Actress Suicide: ಯಶ್ ಜೊತೆ ನಟಿಸಿದ್ದ ಖ್ಯಾತ ನಟಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!

Bhojpuri Actress Akanksha Dubey Sucide: ಭೋಜ್‌’ಪುರಿ ನಟಿ ಆಕಾಂಕ್ಷಾ ದುಬೆ ಬನಾರಸ್‌’ನ ಹೋಟೆಲ್‌’ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಇತ್ತೀಚೆಗೆ ಭೋಜ್‌’ಪುರಿ ಗಾಯಕ-ನಟ ಯಶ್ ಕುಮಾರ್ ಜೊತೆ 'ಮಿಟ್ಟಿ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರದಲ್ಲಿ ರಕ್ಷಾ ಗುಪ್ತಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Written by - Bhavishya Shetty | Last Updated : Mar 26, 2023, 03:16 PM IST
    • ಭೋಜ್‌’ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆಗೆ ಶರಣು
    • ನಟಿಯ ಆಪ್ತ ಮೂಲಗಳು ಮಾಧ್ಯಮಗಳಿಗೆ ಈ ವಿಚಾರವನ್ನು ದೃಢಪಡಿಸಿದೆ
    • ಆಕಾಂಕ್ಷಾ ದುಬೆ ಇತ್ತೀಚೆಗೆ ಭೋಜ್‌’ಪುರಿ ಗಾಯಕ-ನಟ ಯಶ್ ಕುಮಾರ್ ಜೊತೆ 'ಮಿಟ್ಟಿ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು
Actress Suicide: ಯಶ್ ಜೊತೆ ನಟಿಸಿದ್ದ ಖ್ಯಾತ ನಟಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!
Akanksha Dubey

Bhojpuri Actress Akanksha Dubey Sucide: ಭೋಜ್‌’ಪುರಿ ನಟಿ ಆಕಾಂಕ್ಷಾ ದುಬೆ ಬನಾರಸ್‌’ನ ಹೋಟೆಲ್‌’ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೋಟೆಲ್ ಸಾರನಾಥ್ ಕೊಠಡಿಯೊಂದರಲ್ಲಿ ನಟಿ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಟಿ ಆಕಾಂಕ್ಷಾ, ಭದೋಹಿ ಜಿಲ್ಲೆಯ ಚೌರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಸಿಪುರ ನಿವಾಸಿಯಾಗಿದ್ದರು.

ಇದನ್ನೂ ಓದಿ: ಸಾಧಕರ ಸೀಟ್‌ನಲ್ಲಿ ʼಸ್ಯಾಂಡಲ್‌ ಕ್ವೀನ್‌ʼ..! ನಟಿ To ಎಂಪಿ.. ರಮ್ಯಾ ಸಾಧನೆ ನಿಮ್ಗೆ ಗೊತ್ತಾ..?

ನಟಿಯ ಆಪ್ತ ಮೂಲಗಳು ಮಾಧ್ಯಮಗಳಿಗೆ ಈ ವಿಚಾರವನ್ನು ದೃಢಪಡಿಸಿದೆ. "ಹೊಸ ಸಿನಿಮಾ 'ನಾಯಕ್' ಸೆಟ್‌ನಲ್ಲಿ ಅವಳ ಮೊದಲ ದಿನವಾಗಿತ್ತು. ವಾರಣಾಸಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದರು. ಇಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಅವರ ಮೇಕಪ್ ಬಾಯ್ ಅವರನ್ನು ಕರೆಯಲು ಹೋದಾಗ ಹೋಟೆಲ್ ರೂಂ ನಲ್ಲಿ ಆಕೆ ನೇಣುಬಿಗಿದುಕೊಂಡಿದ್ದಳು” ಎಂದು ತಿಳಿದುಬಂದಿದೆ.

ಇದನ್ನೂ ಓದಿ: Deepika - Ranveer Video : ಎಲ್ಲರೆದುರೇ ರಣವೀರ್‌ನನ್ನು ಅವಾಯ್ಡ್‌ ಮಾಡಿದ ದೀಪಿಕಾ! ದಾಂಪತ್ಯದಲ್ಲಿ ಮೂಡಿದ್ಯಾ ಬಿರುಕು?

ಆಕಾಂಕ್ಷಾ ದುಬೆ ಇತ್ತೀಚೆಗೆ ಭೋಜ್‌’ಪುರಿ ಗಾಯಕ-ನಟ ಯಶ್ ಕುಮಾರ್ ಜೊತೆ 'ಮಿಟ್ಟಿ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು. ಚಿತ್ರದಲ್ಲಿ ರಕ್ಷಾ ಗುಪ್ತಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಚಂದನ್ ಉಪಾಧ್ಯಾಯ ನಿರ್ದೇಶಿಸಿದ್ದು, ಅರವಿಂದ್ ಪ್ರಸಾದ್ ಮತ್ತು ಪ್ರೇಮ್ ಶಂಕರ್ ನಿರ್ಮಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News