NEW YEAR ಗೆ ಬ್ರಿಗೇಡ್ ರೋಡ್ ಸಜ್ಜು: ಭದ್ರತೆ ಪರಿಶೀಲಿಸಿದ ಕಮಿಷನರ್

ನೂತನ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರದ ಎಂಜಿ ರಸ್ತೆ,ಬ್ರಿಗೇಡ್ ರಸ್ತೆ ಹೊಸವರ್ಷದ ಸ್ವಾಗತಕ್ಕೆ ಸಜ್ಜಾಗಿದೆ. ನಗರದಲ್ಲಿ ಈ ರಸ್ತೆಗಳಲ್ಲಿ ಅತೀ ಹೆಚ್ಚು ಜನ ಸೇರುವ ಹಿನ್ನೆಲೆ ಪೊಲೀಸರು ಸಹ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Dec 28, 2022, 01:28 PM IST
NEW YEAR ಗೆ ಬ್ರಿಗೇಡ್ ರೋಡ್ ಸಜ್ಜು: ಭದ್ರತೆ ಪರಿಶೀಲಿಸಿದ ಕಮಿಷನರ್  title=

ಬೆಂಗಳೂರು: ನೂತನ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರದ ಎಂಜಿ ರಸ್ತೆ,ಬ್ರಿಗೇಡ್ ರಸ್ತೆ ಹೊಸವರ್ಷದ ಸ್ವಾಗತಕ್ಕೆ ಸಜ್ಜಾಗಿದೆ. ನಗರದಲ್ಲಿ ಈ ರಸ್ತೆಗಳಲ್ಲಿ ಅತೀ ಹೆಚ್ಚು ಜನ ಸೇರುವ ಹಿನ್ನೆಲೆ ಪೊಲೀಸರು ಸಹ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಅಶಾಂತಿ ಮೂಡಿಸಲು ಬಿಜೆಪಿ ಆಡುತ್ತಿರುವ ನಾಟಕ: ಡಿ ಕೆ ಶಿವಕುಮಾರ್

ಕಳೆದ ಎರಡು ವರ್ಷ ಕೊವಿಡ್ ಹಿನ್ನೆಲೆ ಕಳೆಗುಂದಿದ್ದ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ ಹೊಸ ವರ್ಷದ ಸಂಭ್ರಮಾಚರಣೆ ಈ ವರ್ಷ ಮತ್ತೆ ರಂಗು ಪಡೆಯಲಿದೆ. ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕೂಡ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಇಂದು ಬ್ರಿಗೇಡ್, ಎಂಜಿ ರಸ್ತೆಗೆ ವಿಸಿಟ್ ಕೊಟ್ಟ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ , ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ , ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ನ್ಯೂಇಯರ್ ಸೆಲೆಬ್ರೇಷನ್ ಹಾಟ್ ಸ್ಪಾಟ್ ಗಳಿಗೆ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಕಾರು ಅಪಘಾತ: ಮೋದಿ ಸಹೋದರನ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು

ಕಿರಿಯ ಅಧಿಕಾರಿಗಳಿಗೆ ಅಗತ್ಯ ಭದ್ರತೆ, ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದ್ದೂ, ಇಗಾಗಲೇ ಯಾವೆಲ್ಲ ಪಾಯಿಂಟ್ ನಲ್ಲಿ ಪೊಲೀಸರನ್ನು ನಿಯೋಜನೆ ಮಾಡಿಸಿ ಕ್ಯಾಮರಾಗಳ ಜೊತೆ ಡ್ರೋನ್ ಗಳನ್ನು ಬಳಕೆ ಮಾಡಿ ಮಕ್ಕಳು ಹಾಗೂ ಹೆಣ್ಣು ಮಕ್ಕಳ ಭದ್ರತೆ ಕುರಿತು ನಿಗಾವಹಿಸುತ್ತಿದ್ದಾರೆ.ಪಬ್ ರೆಸ್ಟೋರೆಂಟ್ ಹಾಗೂ ಬಾರ್ ನವರು ಇನ್ನಷ್ಟು ಸಿಸಿ ಕ್ಯಾಮರಾಗಳನ್ನು ಹಾಕಲು ಕಟ್ಟಪ್ಪಣೆಯಾಗಿದ್ದು,ಈಗಾಗಲೇ ಎಲ್ಲಾ ಪಬ್ ಹಾಗೂ ರೆಸ್ಟೋರೆಂಟ್ ಗಳನ್ನು ಪರಿಶೀಲನೆ ನಡೆಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News