ಕಿಚ್ಚನ ನೆಕ್ಸ್ಟ್ ಪ್ರಾಜೆಕ್ಟ್: ವಿಕ್ರಾಂತ್ ರೋಣ ಬಳಿಕ ಸುದೀಪ್ ಮುಂದಿನ ಚಿತ್ರ ಇದೆ ನೋಡಿ.!

Kiccha Sudeep: ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ವಿಕ್ರಾಂತ್ ರೋಣ ಚಿತ್ರದ ಹೊರತಾಗಿಯೂ ನಟ ಸುದೀಪ್ (Sudeep) ಮುಂದೆ ಬೇರೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ.  

Written by - Chetana Devarmani | Last Updated : Mar 3, 2022, 11:34 AM IST
  • ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗಾಗಿ ಜನ ಕಾದು ಕುಳಿತಿದ್ದಾರೆ
  • ಕಿಚ್ಚನ ಅಭಿಮಾನಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ
  • ವಿಕ್ರಾಂತ್ ರೋಣ ಬಳಿಕ ಸುದೀಪ್ ಮುಂದಿನ ಚಿತ್ರ ಇದೆ ನೋಡಿ
  • ನಿರ್ದೇಶಕ ಅನೂಪ್ ಭಂಡಾರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ
ಕಿಚ್ಚನ ನೆಕ್ಸ್ಟ್ ಪ್ರಾಜೆಕ್ಟ್: ವಿಕ್ರಾಂತ್ ರೋಣ ಬಳಿಕ ಸುದೀಪ್ ಮುಂದಿನ ಚಿತ್ರ ಇದೆ ನೋಡಿ.! title=
ಸುದೀಪ್

ಕಿಚ್ಚ ಸುದೀಪ್.. ಹೆಸರಲ್ಲೇ ಕಿಚ್ಚು ಹೊತ್ತಿಸುವ ಗತ್ತು... ಎಂಥ ಪಾತ್ರಕ್ಕೂ ನಟಿಸುವ ತಾಕತ್ತು.. ನಟನಾ ಕಲೆ ಕರಗತ ಮಾಡಿಕೊಂಡ ಅಭಿನಯ ಚಕ್ರವರ್ತಿಯ ಸಿನಿಮಾ ಅಂದ್ರೆ ಸಾಕು ಸಿನಿ ಪ್ರಿಯರ ಮನ ಕುಣಿಯುತ್ತೆ.

ಇದನ್ನೂ ಓದಿ: Wi-Fi: ರಾಜ್ಯದ ಮೊದಲ ವೈ-ಫೈ ಗ್ರಾಮ ಯಾವುದು ಗೊತ್ತಾ?

ಇದೀಗ ವಿಕ್ರಾಂತ್ ರೋಣ (Vikrant Rona) ಸಿನಿಮಾ ಬಿಡುಗಡೆಗಾಗಿ ಜನ ಕಾದು ಕುಳಿತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಫೆ.24 ರಂದು ಬೆಳ್ಳಿತೆರೆ ಮೇಲೆ ವಿಕ್ರಾಂತ್ ರೋಣ ಅಬ್ಬರಿಸಬೇಕಿತ್ತು. ಆದರೆ ಕೊರೊನಾ (Corona) ಮೂರನೇ ಅಲೆಯ ಕಾರಣದಿಂದಾಗಿ ಚಿತ್ರದ ರಿಲೀಸ್ ಡೇಟ್ ಅನ್ನು ಮುಂದೂಡಲಾಯಿತು. 

ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ವಿಕ್ರಾಂತ್ ರೋಣ ಚಿತ್ರದ ಹೊರತಾಗಿಯೂ ನಟ ಸುದೀಪ್ (Sudeep) ಮುಂದೆ ಬೇರೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಕಿಚ್ಚನ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಕ್ಯುರಿಯಸ್ ಆಗಿರುವ ಸಿನಿ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಕಿಚ್ಚನ ಮುಂದಿನ ಚಿತ್ರ ಯಾವುದು ಎಂಬುದು ಬಹಿರಂಗವಾಗಿದೆ.  

ಈ ಬಾರಿಯೂ ಅನೂಪ್ ಭಂಡಾರಿ (Anoop Bhandari) ಅವರೇ ಸುದೀಪ್ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರದ ಹೆಸರು 'ಬಿಲ್ಲಾ ರಂಗ ಬಾಷಾ'.

ಹೌದು ವಿಕ್ರಾಂತ ರೋಣ ಚಿತ್ರದ ನಂತರ ಮತ್ತೊಮ್ಮೆ ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ ಆಗಿ 'ಬಿಲ್ಲಾ ರಂಗ ಬಾಷಾ' (Billa Ranga Baashaa) ಸಿನಿಮಾ ಸೆಟ್ಟೇರುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಇತ್ತೀಚಿಗಷ್ಟೇ ಗುಟ್ಟು ಬಿಟ್ಟು ಕೊಟ್ಟಿದ್ದರು ಸುದೀಪ್.  

ಇದನ್ನೂ ಓದಿ: Kireeti Reddy: ಸಿನಿಮಾ ಕ್ಷೇತ್ರಕ್ಕೆ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಗ್ರ್ಯಾಂಡ್ ಎಂಟ್ರಿ..!

ಹೀಗಾಗಿ ಇವರ ಕಾಂಬಿನೇಷನ್ ನಲ್ಲಿ 'ಅಶ್ವತ್ಥಾಮ' (Ashwathama) ಸಿನಿಮಾ ಸೆಟ್ಟೇರಲಿದೆ ಎಂದು ಅವರು ಭಾವಿಸಿದ್ದರು. ಆದರೆ ಬಾದ್ ಷಾ 'ಬಿಲ್ಲಾ ರಂಗ ಬಾಷಾ' ಆಗಿ ಮಿಚಲು ಹೊರಟಿದ್ದಾರೆ.

ಅನೂಪ್ ಭಂಡಾರಿ ಈಗಾಗಲೇ ಶೇ.80 ಭಾಗ ಕಥೆ ಬರೆದು ಮುಗಿಸಿದ್ದಾರೆ. ಈ ಸಿನಿಮಾ ಮುಗಿದ ಮೇಲೆ ಎಲ್ಲವೂ ಅಂದುಕೊಂಡಂತೆ ಆದರೆ ಈ ಮೊದಲೇ ಘೋಷಿಸಿರುವ 'ಅಶ್ವತ್ಥಾಮ' ಸಿನಿಮಾ ಸೆಟ್ಟೇರಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News