ಬೆಂಗಳೂರು: ಪೊಲೀಸರು ಮನೆಗೆ ಬಂದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಇದು ‘Worst Country’ ಎಂದು ಟ್ವೀಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.


COMMERCIAL BREAK
SCROLL TO CONTINUE READING

ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನೀಲ್ಮಾ ದಿಲೀಪನ್ ಎಂಬಾಕೆ ಮನೆಯಲ್ಲಿ ಹೆಚ್ಚು ಸದ್ದು-ಗದ್ದಲ ಮಾಡುತ್ತಾಳೆಂದು ಆರೋಪಿಸಿ ಅಕ್ಕ ಪಕ್ಕದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ನೀಲ್ಮಾ ದಿಲೀಪನ್ ಮನೆಯವರ ನಡುವೆ ಜಟಾಪಟಿಯಾಗಿದೆ.


ಡಿ.ಕೆ.ಶಿವಕುಮಾರ್ ಹೇಳಿಕೆ ಅಪ್ರಭುದ್ಧತೆಯ ಪ್ರತೀಕ & ಪರಮ ಬಾಲಿಶ: ಎಚ್‌ಡಿಕೆ


ಘಟನೆಯಲ್ಲಿ ಹಲಸೂರು ಠಾಣೆ ಪೊಲೀಸ್ ಸಿಬ್ಬಂದಿ ಪೈಕಿ ಒಬ್ಬರು ಮನೆಯಲ್ಲಿದ್ದ ವ್ಯಕ್ತಿಯ ಕೊರಳು ಪಟ್ಟಿ ಹಿಡಿದು ಜಗಳವಾಡಿದ್ದಾರೆಂಬ ಆರೋಪವಿದೆ. ಈ ಜಟಾಪಟಿ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಈ ಹಿನ್ನೆಲೆ ಟ್ವೀಟ್ ಮಾಡಿರುವ ಮಹಿಳೆ ‘ನಾವು ಯಾವುದೇ Noise Pollution ಮಾಡಿಲ್ಲ. ಮನೆಯೊಳಗೆ ಟಿವಿ ಹಾಕಿದ್ದೇವಷ್ಟೆ, ಯಾರೋ ಕರೆ ಮಾಡಿ ಹೇಳಿದ ಕೂಡಲೇ ಸ್ಥಳಕ್ಕೆ ಬಂದು ಪೊಲೀಸರು ಅನುಚಿತವಾಗಿ ವರ್ತನೆ ಮಾಡ್ತಿದ್ದಾರೆ’ ಎಂದು ಆರೋಪಿಸಿದ್ದಾಳೆ.  


‘wr r not safe in my house' ಎಂದು ಬರೆದಿದ್ದಲ್ಲದೆ ‘Worst Country’ ಎಂದು ಮಹಿಳೆ ಟ್ವೀಟ್ ಮಾಡಿದ್ದಾಳೆ. ಏನಾದರೂ ತೊಂದರೆ ಆಗಿದ್ದರೆ ತಪ್ಪುಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕಾನೂನು ಮೂಲಕ ಹೋರಾಟ ಮಾಡಬೇಕು. ಅದು ಬಿಟ್ಟು ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ: ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಕ್ಯಾಮೆರಾದಲ್ಲಿ ಸೆರೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.