅವರು ಬ್ರೈಟ್ ಸ್ಟೂಡೆಂಟ್ ಆಗಿದ್ದರು. ಯಾವುದೇ ತರಬೇತಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯದೆ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದರು. ನಂತರ UPSC ಮುಖ್ಯ ಪರೀಕ್ಷೆಗೆ ತಯಾರಾಗಲು ಅವರು ಪರೀಕ್ಷಾ ಸರಣಿ ಸೇರಿದಂತೆ ವಿವಿಧ ಆನ್‌ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡರು. ದಿವ್ಯಾರ ತಾಯಿ ಬಬಿತಾ ಒಂಟಿಯಾಗಿಯೇ ಮೂವರು ಒಡಹುಟ್ಟಿದವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದರು.

5 /5

ಇಂದು ದಿವ್ಯಾ ತನ್ವಾರ್ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರು ನಿರಂತರವಾಗಿ ತನ್ನ ಸ್ನೇಹಿತರು ಮತ್ತು ಅನುಯಾಯಿಗಳೊಂದಿಗೆ ಅನೇಕ ವಿಷಯವನ್ನು ಹಂಚಿಕೊಳ್ಳುತ್ತಿರುತ್ತಾರೆ. ಐಎಎಸ್ ಅಧಿಕಾರಿ ದಿವ್ಯಾ ತನ್ವಾರ್ ಪ್ರಸ್ತುತ 97,000ಕ್ಕೂ ಹೆಚ್ಚು Instagram ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.