SSMB28 : ಫ್ಯಾನ್ಸ್ ಬಿಗ್ ಸರ್ಪ್ರೈಸ್ ಕೊಟ್ಟ ಮಹೇಶ್ ಬಾಬು..! SSMB28 ಪೋಸ್ಟರ್ ರಿಲೀಸ್..
Mahesh Babu SSMB28 : ಯಾವುದೇ ಅಪ್‌ಡೆಟ್ ಇಲ್ಲದೆ ಮಹೇಶ್ ಹಂಚಿಕೊಂಡ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೆ, `ಮುಂದಿನ 24 ಗಂಟೆಗಳ ಸೋಷಿಯಲ್ ಮೀಡಿಯಾ ಮಹೇಶ್ ನಿಯಂತ್ರಣದಲ್ಲಿರಲಿದೆ` ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಸೂಪರ್ ಸ್ಟಾರ್ ಕ್ರೇಜ್ ಪ್ರಾರಂಭವಾಗಲಿದೆ ಅಂತ ಹೇಳಿದ್ದಾರೆ..
SSMB28 : ಟಾಲಿವುಡ್ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಮುಂಬರುವ ಆಕ್ಷನ್-ಥ್ರಿಲ್ಲರ್ ಸಿನಿಮಾದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡು ಫ್ಯಾನ್ಸ್‌ಗೆ ಸಡನ್ ಶಾಕ್ ನೀಡಿದ್ದಾರೆ. ಪ್ರಸ್ತುತ #SSMB28 ಎಂದು ಸಿನಿಮಾಗೆ ಹೆಸರಿಸಲಾಗಿದ್ದು, ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.
ರಿಲೀಸ್ ಆದ ಪೋಸ್ಟರ್‌ನಲ್ಲಿ ಮಹೇಶ್ ಬಾಬು ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಯಿಯಲ್ಲಿ ಸಿಗಾರ್ ಹಿಡಿದು ಸೇದುತ್ತಾ ಬರುತ್ತಿದ್ದು, ವಿಲನ್‌ಗಳು ಅವರ ಮುಂದೆ ಮಂಡಿಯೂರಿ ಕುಳಿತಿರುವ ದೃಶ್ಯವನ್ನನ್ನು ಕಾಣಬಹುದು. ಪೋಸ್ಟರ್‌ನಲ್ಲಿ "13.01.2024! #SaveTheDate" ಎಂಬ ಶೀರ್ಷಿಕೆಯೊಂದಿಗೆ ಸಿನಿಮಾ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ. ಮಹೇಶ್ ಬಾಬು ಈ ಪೋಸ್ಟರ್ ತಮ್ಮ ಸೋಷಿಯಲ್ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಶಶಾಂಕ್ ಕ್ಯಾರೆಕ್ಟರ್ ಇರೋ ಹುಡುಗ ನನ್ಗೆ ಬೇಡ, ಇವನು ತುಂಬಾ ಕಿರಿಕಿರಿ ಮಾಡ್ತಾನೆ...!
ಯಾವುದೇ ಅಪ್‌ಡೆಟ್ ಇಲ್ಲದೆ ಮಹೇಶ್ ಹಂಚಿಕೊಂಡ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೆ, "ಮುಂದಿನ 24 ಗಂಟೆಗಳ ಸೋಷಿಯಲ್ ಮೀಡಿಯಾ ಮಹೇಶ್ ನಿಯಂತ್ರಣದಲ್ಲಿರಲಿದೆ" ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಸೂಪರ್ ಸ್ಟಾರ್ ಕ್ರೇಜ್ ಪ್ರಾರಂಭವಾಗಲಿದೆ ಅಂತ ಹೇಳಿದ್ದಾರೆ.. ಅಲ್ಲದೆ, ಮಾಸ್, ಸೂಪರ್, ಪೈರ್, ಸೇರಿದಂತೆ ಮಹೇಶ್ ಫ್ಯಾನ್ಸ್ ಕಾಂಮೆಂಟ್ ಮೂಲಕ ಮೆಚ್ಚುಗೆಯ ಮಳೆ ಸುರಿಸುತ್ತಿದ್ದಾರೆ.
SSMB28 ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಎಸ್ ರಾಧಾಕೃಷ್ಣ (ಚೀನಾ ಬಾಬು) ನಿರ್ಮಾಣ ಸಂಸ್ಥೆ ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ಅಡಿಯಲ್ಲಿ ಭಾರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೌಟುಂಬಿಕ ಅಂಶಗಳನ್ನು ಒಳಗೊಂಡಿರುವ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಮಹೇಶ್ ಬಾಬು ಎದುರು ನಾಯಕಿಯಾಗಿ ನಟಿಸುತ್ತಿರುವ ನಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.