ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಕಳೆದ ರಾತ್ರಿ ಇಡ್ಲಿ ವಿಚಾರಕ್ಕೆ ಎರಡು‌ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ನನಗೆ ಇಡ್ಲಿ ಬೇಗ ಕೊಡಬೇಕೆಂದು ದೇವನಹಳ್ಳಿ ಪುರಸಭೆ ಮುಂಭಾಗ ಗ್ಯಾಂಗ್ ವಾರ್ ನಡೆದಿದೆ. ದಿನೇಶ್ ಮತ್ತು ತನಜೀಂ ಎಂಬುವರ ಎರಡು ಗುಂಪಿನ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ತನಜೀಂಗೆ ಸೇರಿದ ಕಾರು ಜಖಂ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Crime News: ಕೇವಲ 9 ಸಾವಿರ ರೂ. ಸಾಲಕ್ಕೆ ಚಾಕುವಿನಿಂದ ಇರಿದು ಹತ್ಯೆ..!


ತನಜೀಂ ಚಾಕುವಿನಿಂದ ಇರಿದ ಎಂಬ ಕಾರಣಕ್ಕೆ ಕಾರು ಜಖಂ ಮಾಡಿದ ಆರೋಪ ಕೇಳಿಬಂದಿದೆ. ದಾಳಿಯಿಂದ ಕಾರಿನ ಗ್ಲಾಸ್‍ಗಳೆಲ್ಲಾ ಪುಡಿ ಪುಡಿಯಾಗಿವೆ.


ಇದನ್ನೂ ಓದಿ: ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ PSI ಮರುಪರೀಕ್ಷೆ ದಿನಾಂಕ ಪ್ರಕಟ: ಡಿಜಿ ಪ್ರವೀಣ್ ಸೂದ್


ಇತ್ತೀಚೆಗೆ ದೇವನಹಳ್ಳಿಯಲ್ಲಿ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈಶಾನ್ಯ ವಿಭಾಗಕ್ಕೆ ಡಿಸಿಪಿಯಾಗಿ ಖಡಕ್ ಅಧಿಕಾರಿ ಅನೂಪ್ ಶೆಟ್ಟಿ ಬಂದ ಮೇಲೂ ದೇವನಹಳ್ಳಿಯಲ್ಲಿ ಗಾಂಜಾ ಕಿರಿಕ್‍ಗಳು ನಿಂತಿಲ್ಲ. ಗಾಂಜಾ ಮತ್ತಿನಲ್ಲಿ ಸಣ್ಣ ಪುಟ್ಟ ವಿಚಾರಕ್ಕೂ ಪುಡಿ ರೌಡಿಗಳ ಗಲಾಟೆಗಳು ಹೆಚ್ಚಾಗುತ್ತಿವೆ. ಆದಷ್ಟು ಬೇಗ ಇದಕ್ಕೆ ಕಡಿವಾಣ ಹಾಕಬೇಕೆಂಬ ಆಗ್ರಹಗಳು ಕೇಳಿಬಂದಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.