Bengaluru: ಕದ್ದ ಮೊಬೈಲ್ IMEI ನಂಬರ್ ಬದಲಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ!
IMEI Number Fraud: ಸಾವಿರಾರು ರೂ. ಬೆಲೆಬಾಳುವ ಮೊಬೈಲ್ ಗಳನ್ನು 50-100 ರೂ.ಗೆ IMEI ನಂಬರ್ ಬದಲಿಸಿ ಪೊಲೀಸರ ಟ್ರ್ಯಾಕಿಗೂ ಸಿಗದಂತೆ ಖತರ್ನಾಕ್ ಗ್ಯಾಂಗ್ ಕಳ್ಳಾಟವಾಡುತ್ತಿತ್ತು..
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ರಾಬರಿ ಮತ್ತು ಕಳ್ಳತನ ಪ್ರಕರಣಗಳು ಪೊಲೀಸರಿಗೆ ಸವಾಲಾಗಿತ್ತು. ಮೊಬೈಲ್ ಕಳ್ಳರನ್ನು ಬಂಧಿಸಿದರೂ ಸಹ ಕಳ್ಳತನವಾದ ಮೊಬೈಲ್‍ಗಳನ್ನು ರಿಕವರಿ ಮಾಡುವುದು ಖಾಕಿಪಡೆಗೆ ತಲೆನೋವಾಗತ್ತು. ಇದಕ್ಕೆ ಕಾರಣ ಐಎಂಇಎಂ ನಂಬರ್ ಸ್ವಾಪಿಂಗ್.
ಇದನ್ನೂ ಓದಿ: ರಾಜಧಾನಿಯಲ್ಲಿ ಡ್ರಗ್ ಪೆಡ್ಲಿಂಗ್ : ಈ ವರ್ಷವೂ ವಿದೇಶಿಯರದ್ದೆ ಸಿಂಹಪಾಲು..!
ಹೌದು, ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ ಮಾಡುವ ಗ್ಯಾಂಗ್ ಎಷ್ಟಿದ್ಯೋ ಅಷ್ಟೇ ದೊಡ್ಡ ಮಟ್ಟದಲ್ಲಿ ಐಎಂಇಎಂ ನಂಬರ್ ಸ್ವಾಪ್ ಮಾಡುವ ಖತರ್ನಾಕ್‍ಗಳು ಸಹ ಇದ್ದಾರೆ. ಸಾವಿರಾರು ರೂ. ಬೆಲೆಬಾಳುವ ಮೊಬೈಲ್ ಗಳನ್ನು 50-100 ರೂ.ಗೆ ಐಎಂಇಐ ನಂಬರ್ ಬದಲಿಸಿ ಪೊಲೀಸರ ಟ್ರ್ಯಾಕಿಗೂ ಸಿಗದಂತೆ ಕಳ್ಳಾಟವಾಡುತ್ತಿದ್ದಾರೆ. ಸದ್ಯ ಇಂತಹದೊಂದು ಖತರ್ನಾಕ್ ಗ್ಯಾಂಗ್‍ಅನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ಮೌಲ್ಯದ 15 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಯ್ತು ಅತ್ಯಾಚಾರ, ಮನೆಗಳ್ಳತನ, ರಾಬರಿ: ಕಮ್ಮಿಯಾಯ್ತು ಸರಗಳ್ಳತನ, ಡಕಾಯಿತಿ ಕೇಸ್
ಇನ್ನೂ ಈ ಪ್ರಕರಣದಲ್ಲಿ ಮೊಬೈಲ್ ಸುಲಿಗೆಕೋರರಾದ ಅಜೀತ್ ಅಲಿಯಾಸ್ ಬ್ರೂಟ್ ಮತ್ತು ಗೋಪಿ ಎಂಬಾತನನ್ನು ಬಂಧಿಸಲಾಗಿದೆ. ಈ ಖದೀಮರು ಕದ್ದ ಮೊಬೈಲ್ ಗಳಿಗೆ ಸುಲಭವಾಗಿ ಐಎಂಇಐ ನಂಬರ್ ಸ್ವಾಪ್ ಮಾಡಿಕೊಡುತ್ತಿದ್ದ ಮೊಬೈಲ್ ಶಾಪ್‍ನ ಶಾಹೀಲ್ ಎಂಬಾತನನ್ನು ಸಹ ಅರೆಸ್ಟ್ ಮಾಡಲಾಗಿದೆ. ಜೊತೆಗೆ ಐಎಂಇಐ ನಂಬರ್ ಸ್ವಾಪ್ ಮಾಡಲು ಬಳಸುತ್ತಿದ್ದ ಕಂಪ್ಯೂಟರ್‍ಅನ್ನು ಕೂಡ ಖಾಕಿ ಸೀಜ್ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.