ರಾಗಿಣಿ, ಸಂಜನಾಗೆ ಪರಪ್ಪನ ಅಗ್ರಹಾರವೇ ಗತಿ, ಜಾಮೀನು ಅರ್ಜಿ ತಿರಸ್ಕೃತ

ಸ್ಯಾಂಡಲ್ ವುಡ್ ಡ್ರಗ್ಸ್ (sandalwood drugs case) ಪೂರೈಕೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ (Ragini Dwivedi)ಮತ್ತು ಸಂಜನಾ ಗರ್ಲಾನಿ (Sanjjanaa Galrani)iಇದೀಗ ಪರಪ್ಪನ  ಅಗ್ರಹಾರವೇ ಗತಿಯಾಗಿದೆ.  ಜಾಮೀನು ಕೋರಿ ಸಲ್ಲಿಸಿದ್ದ ಅವರ ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದೆ.

Last Updated : Nov 3, 2020, 08:04 PM IST
ರಾಗಿಣಿ, ಸಂಜನಾಗೆ ಪರಪ್ಪನ ಅಗ್ರಹಾರವೇ ಗತಿ, ಜಾಮೀನು ಅರ್ಜಿ ತಿರಸ್ಕೃತ title=
file photo

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ (sandalwood drugs case) ಪೂರೈಕೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ (Ragini Dwivedi)ಮತ್ತು ಸಂಜನಾ ಗರ್ಲಾನಿ (Sanjjanaa Galrani)iಇದೀಗ ಪರಪ್ಪನ  ಅಗ್ರಹಾರವೇ ಗತಿಯಾಗಿದೆ.  ಜಾಮೀನು ಕೋರಿ ಸಲ್ಲಿಸಿದ್ದ ಅವರ ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದೆ.

ಡ್ರಗ್ಸ್ ಧಂಧೆ ಪ್ರಕರಣ: ರಾತ್ರಿಯಿಡೀ ಊಟ, ನಿದ್ದೆ ಮಾಡದೇ ಕಣ್ಣೀರಿಡುತ್ತಿದ್ದ ಸಂಜನಾ ಗಲ್ರಾನಿ 

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ದ್ವಿವೇದಿ, ಸಂಜನಾ ಗುರ್ಲಾನಿ ಮತ್ತು ಅವರ ಸ್ನೇಹಿತ ಪ್ರಶಾಂತ್ ರಂಕಾ ಅವರು ಜಾಮೀನು ಕೋರಿ ರಾಜ್ಯ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಅವರ ಪೀಠವು ಅಕ್ಟೋಬರ್ 25 ರಂದು ಇದರ ವಿಚಾರಣೆ ಮುಗಿಸಿತ್ತು. ಆದರೆ, ತೀರ್ಪು ಪ್ರಕಟಿಸಿರಲಿಲ್ಲ. ಮಂಗಳವಾರ ಪೀಠವು ತನ್ನ ತೀರ್ಪು ಪ್ರಕಟಿಸಿದ್ದು, ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಈ ಮೂವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಸೆಪ್ಟೆಂಬರ್ 28 ರಂದು ತಿರಸ್ಕರಿಸಿತ್ತು ಅದರ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಹೈಕೋರ್ಟಿನಲ್ಲೂ ನಟನಾಮಣಿಯರಿಗೆ ನಿರಾಶೆಯಾಗಿದೆ.ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ರಾಗಿಣಿ ಅವರನ್ನು ಸೆಪ್ಟೆಂಬರ್ 14 ಮತ್ತು ಸಂಜನಾ ಅವರನ್ನು ಸೆ.16 ರಂದು ಬಂಧಿಸಿದ್ದರು. ರಾಗಿಣಿ, ಸಂಜನಾ ಮತ್ತು ಪ್ರಶಾಂತ್ ರಂಕಾ ವಿರುದ್ಧ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡಿರುವ ಆರೋಪ ಹೊರಿಸಲಾಗಿದೆ.
 

Trending News