ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾತ್ರಿ ವೇಳೆ ಮನೆಗಳ್ಳತನ, ರಾಬರಿ, ರೇಪ್ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ ಸಮಾಧಾನಕಾರಿ ಸಂಗತಿ ಎಂದರೆ ಸರಗಳ್ಳತನ, ಡಕಾಯಿತಿಗೆ ಸಂಚು ಪ್ರಕರಣಗಳು ಇಳಿಕೆಯಾಗಿವೆ. ಕಳೆದ 11 ತಿಂಗಳಲ್ಲಿ ಬೆಂಗಳೂರಿನಲ್ಲಿಯೇ 145 ಆತ್ಯಾಚಾರ ಪ್ರಕರಣ ದಾಖಲಾಗಿವೆ. 2021ರಲ್ಲಿ 116 ಪ್ರಕರಣಗಳು ನಡೆದಿದ್ದು, ಪರಿಚಯಸ್ಥರಿಂದಲೇ ಆತ್ಯಾಚಾರ ನಡೆದಿವೆ ಎಂದು ಪೊಲೀಸ್ ವರದಿಗಳು ಹೇಳಿವೆ.
ಅಕ್ರಮ ಸಂಬಂಧ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿರುವರರ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರ ಮೇಲಿನ ಕಾಮುಕರ ಅಟ್ಟಹಾಸ ಹೆಚ್ಚಳವಾಗಿದ್ದು, ಈ ವರ್ಷ 539 ಕೇಸ್ ದಾಖಲಾಗಿವೆ. ಕಳೆದ ವರ್ಷ 422 ಪ್ರಕರಣಗಳು ದಾಖಲಾಗಿದ್ದವು. ಇನ್ನೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಈ ವರ್ಷ ಏರಿಕೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ವರ್ಷ 408 ಪ್ರಕರಣ ದಾಖಲಾದರೆ ಈ ಪೈಕಿ 395 ಕೇಸ್ ಗಳನ್ನ ಬೇಧಿಸಲಾಗಿದೆ.
ಇದನ್ನೂ ಓದಿ:ನೂರಕ್ಕೂ ಅಧಿಕ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಮುಂದಾದ ರಾಜ್ಯ ಸರ್ಕಾರ
2021 ರಲ್ಲಿ 399 ಪೋಸ್ಕೊ ಕೇಸ್ಗಳು ದಾಖಲಾಗಿದ್ದವು. ಇನ್ನೂ ರಾತ್ರಿ ವೇಳೆ ಮನೆಗಳ್ಳತನ ಹೆಚ್ಚಾಗಿದ್ದು, ಒಂಟಿ ಮನೆ ಅಥವಾ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಖದೀಮರು ಕೈಚಳಕ ತೋರಿದ್ದಾರೆ. ಪೊಲೀಸ್ ಗಸ್ತು ಹೆಚ್ಚಿಸಿದರೂ ಸಹ ಖತರ್ನಾಕ್ಗಳು ಮಾತ್ರ ಅಂದುಕೊಂಡ ಕೆಲಸವನ್ನ ಸಲೀಸಾಗಿ ಮಾಡುತ್ತಿದ್ದಾರೆ. ನವೆಂಬರ್ 31ಕ್ಕೆ ಮುಗಿದ ವೇಳೆಗೆ ನಗರದಲ್ಲಿ 635 ರಾತ್ರಿ ಕನ್ನಕಳವು ಪ್ರಕರಣ ದಾಖಲಾಗಿವೆ. ಈ ಪೈಕಿ 213 ಕೇಸ್ಗಳಲ್ಲಿ ಮಾತ್ರ ಚೋರರನ್ನ ಪೊಲೀಸರು ಪತ್ತೆಹಚ್ಚಿದ್ದಾರೆ. 2021ರಲ್ಲಿ ದಾಖಲಾಗಿದ್ದ 654 ಕೇಸ್ ಗಳಲ್ಲಿ 354 ಕೇಸ್ ಗಳಿಗೆ ಮಾತ್ರ ಪೊಲೀಸರು ಅಂತ್ಯವಾಡಿದ್ದಾರೆ.
ಇನ್ನೂ ಕೊರೊನಾ ಕಾಣಿಸಿಕೊಂಡ ವರ್ಷವಾದ 2020ನೇ ಸಾಲಿನಲ್ಲಿ ಖದೀಮರು 780 ಕೇಸ್ ಗಳಲ್ಲಿ ತಮ್ಮ ಕಿಲಾಡಿತನ ತೋರಿದ್ದರು. ವ್ಯವಸ್ಥಿತವಾಗಿ ಸಂಚು ರೂಪಿಸಿ ಎಸಗುವ ದರೋಡೆ ಪ್ರಕರಣಗಳು ಈ ವರ್ಷ ಕೊಂಚ ಅಧಿಕವಾಗಿವೆ. ಈ ವರ್ಷ 415 ಕೇಸ್ ದಾಖಲಾದರೆ, 2021 ರಲ್ಲಿ 364 ಪ್ರಕರಣಗಳು ವರದಿಯಾಗಿತ್ತು. ಸರಗಳ್ಳತನ,ಡಕಾಯಿತಿ ಕೇಸ್ ಗಳು ಕಡಿಮೆಯಾಗಿದ್ದು, ವಾಕಿಂಗ್ ಹೋಗುವ ವೃದ್ಧೆಯರು ಹಾಗೂ ಗೃಹಿಣಿಯರನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದು ಸರಗಳ್ಳತನ ಮಾಡುವ ಅಪರಾಧಗಳಿಗೆ ಪೊಲೀಸರು ತಕ್ಕಮಟ್ಟಿಗೆ ಬ್ರೇಕ್ ಹಾಕಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಡ್ರಗ್ ಪೆಡ್ಲಿಂಗ್ : ಈ ವರ್ಷವೂ ವಿದೇಶಿಯರದ್ದೆ ಸಿಂಹಪಾಲು..!
ನಿರಂತರ ಜಾಗೃತಿ, ಜನರ ಮುಂಜಾಗ್ರತ ಕ್ರಮಗಳು ಸರಗಳ್ಳತನ ಹೆಚ್ಚಾದಂತೆ ಪೊಲೀಸರು ತಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ 143 ಸರಗಳ್ಳತನ ಕೇಸ್ ದಾಖಲಾದರೆ ಕಳೆದ ವರ್ಷ 166 ಕೇಸ್ ಗಳು ದಾಖಲಾಗಿದ್ದವು.ಕಳೆದ ವರ್ಷ 22 ಡಕಾಯಿತಿ ಪ್ರಕರಣ ದಾಖಲಾದರೆ, ಈ ವರ್ಷ 22 ಕೇಸ್ ಗಳು ವರದಿಯಾಗಿವೆ. ಅದೇ ರೀತಿ ಹಗಲು ಹೊತ್ತು ನಡೆಯುವ ಮನೆಗಳ್ಳತನ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಂಚ ಇಳಿಕೆಯಾಗಿವೆ. 2022 ರಲ್ಲಿ 170 ಹಾಗೂ 2021ರಲ್ಲಿ 294 ಪ್ರಕರಣಗಳು ದಾಖಲಾಗಿದ್ದವು. 67 ಕೋಟಿ ಮೌಲ್ಯದ ಸ್ವತ್ತನ್ನು ವಿವಿಧ ಕಳ್ಳತನ, ದರೋಡೆ, ಡಕಾಯಿತಿ, ಕೊಲೆ ವಂಚನೆ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದೆ.
ಎಲ್ಲಾ ರೀತಿಯ ಅಪರಾಧ ಪ್ರಕರಣಗಳಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ನಗ-ನಾಣ್ಯ ದೋಚಿರುವ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಕಳ್ಳತನವಾದ ವಸ್ತುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. 2022 ರಲ್ಲಿ ಆರೋಪಿಗಳ ಪಾಲಾಗಿದ್ದ 116 ಕೋಟಿ ಮೌಲ್ಯದ ಆಸ್ತಿ ಪೈಕಿ 67 ಕೋಟಿಯಷ್ಟು ಅಂದರೆ ಶೇ. 58 ಶೇಕಡುವರು ರಿಕವರಿ ಮಾಡಲಾಗಿದೆ. 2021 ರಲ್ಲಿ 118 ಕೋಟಿ ರೂ.ಪೈಕಿ 70 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಮಾತ್ರ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಅತ್ಯಾಚಾರ ಪ್ರಕರಣ, ಮನೆಗಳ್ಳತನ, ರಾಬರಿ ಹೆಚ್ಚಾಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇನ್ನೂ ಬೈಕ್ನಲ್ಲಿ ಬಂದು ಸರಗಳ್ಳತನ ಮಾಡುವವರ ಸಂಖ್ಯೆ ಡಕಾಯಿತಿ ಪ್ರಕರಣಗಳು ಕಡಿಮೆಯಾಗಿರುವುದು ಕೊಂಚ ನಿಟ್ಟೂಸಿರು ಬಿಡುವಂತೆ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.