ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲದೆ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಆದಷ್ಟೂ ಬೇಗ ಪೊಗರು ನೋಡಬಹುದು ಎಂದು ಕಾಯುತ್ತಿದ್ದವರಿಗೆ ಕೊರೊನಾವೈರಸ್ (Coronavirus) ಬೇರೆ ಅಡ್ಡಗಾಲು ಹಾಕಿತ್ತು.


COMMERCIAL BREAK
SCROLL TO CONTINUE READING

ಸದ್ಯ ಚಿತ್ರರಂಗ ನಿಧಾನವಾಗಿ ಯಥಾಸ್ಥಿತಿಗೆ ಮರಳುತ್ತಿದೆ. ಆದ್ರೆ ಸ್ಟಾರ್ ನಟರ ಚಿತ್ರಗಳು ಯಾವುದು ಮೊದಲು ತೆರೆಗೆ ಬರಲಿದೆ ಎಂಬ ಗೊಂದಲ ಉಂಟಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ನಟಿಸಿರುವ ರಾಬರ್ಟ್, ಪವರ್ ಸ್ಟಾರ್ ಪುನೀತ್ ಅಭಿನಯದ ಯುವರತ್ನ, ಕಿಚ್ಚ ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಚಿತ್ರಗಳ ಜೊತೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಪೊಗರು ಬಿಡುಗಡೆಯ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ.


ಮತ್ತೆ ಥೀಯೇಟರ್‌ಗಳಿಗೆ ಲಗ್ಗೆ ಇಡುತ್ತಿವೆ ಬ್ಲಾಕ್ಬಾಸ್ಟರ್ ಬಾಹುಬಲಿ ಫಿಲ್ಮ್


ಈ ಎಲ್ಲ ಗೊಂದಲಗಳ ನಡುವೆ ಪೊಗರು ಚಿತ್ರತಂಡ ರಿಲೀಸ್ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿದೆ. ಎಲ್ಲ ಅಂದುಕೊಂಡಂತೆ ಆದರೆ ಡಿಸೆಂಬರ್ 25ಕ್ಕೆ ಪೊಗರು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಒಂದು ವೇಳೆ ಡಿಸೆಂಬರ್ 25ಕ್ಕೆ ಆಗಿಲ್ಲ ಅಂದ್ರೆ ಸಂಕ್ರಾಂತಿ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆದಿದೆ.


ಈ ಕುರಿತು ನಿರ್ದೇಶಕ ನಂದಕಿಶೋರ್ ಅವರೇ ಮಾಹಿತಿ ನೀಡಿದ್ದಾರೆ. ದುಬಾರಿ ಚಿತ್ರ ಮುಹೂರ್ತ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡೈರೆಕ್ಟರ್ ನಂದ ಕಿಶೋರ್ ''ಡಿಸೆಂಬರ್ 25 ಅಥವಾ ಸಂಕ್ರಾಂತಿ ಹಬ್ಬಕ್ಕೆ ಪೊಗರು ಬರುತ್ತೆ'' ಎಂದಿದ್ದಾರೆ.


ರಾಗಿಣಿ, ಸಂಜನಾಗೆ ಪರಪ್ಪನ ಅಗ್ರಹಾರವೇ ಗತಿ, ಜಾಮೀನು ಅರ್ಜಿ ತಿರಸ್ಕೃತ


ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಕೂಡ ಡಿಸೆಂಬರ್ 25ಕ್ಕೆ ಬರಲು ತಯಾರಿ ನಡೆಸಿದೆ ಎನ್ನಲಾಗಿದೆ. ಒಂದು ವೇಳೆ ರಾಬರ್ಟ್ ಕ್ರಿಸ್‌ಮಸ್‌ಗೆ ಪ್ಲಾನ್ ಮಾಡಿದ್ರೆ ಪೊಗರು ಮುಂದಕ್ಕೆ ಹೋಗಲಿದೆ. ಇಲ್ಲವಾದಲ್ಲಿ ಪೊಗರು ಚಿತ್ರವೇ ಮೊದಲು ರಿಲೀಸ್ ಆಗಲಿದೆ.