Kiccha Sudeep : ಮತ್ತೊಮ್ಮೆ ಕಲಾವಿದರ ಕುಟುಂಬಕ್ಕೆ ಸಹಾಯಾಸ್ತ ನೀಡಿದ ಕಿಚ್ಚ ಸುದೀಪ್..!

ನಟಿ ಸೋನು ಪಾಟೀಲ್ ಅವರ ತಾಯಿಯ ಚಿಕಿತ್ಸೆಗೆ ಸುದೀಪ್ ಸಹಾಯಾಸ್ತ

Last Updated : May 9, 2021, 12:10 PM IST
  • ಕಷ್ಟದಲ್ಲಿರುವ ಜನರಿಗಾಗಿ ಮಿಡಿಯುವ ನಟ ಕಿಚ್ಚ ಸುದೀಪ್
  • ನಟಿ ಸೋನು ಪಾಟೀಲ್ ಅವರ ತಾಯಿಯ ಚಿಕಿತ್ಸೆಗೆ ಸುದೀಪ್ ಸಹಾಯಾಸ್ತ
  • ಸುದೀಪ್ ಅವರು ಎರಡು ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದಾರೆ
Kiccha Sudeep : ಮತ್ತೊಮ್ಮೆ ಕಲಾವಿದರ ಕುಟುಂಬಕ್ಕೆ ಸಹಾಯಾಸ್ತ ನೀಡಿದ ಕಿಚ್ಚ ಸುದೀಪ್..! title=

ಬೆಂಗಳೂರು : ಕಷ್ಟದಲ್ಲಿರುವ ಜನರಿಗಾಗಿ ಮಿಡಿಯುವ ನಟ ಕಿಚ್ಚ ಸುದೀಪ್ ಇದೀಗ ಕಲಾವಿದೆಯ ಕುಟುಂಬಕ್ಕೆ ನೆರವಾಗಿದ್ದಾರೆ. ಬಿಗ್​​ಬಾಸ್ ಸೀಜನ್ 6ರ ಸ್ಪರ್ಧಿ ನಟಿ ಸೋನು ಪಾಟೀಲ್ ಅವರ ತಾಯಿಯ ಚಿಕಿತ್ಸೆಗೆ ಸುದೀಪ್ ಸಹಾಯಾಸ್ತ ಚಾಚಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ಸೋನು ಪಾಟೀಲ್(Sonu Patil)​ ಅವರ ತಾಯಿ ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದು ಲಕ್ಷಾಂತರ ಬಿಲ್ ಆಗಿದೆ. ಸದ್ಯ ಆರ್ಥಿಕ‌ ಸಂಕಷ್ಟದಲ್ಲಿರುವ ಸೋನುಗೆ ಸುದೀಪ್​ ಬೆಳಕಾಗಿದ್ದಾರೆ.

ಇದನ್ನೂ ಓದಿ :Television Association : ಲಾಕ್ ಡೌನ್ ಹಿನ್ನೆಲೆ ಸಿನಿಮಾ, ಬಿಗ್ ಬಾಸ್, ಸೀರಿಯಲ್ ಶೂಟಿಂಗ್ ಬಂದ್..!

ಸುದೀಪ್(Kiccha Sudeep)​ ಸರ್ ನೆರವಿನಿಂದ ನಮ್ಮ ತಾಯಿಯ ಜೀವ ಉಳಿದಿದೆ ಎಂದು ಸೋನು ಪಾಟೀಲ್​ ಕೃತಜ್ಞತೆ ಸಲ್ಲಿಸಿದ್ದಾರೆ. ಸೋನು ತಾಯಿಗೆ ಕೋವಿಡ್ ಲಕ್ಷಣಗಳಿದ್ದರೂ ಪಾಸಿಟಿವ್ ಬಂದಿಲ್ಲ. ಸ್ವಲ್ಪ ಉಸಿರಾಟದ ತೊಂದರೆ ಇದೆ.

ಇದನ್ನೂ ಓದಿ :Nora Fatehi- ಕ್ಯಾಮರಾ ಮುಂದೆಯೇ ಬದಲಾದ ನೋರಾ ಫತೇಹಿ ಬಟ್ಟೆ, ವಿಡಿಯೋ ವೈರಲ್

ಸುದೀಪ್ ಅವರು ಎರಡು ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದಾರೆ. ಕಿಚ್ಚ ಸುದೀಪ್​ ಚಾರಿಟೇಬಲ್ ಟ್ರಸ್ಟ್(Sudeep Charitable Trust) ನಿಂದ ಸಹಾಯ ಮಾಡಿದ್ದಾರೆ. ಹೀಗಾಗಿ ಸುದೀಪ್​ ಅವರಿಗೆ ನಾನು ಚಿರಋಣಿಯಾಗಿದ್ದೇನೆ. ನಾನು ಅನೇಕರ ಬಳಿ ಸಹಾಯ ಕೇಳಿದ್ದೆ. ಯಾರೂ ಸಹಾಯ ಮಾಡಲಿಲ್ಲ ಎಂದು ಸೋನು ಭಾವುಕರಾದರು.

ಇದನ್ನೂ ಓದಿ :Kangana Ranaut : ಬಾಲಿವುಡ್ ನಟಿ ಕಂಗನಾ ರನೌತ್ ಗೆ ಕೋವಿಡ್ ಪಾಸಿಟಿವ್..!

ಮೊದಲೇ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದೆ.‌ ಶೂಟಿಂಗ್ ನಿಂತಿದೆ. ಕೆಲಸವಿಲ್ಲದೇ ನನಗೆ ಲಕ್ಷಗಟ್ಟಲೆ ಹಣ(Money) ಹೊಂದಿಸುವುದಕ್ಕೆ ಕಷ್ಟ ಆಗಿತ್ತು. ಇಂತಹ ಸಂದಿಗ್ಧ ಸಮಯದಲ್ಲಿ ಸುದೀಪ್​ ಸರ್​ ಆಸರೆಯಾಗಿದ್ದಾರೆ. ಈಗ ನಮ್ಮ ತಾಯಿ ಹುಷಾರಾಗಿದ್ದಾರೆ ಎಂದು ಸೋನು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :Bollywood: ಸಿನಿ ಕಾರ್ಮಿಕರ ಸಹಾಯಕ್ಕೆ ಧಾವಿಸಿದ 'ಭಾಯಿಜಾನ್' Salman Khan, 25 ಸಾವಿರ ಕಾರ್ಮಿಕರ ಖಾತೆಗೆ ನೇರ ಹಣ ವರ್ಗಾವಣೆ

ಸೋನು ಪಾಟಿಲ್ ತಾಯಿ ಮಾದೇವಿ ಪಾಟೀಲ(53) ಮೇ 4 ರಂದು ಬಾಗಲಕೋಟೆ ಶಕುಂತಲಾ ಆಸ್ಪತ್ರೆ(Hospital)ಗೆ ದಾಖಲಾಗಿದ್ದಾರೆ. ಸೋನು ಪಾಟೀಲ ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದವರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News