ರಾಜಧಾನಿಯಲ್ಲಿ ಡ್ರಗ್ ಪೆಡ್ಲಿಂಗ್ : ಈ ವರ್ಷವೂ ವಿದೇಶಿಯರದ್ದೆ ಸಿಂಹಪಾಲು..!

ಈ ವರ್ಷದ ಕ್ರೈಂ ಲೋಕದಲ್ಲಿ ಸ್ಟೂಡೆಂಟ್, ಬಿಸಿನೆಸ್ ಸೇರಿ ವಿವಿಧ ವೀಸಾದಡಿ ಭಾರತಕ್ಕೆ ಬರುವ ವಿದೇಶಿಯರು ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ‌ ಭಾಗಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ಜೊತೆಗೆ ಸೈಬರ್ ಕ್ರೈಂ, ಗಡುವು ಮೀರಿ ಅಕ್ರಮ ವಾಸ ಸೇರಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ 11 ತಿಂಗಳಲ್ಲಿ 3398 ಕೇಸ್ ಗಳಲ್ಲಿ 4480 ಆರೋಪಿಗಳನ್ನ ಬಂಧಿಸಲಾಗಿದೆ. 

Written by - VISHWANATH HARIHARA | Edited by - Krishna N K | Last Updated : Dec 28, 2022, 02:44 PM IST
  • ಈ ವರ್ಷದ ಕ್ರೈಂ ಲೋಕದಲ್ಲಿ ವಿದೇಶಿಯರು ಡ್ರಗ್ಸ್ ಪ್ರಕರಣ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ‌ ಭಾಗಿಯಾಗುವವರ ಸಂಖ್ಯೆ ಹೆಚ್ಚಾಗಿದೆ.
  • ಕಳೆದ 11 ತಿಂಗಳಲ್ಲಿ 3398 ಕೇಸ್ ಗಳಲ್ಲಿ 4480 ಆರೋಪಿಗಳನ್ನ ಬಂಧಿಸಲಾಗಿದೆ.
  • ಸಿಲಿಕಾನ್ ಸಿಟಿಯಲ್ಲಿದ್ದವರ ಪೈಕಿ 601 ಮಂದಿ ಪೈಕಿ 467 ಅಕ್ರಮವಾಗಿ ಅಫ್ರಿಕಾದ ಮೂಲದವರೇ ಹೆಚ್ಚಾಗಿದ್ದಾರೆ.
ರಾಜಧಾನಿಯಲ್ಲಿ ಡ್ರಗ್ ಪೆಡ್ಲಿಂಗ್ : ಈ ವರ್ಷವೂ ವಿದೇಶಿಯರದ್ದೆ ಸಿಂಹಪಾಲು..! title=

ಬೆಂಗಳೂರು: ಈ ವರ್ಷದ ಕ್ರೈಂ ಲೋಕದಲ್ಲಿ ಸ್ಟೂಡೆಂಟ್, ಬಿಸಿನೆಸ್ ಸೇರಿ ವಿವಿಧ ವೀಸಾದಡಿ ಭಾರತಕ್ಕೆ ಬರುವ ವಿದೇಶಿಯರು ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ‌ ಭಾಗಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ಜೊತೆಗೆ ಸೈಬರ್ ಕ್ರೈಂ, ಗಡುವು ಮೀರಿ ಅಕ್ರಮ ವಾಸ ಸೇರಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ 11 ತಿಂಗಳಲ್ಲಿ 3398 ಕೇಸ್ ಗಳಲ್ಲಿ 4480 ಆರೋಪಿಗಳನ್ನ ಬಂಧಿಸಲಾಗಿದೆ. 

ಟೂರಿಸ್ಟ್, ಮೆಡಿಕಲ್ ವೀಸಾ, ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬರುವ ಅನ್ಯದೇಶದವರು ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಸಿಲಿಕಾನ್ ಸಿಟಿಯಲ್ಲಿದ್ದವರ ಪೈಕಿ 601 ಮಂದಿ ಪೈಕಿ 467 ಅಕ್ರಮವಾಗಿ ಅಫ್ರಿಕಾದ ಮೂಲದವರೇ ಹೆಚ್ಚಾಗಿದ್ದಾರೆ. ಈ ಪೈಕಿ ನೈಜೀರಿಯಾ 120 ಮಂದಿ, ಕಾಂಗೋ 91, ಸುಡಾನ್ 77 ಯೆಮನ್ 59, ಉಗಾಂಡ 25 ಮಂದಿ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳು ಕಾನೂನುಬಾಹಿರವಾಗಿ ಇದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಳೆದ‌ ಮೂರು ವರ್ಷಗಳಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ 571 ವಿದೇಶಿಯರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿೃವೃದ್ಧಿಗೆ ದೇಶಪಾಂಡೆ ಕೊಡುಗೆ ಅಮೂಲ್ಯ -ಸಿಎಂ ಬೊಮ್ಮಾಯಿ

ಪೂರ್ವ ಅಫ್ರಿಕಾದ ಕೆಲ ದೇಶಗಳಲ್ಲಿ ಗಾಂಜಾ ಸೇರಿದಂತೆ ವಿವಿಧ ರೀತಿಯ ಮಾದಕ ವಸ್ತು ಸೇವನೆ‌ ಹಾಗೂ ಮಾರಾಟ ಸಾಮಾನ್ಯವಾಗಿದೆ. ಡ್ರಗ್ಸ್ ಚಟ ಅಂಟಿಸಿಕೊಂಡೇ ವಿವಿಧ ಕಾರಣಗಳಿಗಾಗಿ‌ ಬಂದು ವಿದೇಶಿಯರು ಇಲ್ಲಿನ‌ ಕಾನೂನಿಗೆ ತಲೆಬಾಗದೆ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿ ನೆಲಮಂಗಲದ ಸೋಲೂರಿನಲ್ಲಿರುವ ವಿದೇಶಿಯರ ಗಡಿಪಾರು ಕೇಂದ್ರಕ್ಕೆ ಬಿಟ್ಟು ಎಫ್‌ಆರ್‌ಆರ್‌ಓ ಅಧಿಕಾರಿಗಳ ಮುಖಾಂತರ ಕಾನೂನಾತ್ಮಕವಾಗಿ ದೇಶದಿಂದ ಗಡಿಪಾರು‌ ಮಾಡಿದರೆ ಮತ್ತೊಂದೆಡೆ ಅಕ್ರಮವಾಗಿ ಇಲ್ಲೇ ಇರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

11 ತಿಂಗಳಲ್ಲಿ 3374 ಕೆ.ಜಿ. ಗಾಂಜಾ ಜಪ್ತಿ : ಒಡಿಶಾ, ತೆಲಂಗಾಣ, ಆಂಧ್ರಪದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ‌ ಬೆಂಗಳೂರಿಗೆ ಬರುತ್ತಿರುವ ಮಾದಕವಸ್ತುಗಳಲ್ಲಿ ಗಾಂಜಾವೇ ಪ್ರಮುಖವಾಗಿದೆ.  ಕಳೆದ 11 ತಿಂಗಳಲ್ಲಿ 3374 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದ್ದು,ಕಳೆದ ವರ್ಷ 3604 ಕೆ.ಜಿ ಜಪ್ತಿ ಮಾಡಿಕೊಳ್ಳಲಾಗಿತ್ತು. ಈ ವರ್ಷ 39 ಕೆಜಿ ಎಂಡಿಎಂಎ‌ ಜಪ್ತಿ‌ಮಾಡಿಕೊಂಡರೆ 2021ರಲ್ಲಿ 19‌ ಕೆ.ಜಿ ವಶಪಡಿಸಿಕೊಳ್ಳಲಾಗಿತ್ತು. ಜಪ್ತಿಯಾದ ಎಂಡಿಎಂಎ ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ‌ ಈ ವರ್ಷಕ್ಕೆ ಅಧಿಕ‌‌ ಪ್ರಮಾಣದಲ್ಲಿ ಎಂಡಿಎಂ‌ಎ ಜಪ್ತಿ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ವಯಸ್ಸು ಎಷ್ಟು? ಸದನದಲ್ಲಿ ಜನ್ಮಪತ್ರದ ಸ್ವಾರಸ್ಯಕರ ಚರ್ಚೆ!

ಗಾಂಜಾ, ಎಂಡಿಎಂಎ‌, ಆ್ಯಷ್ ಆಯಿಲ್‌ ಸೇರಿದಂತೆ ಒಟ್ಟು 77 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ‌ಮಾಡಿಕೊಳ್ಳಲಾಗಿದೆ‌. ಒಟ್ಟಿನಲ್ಲಿ ವಿದೇಶಿಯರಿಂದಲೇ ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಘಮಲು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆಗೆ ಪ್ರತಿ ಬಾರಿಯೂ ಇದು ತಲೆ ನೋವಾಗಿದೆ. ಕೆಲ ಕಡೆ ಡ್ರಗ್ ಸೇವಿಸಿದ ಮತ್ತಲ್ಲಿ ಸಾರ್ವಜನಿರು ಹಾಗೂ ಪೊಲೀಸರ ಜೊತೆ ವಿದೇಶಿಯರು ಕಿರಿಕ್ ಮಾಡಿಕೊಳ್ಳುತ್ತಾರೆ. ಇಂತವರನ್ನು ನಿಯಂತ್ರಿಸಲು ಕಠಿಣ ಕಾನೂನಿನ ಅನಿವಾರ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News