ಶಶಾಂಕ್‌ ಕ್ಯಾರೆಕ್ಟರ್‌ ಇರೋ ಹುಡುಗ ನನ್ಗೆ ಬೇಡ, ಇವನು ತುಂಬಾ ಕಿರಿಕಿರಿ ಮಾಡ್ತಾನೆ...!

Arav Surya and Nithya Gowda : ಜೇನುಗೂಡು ಧಾರಾವಾಹಿಯ ನಾಯಕ ಶಶಾಂಕ್‌ ಪಾತ್ರಧಾರಿ ನಟ ಆರವ್‌ ಸೂರ್ಯ ಹಾಗು ನಾಯಕಿ ದಿಯಾ ಪಾತ್ರಧಾರಿ ನಟಿ ನಿತ್ಯಾ ಗೌಡ ಮಾತನಾಡಿದ್ದಾರೆ. ದಿಯಾ ಪಾತ್ರಕ್ಕೆ ಸೆಲೆಕ್ಟ್‌ ಆಗಿದ್ದು, ಸೀರಿಯಲ್‌ ಶೂಟಿಂಗ್‌ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Written by - Zee Kannada News Desk | Edited by - Krishna N K | Last Updated : Mar 26, 2023, 06:01 PM IST
  • ʼಜೇನುಗೂಡುʼ ಧಾರಾವಾಹಿಯ ಆರವ್‌ ಸೂರ್ಯ, ನಟಿ ನಿತ್ಯಾ ಗೌಡ ಸಂದರ್ಶನ.
  • ದಿಯಾ ಪಾತ್ರಕ್ಕೆ ಸೆಲೆಕ್ಟ್‌ , ಸೀರಿಯಲ್‌ ಶೂಟಿಂಗ್‌ ಸಿಕ್ರೇಟ್‌ ಮನಬಿಚ್ಚಿ ನಿತ್ಯಾ.
  • ಬೇರೆ ಎಲ್ಲಾ ಧಾರಾವಾಹಿಗಳಿಗಿಂತ ಜೇನುಗೂಡು ವಿಭಿನ್ನ ಎಂದ ಆರವ್‌ ಸೂರ್ಯ.
ಶಶಾಂಕ್‌ ಕ್ಯಾರೆಕ್ಟರ್‌ ಇರೋ ಹುಡುಗ ನನ್ಗೆ ಬೇಡ, ಇವನು ತುಂಬಾ ಕಿರಿಕಿರಿ ಮಾಡ್ತಾನೆ...! title=

Jenugudu Kannada serial : ಜೀ ಕನ್ನಡ ನ್ಯೂಸ್‌ ಜೊತೆ ʼಜೇನುಗೂಡುʼ ಧಾರಾವಾಹಿಯ ನಾಯಕ ಶಶಾಂಕ್‌ ಪಾತ್ರಧಾರಿ ನಟ ಆರವ್‌ ಸೂರ್ಯ ಹಾಗು ನಾಯಕಿ ದಿಯಾ ಪಾತ್ರಧಾರಿ ನಟಿ ನಿತ್ಯಾ ಗೌಡ ಮಾತನಾಡಿದ್ದಾರೆ. ಖುಷಿ, ಹರಟೆ, ಲೇವಡಿ ಮಾಡಿಕೊಂಡ ವೀಕ್ಷಕರ ಅಚ್ಚುಮೆಚ್ಚಿನ ಈ ಜೋಡಿ ತಮ್ಮ ಧಾರಾವಾಹಿ ಜರ್ನಿಯನ್ನ ಹಂಚಿಕೊಂಡಿದ್ದಾರೆ.

ದಿಯಾ ಪಾತ್ರಕ್ಕೆ ಸೆಲೆಕ್ಟ್‌ ಆಗಿದ್ದಾಗ ಕ್ಯಾಮರಾ ಸೆನ್ಸ್‌ ಇರಲಿಲ್ಲ, ನಟನೆ ಏನು ಅಂತಾ ಗೊತ್ತಿರಲಿಲ್ಲಾ, ಸೀರಿಯಲ್‌ ಶೂಟಿಂಗ್‌ ಹೇಗಿರುತ್ತೆ ಅಂತಾ ಗೊತ್ತಿರಲಿಲ್ಲಾ, ಇದು ನನ್ನ ಮೊದಲನೆ ಧಾರಾವಾಹಿ ಮೊದಲನೆ ಪಾತ್ರವೇ ದಿಯಾ ಪಾತ್ರ ಈಗ ಎಲ್ಲರ ಬೆಂಬಲದಿಂದ ನಟನೆಯನ್ನ ಕಲಿತಿದ್ದೇನೆ, ವೀಕ್ಷಕರಿಗೆ ದಿಯಾ ಪಾತ್ರ ಇಷ್ಟವಾಗುತ್ತಿದೆ ಅಂದರೆ ಅದಕ್ಕೆ ಕಾರಣವೇ ಧಾರಾವಾಹಿ ನಿರ್ದೇಶಕರು ಹಾಗು ಧಾರಾವಾಹಿ ತಂಡ ಎಂದು ನಿತ್ಯಾ ಗೌಡ ಹೇಳಿದರು.

ನಿಮಗೆ ಮದುವೆಯಾಗುವ ಹುಡುಗ ಹೇಗಿರಬೇಕು? ಎಂಬ ಪ್ರಶ್ನೆಗೆ ಉತ್ತರಿಸಿದ ನಿತ್ಯಾ ಗೌಡ ಶಶಾಂಕ್‌ ಕ್ಯಾರೆಕ್ಟರ್‌ ಹುಡುಗ ಬೇಡ, ಶಶಾಂಕ್‌ ತುಂಬಾ ಕಿರಿಕಿರಿ ಮಾಡ್ತಾನೆ. ಲೈಫಿನಲ್ಲಿ ಸೆಟೆಲ್‌ ಆಗಿರುವ ಹುಡುಗ ಬೇಕು ಎಂದು ನಿತ್ಯಾ ಕಾಲೆಳೆದರು.... ಜೊತೆಗೆ ಮುಂಬರುವ ದಿನಗಳಲ್ಲಿ ದಿಯಾ ಪಾತ್ರದಲ್ಲಿ ಬಹಳಷ್ಟು ಟ್ವಿಸ್ಟ್‌ ಅಂಡ್‌ ಟರ್ನ್ಸ್‌ ಬರಲಿದೆ. ವೀಕ್ಷಕರು ಇದರಿಂದ ಸಪ್ರೈಸ್‌ ಆಗಲಿದ್ದಾರೆ ಎಂದು ಹೇಳಿದರು. 

 

ಇದನ್ನೂ ಓದಿ: Actress Suicide: ಯಶ್ ಜೊತೆ ನಟಿಸಿದ್ದ ಖ್ಯಾತ ನಟಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!

ಇನ್ನು ನಟ ಆರ್‌ ಸೂರ್ಯ ಮಾತನಾಡಿ, ಬೇರೆ ಎಲ್ಲಾ ಧಾರಾವಾಹಿಗಳಿಗಿಂತ ಜೇನುಗೂಡು ಸೀರಿಯಲ್‌ ವಿಭಿನ್ನವಾಗಿದೆ. ಜೇನುಗೂಡು ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದಂತಹ ತೂಕ ಇದೆ.. ಆದರೆ ನನ್ನ ವಿಚಾರ ಬಂದಾಗ ಸಾಕಷ್ಟು ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ಸ್‌ ಮಾಡಿದ್ದಾರೆ ಇದು ಕೇವಲ ಕಾಲ್ಪನಿಕ ಧಾರಾವಾಹಿ ಕಥೆ ವೀಕ್ಷಕರು ಇದೆಲ್ಲಾ ನಿಜ ಎಂದು ಊಹಿಸಿಕೊಳ್ಳಬೇಡಿ ಎಂದರು.

ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದ ನಟಿ ನಿತ್ಯಾ ಗೌಡ ಹಾಗು ನಟ ಆರವ್‌ ಸೂರ್ಯ ಧಾರಾವಾಹಿಯಲ್ಲಿ ಶಶಾಂಕ್‌ ತುಂಬಾ ಖಡಕ್‌, ಸಿಸ್ಟಮ್ಯಾಟಿಕ್‌ ಆದರೆ ದಿಯಾ ತುಂಬಾ ಚಿಲ್‌, ಕೂಲ್‌ ಮತ್ತು ಇಂಟೆಲಿಜೆಂಟ್‌ ಈ ಎರೆಡು ಪಾತ್ರಗಳನ್ನ ತುಂಬಾ ಎಂಜಾಯ್‌ ಮಾಡ್ತಾಇದ್ದೇವೆ ಎಂದು ಈ ಜೋಡಿ ಹೇಳಿದರು. ಜೊತೆಗೆ ಧಾರಾವಾಹಿಯಲ್ಲಿ ದಿಯಾ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುತ್ತಾಳೆ. ಆದರೆ ನಿಜ ಜೀವನದಲ್ಲಿ ಅದು ಸಾಧ್ಯವಿಲ್ಲ, ಜೇನುಗೂಡು ಸೀರಿಯಲ್‌ನಲ್ಲಿ ನಾನು ರಿಚ್‌ ಹುಡುಗಿ ಅಪ್ಪ ಡಾಕ್ಟರ್‌ ಆದರೆ ರಿಯಲ್‌ ಲೈಫಿನಲ್ಲಿ ನಾನೊಂದು ಮಿಡಲ್‌ ಕ್ಲಾಸ್‌ ಫ್ಯಾಮಿಲಿ ಹುಡುಗಿ ಅಪ್ಪ KSRTC ಬಸ್‌ ಡ್ರ್ಯೈವರ್‌.... ಜೇನುಗೂಡು ಧಾರಾವಾಹಿಯಲ್ಲಿ ದಿಯಾ& ಶಶಾಂಕ್‌ ಕೆಮಿಸ್ಟರಿ ವೀಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ ಎಂದು ನಟ ಆರವ್‌ ಸೂರ್ಯ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News