ಸುರಿದ ಭಾರೀ ಮಳೆಗೆ ಒಂದೇ ರಾತ್ರಿ 45 ಸಾವಿರ ಕೋಳಿಗಳ ಮಾರಣಹೋಮ

ತುಮಕೂರಲ್ಲಿ ನಿರಂತ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಅತಿಯಾಗಿ ಮಳೆಯಿಂದಾಗಿ, ಒಂದೇ ರಾತ್ರಿಯಲ್ಲಿ 45 ಸಾವಿರ ಕೋಳಿಗಳು ಸಾವನ್ನಪ್ಪಿವೆ.   

Written by - Ranjitha R K | Last Updated : Aug 9, 2022, 10:06 AM IST
  • ತುಮಕೂರಲ್ಲಿ ನಿರಂತ ಮಳೆಯಾಗುತ್ತಿದೆ.
  • ಕೋಳಿ ಶೆಡ್ ಗೆ ನುಗ್ಗಿದ ಮಳೆ ನೀರು
  • ಒಂದೇ ರಾತ್ರಿಯಲ್ಲಿ 45 ಸಾವಿರ ಕೋಳಿಗಳ ಸಾವು
ಸುರಿದ ಭಾರೀ ಮಳೆಗೆ ಒಂದೇ ರಾತ್ರಿ 45 ಸಾವಿರ ಕೋಳಿಗಳ ಮಾರಣಹೋಮ title=
rain damage

ತುಮಕೂರು : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆ ಆವಾಂತರದಿಂದ ನಷ್ಟ ಕೂಡಾ ಸಂಭಾವಿಸುತ್ತಿದೆ. ಎಲ್ಲಿ ನೋಡಿದರೂ ತಗ್ಗು  ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಬೆಲೆ ಹಾನಿಯಾಗುತ್ತಿದೆ. ಇದೀಗ ಮಳೆಯ ಪರಿಣಾಮ ತುಮಕೂರಿನಲ್ಲಿ  ಒಂದೇ ರಾತ್ರಿಗೆ 45ಸಾವಿರ ಕೋಳಿಗಳ ಮಾರಣಹೋಮವಾಗಿದೆ. 

ತುಮಕೂರಲ್ಲಿ ನಿರಂತರ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಅತಿಯಾದ ಮಳೆಯಿಂದಾಗಿ, ಒಂದೇ ರಾತ್ರಿಯಲ್ಲಿ 45 ಸಾವಿರ ಕೋಳಿಗಳು ಸಾವನ್ನಪ್ಪಿವೆ. ತುಮಕೂರು ತಾಲೂಕಿನ, ಹೆಬ್ಬೂರು ಹೋಬಳಿಯ ಯಾಲದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸುರಿಯುತ್ತಿರುವ ಭಾರೀ ಮಳೆಯ ಕಾರಣ ಮಳೆ ನೀರು ಕೋಳಿ ಶೆಡ್ ಗಳಿಗೆ ನುಗ್ಗಿದೆ. 

ಇದನ್ನೂ ಓದಿ : ಮೊಹರಂ ಹಬ್ಬದಲ್ಲೊಂದು ವಿಶಿಷ್ಟ ಆಚರಣೆ

ಕೋಳಿ ಶೆಡ್ ಗಳಿಗೆ ನೀರು ನುಗ್ಗಿದ ಪರಿಣಾಮ ಎಂಟು ಶೆಡ್ ಗಳಲ್ಲಿದ್ದ ಕೋಳಿಗಳು ಮೃತಪಟ್ಟಿವೆ. ಶೆಡ್ ಗೆ ನುಗ್ಗಿದ ಮಳೆ ನೀರು  ಕೋಳಿಗಳ ಮಾಲಿಕ ನಾರಾಯಣಪ್ಪ ಅವರ ಬದುಕನ್ನೇ ಕೊಚ್ಚಿ ಕೊಂಡು ಹೋಗಿದೆ. ಸಾಲ ಮಾಡಿ ಕೋಳಿ ಶೆಡ್ ನಿರ್ಮಾಣ ಮಾಡಿದ್ದ ನಾರಾಯಣಪ್ಪ ಇದೀಗ ಅಕ್ಷರಶಃ ಬೀದಿಗೆ ಬಂದಂತಾಗಿದೆ.  ಮಳೆ ಆವಾಂತರದಿಂದ ನಾರಾಯಣಪ್ಪ  ಅವರಿಗೆ ಸುಮಾರು 80 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 
 
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

ಇದನ್ನೂ ಓದಿ : Har Ghar Tiranga: ರಾಜ್ಯದ 1 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ- ಸಿಎಂ ಬೊಮ್ಮಾಯಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News