ತನ್ನನ್ನು ನೋಡಿ ಬೊಗಳಿತು ಅಂತ ನಾಯಿಯನ್ನು ಗುಂಡಿಕ್ಕಿ ಕೊಂದ ಕ್ರೂರಿ..!

ನಾಯಿಗಳು ಜನರನ್ನು ಪೀಡಿಸುವುದು ಒಂದು ಕಡೆಯಾದರೆ, ನಾಯಿಗಳನ್ನು ಜನರು ಪೀಡಿಸುವುದು ಇನ್ನೊಂದು ಕಡೆ. ಇಲ್ಲೊಬ್ಬ ನಾಯಿ ತನ್ನನ್ನು ನೋಡಿ ಬೊಗಳ್ತಿದೆ ಅಂತ ಅದನ್ನು ಗುಂಡು ಹಾರಿಸಿ ಕೊಂದೇ ಬಿಟ್ಟಿದ್ದಾನೆ.

Written by - Zee Kannada News Desk | Edited by - Krishna N K | Last Updated : Sep 18, 2022, 06:49 PM IST
  • ನಾಯಿ ತನ್ನನ್ನು ನೋಡಿ ಬೊಗಳ್ತಿದೆ ಅಂತ ಅದನ್ನು ಗುಂಡು ಹಾರಿಸಿ ಕೊಂದ ಪಾಪಿ
  • ಬಂದೂಕು ನೋಡಿ ನಾಯಿ ಓಡಿದರೂ ಅಟ್ಟಾಡಿಸಿ ಕೊಂದು ಹಾಕಿದ್ದಾನೆ
  • ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತನ್ನನ್ನು ನೋಡಿ ಬೊಗಳಿತು ಅಂತ ನಾಯಿಯನ್ನು ಗುಂಡಿಕ್ಕಿ ಕೊಂದ ಕ್ರೂರಿ..! title=

ಬೆಂಗಳೂರು : ನಾಯಿಗಳು ಜನರನ್ನು ಪೀಡಿಸುವುದು ಒಂದು ಕಡೆಯಾದರೆ, ನಾಯಿಗಳನ್ನು ಜನರು ಪೀಡಿಸುವುದು ಇನ್ನೊಂದು ಕಡೆ. ಇಲ್ಲೊಬ್ಬ ನಾಯಿ ತನ್ನನ್ನು ನೋಡಿ ಬೊಗಳ್ತಿದೆ ಅಂತ ಅದನ್ನು ಗುಂಡು ಹಾರಿಸಿ ಕೊಂದೇ ಬಿಟ್ಟಿದ್ದಾನೆ.

ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಹರೀಶ್‌ ಎಂಬವರಿಗೆ ಸೇರಿದ ರಾಖಿ ಎಂಬ ನಾಯಿಯನ್ನು ಅದೇ ಗ್ರಾಮದ ಕೃಷ್ಣಪ್ಪ ಎಂಬಾತ ಕೊಂದು ಹಾಕಿದ್ದಾನೆ. ನಾಯಿ ಯಾವಾಗಲೂ ನನ್ನನ್ನು ನೋಡಿ ಬೊಗಳ್ತಾ ಇದೆ, ಬೆನ್ನಟ್ಟಿಕೊಂಡು ಬರುತ್ತದೆ, ಕಚ್ಚುತ್ತದೆ ಎನ್ನುವುದು ಕೃಷ್ಣಪ್ಪ ಕೊಲೆಗೆ ಕೊಡುವ ಕಾರಣ. ಶನಿವಾರವೂ ಅಷ್ಟೆ. ನಾಯಿ ತನ್ನನ್ನು ನೋಡಿ ಬೊಗಳಿದೆ ಎಂಬ ಕಾರಣ ಇಟ್ಟುಕೊಂಡ ಕೃಷ್ಣಪ್ಪ ಬಂದೂಕು ತಂದು ಗುಂಡು ಹಾರಿಸಿಯೇ ಬಿಟ್ಟಿದ್ದಾನೆ.

ಇದನ್ನೂ ಓದಿ: ʼತೆಲಂಗಾಣದಲ್ಲಿ 40 ಶೇ. ಸರ್ಕಾರ ಫ್ಲೆಕ್ಸ್ ಹಾಕಿರುವುದು ಒಂದು ವ್ಯವಸ್ಥಿತ ಷಡ್ಯಂತ್ರʼ

ಈತ ಬಂದೂಕು ಹಿಡಿದುಕೊಂಡು ಬಂದಿದ್ದನ್ನು ನೋಡಿ ನಾಯಿಯೇನೋ ಓಡಿದೆ. ಆದರೆ, ಕೃಷ್ಣಪ್ಪ ಅದನ್ನು ಅಟ್ಟಾಡಿಸಿ ಕೊಂದು ಹಾಕಿದ್ದಾನೆ ಎನ್ನಲಾಗಿದೆ. ನಾಯಿ ಮಾಲೀಕ ಹರೀಶ್‌ ಅವರು ಕೃಷ್ಣಪ್ಪನ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ‌ ದೂರು ನೀಡಿದ್ದಾರೆ. ಪ್ರಕರಣ ಎಷ್ಟು ಗಂಭೀರವಾಗಿದೆ ಎಂದರೆ ಕೇಸು ದಾಖಲಿಸಿಕೊಂಡ ಪೊಲೀಸರು ಹೊಲಕ್ಕೇ ಹೋಗಿದ್ದಾರೆ.

ನಾಯಿಗೆ ಎಲ್ಲೆಲ್ಲ ಗಾಯವಾಗಿದೆ ಎನ್ನುವುದನ್ನು ಗಮನಿಸಿದ್ದಾರೆ. ಜತೆಗೆ ನಾಯಿಯನ್ನು ಮಣ್ಣು ಮಾಡಿದ ಜಾಗಕ್ಕೂ ಹೋಗಿದ್ದಾರೆ. ನಾಯಿಗೆ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ. ಈ ನಡುವೆ, ಪೊಲೀಸರು ಏರ್‌ ಗನ್‌ನಿಂದ ಗುಂಡು ಹಾರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಅದರೆ, ಸಾಮಾನ್ಯವಾಗಿ ಏರ್‌ಗನ್‌ನಿಂದ ಹೊಡೆದರೆ ಸಾವು ಸಂಭವಿಸುವುದಿಲ್ಲ. ಹಾಗಿದ್ದರೆ, ನಾಡ ಕೋವಿಯಿಂದ ಗುಂಡು ಹಾರಿಸಲಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News