ದಬಾಂಗ್ 3 ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?
ಪ್ರಸಿದ್ಧ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, ಪ್ರತಿಭಟನೆಯಿಂದಾಗಿ, ದಬಾಂಗ್ 3 ರ ವ್ಯವಹಾರಕ್ಕೆ ತೀವ್ರ ಪೆಟ್ಟು ಬಿದ್ದಿದೆ.
ನವದೆಹಲಿ: ದಬಾಂಗ್ 3 ಬಾಕ್ಸ್ ಆಫೀಸ್ ಕಲೆಕ್ಷನ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್(SALMAN KHAN) ಹಾಗೂ ಕನ್ನಡದ ಕಿಚ್ಚ ಸುದೀಪ್ ಅವರ ಅಭಿನಯದ ಇತ್ತೀಚಿನ ಬ್ಲಾಕ್ಬಸ್ಟರ್ ಚಿತ್ರ ಬಿಡುಗಡೆಯಾಗಿ ಎರಡು ದಿನಗಳ ಬಳಿಕ ದಬಾಂಗ್ 3 ರ ಗಳಿಕೆಗಳು ಈಗ ಹೊರಬಂದಿವೆ. ಪ್ರಸಿದ್ಧ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, ಪ್ರತಿಭಟನೆಯಿಂದಾಗಿ, ದಬಾಂಗ್ 3 ರ ವ್ಯವಹಾರಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇದರಿಂದಾಗಿ ಸಲ್ಮಾನ್ ಖಾನ್ ಅವರ ಚಿತ್ರ 2 ದಿನಗಳಲ್ಲಿ ಅಂದಾಜು 7.5 ಕೋಟಿ ರೂ.ಗಳಿಂದ 9 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ ಎಂದು ತರಣ್ ಆದರ್ಶ್ ಹೇಳಿದ್ದಾರೆ.
ದಬಾಂಗ್ 3 ಬಾಕ್ಸ್ ಆಫೀಸ್ ಸಂಗ್ರಹ ವಿವರಗಳು: -
ದಿನ 1: ಶುಕ್ರವಾರ 24.50 ಕೋಟಿ
ದಿನ 2: ಶನಿವಾರ 24.75 ಕೋಟಿ
ಒಟ್ಟು: 49.25 ಕೋಟಿ ರೂ.
ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಡಿಸೆಂಬರ್ 20 ರ ಶುಕ್ರವಾರ ವಿಶ್ವದಾದ್ಯಂತ ತೆರೆ ಕಂಡಿತು.
ಪ್ರಭುದೇವಾ ನಿರ್ದೇಶನದಡಿ ಮೂಡಿ ಬಂದಿರುವ ದಬಾಂಗ್ 3 (Dabangg3) ಚಿತ್ರದಲ್ಲಿ ಸಲ್ಮಾನ್ ಜೊತೆ ಸೋನಾಕ್ಷಿ ಸಿನ್ಹಾ, ಡಿಂಪಲ್ ಕಪಾಡಿಯಾ, ಸಯೀ ಮಾಂಜರೇಕರ್, ಅರಬಾಜ್ ಖಾನ್ ಹಾಗೂ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸದ್ಯ ಈ ಚಿತ್ರದ ಎರಡು ದಿನಗಳ ಕಲೆಕ್ಷನ್ ಪ್ರಕಟಗೊಂಡಿದ್ದು, ಪ್ರೇಕ್ಷಕರು ಈ ಚಿತ್ರವನ್ನು ತುಂಬಾ ಮೆಚ್ಚಿಕೊಂಡಿರುವುದು ಕಂಡುಬಂದಿದೆ.
ಭವ್ಯ ಬಿಡುಗಡೆಯ ಮೊದಲು, ಪ್ರಸಿದ್ಧ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ದಬಾಂಗ್ 3 ಅನ್ನು ವಿಮರ್ಶಿಸಿದ್ದಾರೆ. ಆದರ್ಶ್ ದಬಾಂಗ್‌ಗೆ 3.5 ಸ್ಟಾರ್ ಗಳನ್ನು ನೀಡಿದ್ದಾರೆ. ಆದರ್ಶ್ ತಮ್ಮ ಒನ್ ವರ್ಡ್ ರಿವ್ಯೂನಲ್ಲಿ, ದಬಾಂಗ್ 3 ಚಿತ್ರವನ್ನು ಎಂಟರ್‌ಟೈನಿಂಗ್ ಎಂದು ಹೇಳಿದ್ದಾರೆ.
ತರಣ್ ಆದರ್ಶ್ ಅವರ ಪ್ರಕಾರ, ಚುಲ್ಬುಲ್ ಪಾಂಡೆ ಪಾತ್ರದಲ್ಲಿ ಸಲ್ಮಾನ್ ಖಾನ್ ಮತ್ತೆ ಅಬ್ಬರದಿಂದ ಮರಳಿದ್ದಾರೆ ಮತ್ತು ದಬಾಂಗ್ 3 ಒಂದು ಔಟ್ ಸಲ್ಮಾನ್ ಖಾನ್ ಪ್ರದರ್ಶನವಾಗಿದೆ. ಇನ್ನು ಚಿತ್ರ ನಿರ್ದೇಶಕ ಪ್ರಭುದೇವ ಮಾಸ್ ಮತ್ತು ಮಸಾಲಾವನ್ನು ಕೇಂದ್ರೀಕರಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಕ್ಲೈಮ್ಯಾಕ್ಸ್ ಹೋರಾಟ ಭಯಂಕರವಾಗಿದೆ ಎಂದಿರುವ ಆದರ್ಶ್ ದಕ್ಷಿಣದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ (Kiccha Sudeep) ಅವರನ್ನು ದಬಾಂಗ್ ಫ್ರ್ಯಾಂಚೈಸ್‌ನ ಹೊಸ ಖಳನಾಯಕ ಎಂದು ಉಲ್ಲೇಖಿಸಿದ ಆದರ್ಶ್, "ಕಿಚ್ಚ ಸುದೀಪಾ ಅಭಿನಯವಾಗಿದೆ" ಎಂದು ಕಿಚ್ಚ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ.