ಬೆಂಗಳೂರು : ನಟ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' (KGF 2) ಖಂಡಿತವಾಗಿಯೂ ಈ ವರ್ಷ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಸೀಕ್ವೆಲ್‌ಗಳಲ್ಲಿ ಒಂದಾಗಿದೆ. ಆಕ್ಷನ್-ಪ್ಯಾಕ್ಡ್ ಡ್ರಾಮಾ 'ಕೆಜಿಎಫ್  2' ಅನ್ನು ವೀಕ್ಷಿಸಲು ಪ್ರೇಕ್ಷಕರಲ್ಲಿ ಕಾತುರದಿಂದ ಕಾಯುತ್ತಿದ್ದಾರೆ (KGF 2 release date). 


COMMERCIAL BREAK
SCROLL TO CONTINUE READING

ಮಾರ್ಚ್ 27 ರಂದು ಟ್ರೈಲರ್ ರಿಲೀಸ್ :
ಇನ್ನೇನು ಕೆಲವೇ ದಿನಗಳಲ್ಲಿ  'ಕೆಜಿಎಫ್ ಚಾಪ್ಟರ್ 2 ' (KGF 2) ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದೆ. ಚಿತ್ರದ ನಿರ್ಮಾಪಕರು ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ (KGF 2 trailer release) . ಇದೀಗ ಚಿತ್ರದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಯಶ್ (Yash) ಅಭಿನಯದ ಚಿತ್ರದ ಹೊಸ ಪೋಸ್ಟರ್‌ನೊಂದಿಗೆ, ನಿರ್ಮಾಪಕರು ಚಿತ್ರ ಬಿಡುಗಡೆಯ ದಿನಾಂಕವನ್ನು ಕೂಡಾ ಘೋಷಿಸಿದ್ದಾರೆ. ಏಪ್ರಿಲ್ 14, 2022 ರಂದು 'ಕೆಜಿಎಫ್ ಚಾಪ್ಟರ್ 2 ' ತೆರೆ ಕಾಣಲಿದ್ದು, ಅದರ ಟ್ರೈಲರ್ ಮಾರ್ಚ್ 27, 2022 ರಂದು ರಿಲೀಸ್ ಆಗಲಿದೆ. ಈ  ಸುದ್ದಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣಗಳಲ್ಲಿ (Social media) ಹಂಚಿಕೊಂಡಿದ್ದಾರೆ.


ಕಿಚ್ಚನ ನೆಕ್ಸ್ಟ್ ಪ್ರಾಜೆಕ್ಟ್: ವಿಕ್ರಾಂತ್ ರೋಣ ಬಳಿಕ ಸುದೀಪ್ ಮುಂದಿನ ಚಿತ್ರ ಇದೆ ನೋಡಿ.!


ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಂಜಯ್ ದತ್ ಮತ್ತು ರವೀನಾ ಟಂಡನ್ :
ಚಿತ್ರದಲ್ಲಿ, ಯಶ್ ಮೊದಲ ಬಾರಿಗೆ ಸಂಜಯ್ ದತ್ (Sanjay Dutt)ಮತ್ತು  ರವೀನಾ ಟಂಡನ್ ಜೊತೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.  ಹೊಂಬಾಳೆ ಫಿಲ್ಮ್ಸ್, ನಿರ್ಮಾಣದ ಈ ಸಿನೆಮಾದಲ್ಲಿ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಕೆಜಿಎಫ್ ಚಾಪ್ಟರ್ 1 ಹಲವು ದಾಖಲೆಗಳನ್ನು  ಮುರಿದಿದ್ದು, (KGF Records)  ಏಪ್ರಿಲ್‌ನಲ್ಲಿ  ತೆರೆ ಕಾಣಲಿರುವ  ಕೆಜಿಎಫ್ ಚಾಪ್ಟ ರ್  2 ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವ ಹಾದಿಯಲ್ಲಿದೆ.


ಇದನ್ನೂ ಓದಿ  : Kireeti Reddy: ಸಿನಿಮಾ ಕ್ಷೇತ್ರಕ್ಕೆ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಗ್ರ್ಯಾಂಡ್ ಎಂಟ್ರಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.