`ಉತ್ತಮ ಚಿಕಿತ್ಸೆ ಸಿಕ್ಕಿದಿದ್ದರೆ ನನ್ನನ್ನೂ ಬದುಕಿಸಬಹುದಿತ್ತು` ಸಾವಿಗೂ ಮುನ್ನ ಪೋಸ್ಟ್ ಹಾಕಿದ ನಟ
ಕರೋನಾ ವೈರಸ್ ಪಾಸಿಟಿವ್ ವರದಿ ಬಂದ ದಿನದಿಂದ ರಾಹುಲ್ ವೊಹ್ರಾ ಆರೋಗ್ಯ ನಿರಂತರವಾಗಿ ಕ್ಷೀಣಿಸುತ್ತಿತ್ತು. ತಮ್ಮ ಕರೋನಾ ವರದಿ ಪಾಸಿಟಿವ್ ಬಂದ ನಂತರ ರಾಹುಲ್, ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಸಹಾಯ ಕೋರಿದ್ದರು.
ನವದೆಹಲಿ : ಬಹಳ ದಿನಗಳವರೆಗೆ ಕರೋನಾ (Coronavirus) ಎಂಬ ರಕ್ಕಸನೊಂದಿಗೆ ಹೋರಾಟ ನಡೆಸುತ್ತಿದ್ದ ನಟ ರಾಹುಲ್ ವೊಹ್ರಾ (Rahul Vohra) ಕೊನೆಯುಸಿರೆಳೆದಿದ್ದಾರೆ. ಆದರೆ ಸಾವಿಗೂ ಮುನ್ನ ರಾಹುಲ್ ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು (Facebook post) ಹಾಕಿದ್ದಾರೆ. ಈ ಪೋಸ್ಟ್ ನಲ್ಲಿ ರಾಹುಲ್ ತಾನು ಬದುಕಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಉತ್ತಮ ಚಿಕಿತ್ಸೆ ಪಡೆಯುವ ಇಂಗಿತ ಹೊರ ಹಾಕಿದ್ದಾರೆ. ರಾಹುಲ್ ವೊಹ್ರಾ ಸಾವಿನ ಸುದ್ದಿಯನ್ನು ನಿರ್ದೇಶಕ ಅರವಿಂದ್ ಗೋಹರ್ ಖಚಿತಪಡಿಸಿದ್ದಾರೆ.
ಕರೋನಾ ವೈರಸ್ (Coronavirus) ಪಾಸಿಟಿವ್ ವರದಿ ಬಂದ ದಿನದಿಂದ ರಾಹುಲ್ ವೊಹ್ರಾ ಆರೋಗ್ಯ ನಿರಂತರವಾಗಿ ಕ್ಷೀಣಿಸುತ್ತಿತ್ತು. ತಮ್ಮ ಕರೋನಾ ವರದಿ ಪಾಸಿಟಿವ್ ಬಂದ ನಂತರ ರಾಹುಲ್, ಅವರು ಫೇಸ್‌ಬುಕ್‌ನಲ್ಲಿ (Facebook) ಪೋಸ್ಟ್ ಹಾಕುವ ಮೂಲಕ ಸಹಾಯ ಕೋರಿದ್ದರು. ನಾನು ಉತ್ತಮ ಚಿಕಿತ್ಸೆ ಪಡೆಯಲು ಬಯಸುವುದಾಗಿ ಹೇಳಿದ್ದರು. ಸಹಾಯಕ್ಕಾಗಿ ಪೋಸ್ಟ್ ಮಾಡಿದ ರಾಹುಲ್ ಅವರ ಆ ಪೋಸ್ಟ್ ಬಗ್ಗೆ ಮಾತನಾಡಿ, ನಂತರ ಅವರು ಅದರಲ್ಲಿ ಉತ್ತಮ ಚಿಕಿತ್ಸೆ ಪಡೆಯಬೇಕೆಂದು ನಾನು ಬಯಸುತ್ತೇನೆ ಎಂದು ಬರೆದಿದ್ದಾರೆ.
ಇದನ್ನೂ ಓದಿ : Kiccha Sudeep : ಮತ್ತೊಮ್ಮೆ ಕಲಾವಿದರ ಕುಟುಂಬಕ್ಕೆ ಸಹಾಯಾಸ್ತ ನೀಡಿದ ಕಿಚ್ಚ ಸುದೀಪ್..!
ಸಾಯುವುದಕ್ಕೂ ಮುನ್ನ ನಟ ಫೇಸ್‌ಬುಕ್‌ನಲ್ಲಿ ಪೋಸ್ಟ್ (Facebook post) ಹಾಕಿದ್ದಾರೆ. ಇದರಲ್ಲಿ ನನಗೂ ಉತ್ತಮ ಚಿಕಿತ್ಸೆ ಸಿಕ್ಕಿದ್ದಿದ್ದರೆ ನಾನೂ ಬದುಕುಳಿಯಬಹುದಿತ್ತು ಎಂದು ಬರೆದಿದ್ದಾರೆ. ಅಲ್ಲದೆ ಬಹಳ ಬೇಗನೇ ಮತ್ತೆ ಹುಟ್ಟಿ ಬರುತ್ತೇನೆ. ಒಳ್ಳೆ ಕೆಲಸ ಮಾಡುತ್ತೇನೆ ಎಂದೂ ಬರೆದಿದ್ದಾರೆ. ಅಲ್ಲದೆ, ಈಗ ಧೈರ್ಯ ಕಳೆದುಕೊಂಡಿದ್ದೇನೆ ಎಂದು ತಮ್ಮ ಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ ಮೂಲದ ರಾಹುಲ್, ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ (Digital Platform) ಜನಪ್ರಿಯ ಮುಖ. NETFLIX ಸರಣಿ ಅನ್ ಫ್ರೀಡಂನಲ್ಲಿ ರಾಹುಲ್ ನಟಿಸಿದ್ದಾರೆ. ಇದರಲ್ಲಿನ ರಾಹುಲ್ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದನ್ನೂ ಓದಿ : Television Association : ಲಾಕ್ ಡೌನ್ ಹಿನ್ನೆಲೆ ಸಿನಿಮಾ, ಬಿಗ್ ಬಾಸ್, ಸೀರಿಯಲ್ ಶೂಟಿಂಗ್ ಬಂದ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.