Priyanka Chopra daughter : ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಮಗಳು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಕುರಿತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ದೇಸಿ ಗರ್ಲ್‌ ತನ್ನ ಮಗಳ ಮುಖವನ್ನು ಮರೆಮಾಚಿದ್ದರಿಂದ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ.


COMMERCIAL BREAK
SCROLL TO CONTINUE READING

ಮಗಳ ಜೊತೆ ಗ್ರ್ಯಾಂಡ್‌ ಫೋಟೋ ಶೂಟ್‌ ಮಾಡಿಸಿರುವ ಪ್ರಿಯಾಂಕಾ ತನ್ನ ಮಗಳ ಮುಖವನ್ನು ಮರೆಮಾಚಿದ್ದಾರೆ. ಪಿಂಕಿ ಫೋಟೋಸ್‌ ನೋಡಿದ ನೆಟಿಜನ್‌ಗಳು, ಈ ಫೋಟೋಶೂಟ್ ಅಗತ್ಯವಿರಲಿಲ್ಲ ಇದು ಹಾಸ್ಯಾಸ್ಪದ ಎಂದು ಟೀಕೆ ಮಾಡಿದ್ದಾರೆ. ಅಲ್ಲದೆ, ಮಗಳು ಮಾಲ್ತಿ ಜೊತೆಗೆ ತನ್ನ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡುವ ಪ್ರಿಯಾಂಕಾಗೆ ಅವರ ಅಭಿಮಾನಿಗಳು ಸಾಕಷ್ಟು ಪ್ರೀತಿಯ ಮಾತುಗಳನ್ನು ಹೇಳಿದ್ದಾರೆ.


ಇದನ್ನೂ ಓದಿ: Rishab Shetty : ರಿಷಬ್‌ ಶೆಟ್ಟಿ ಪಂಜುರ್ಲಿ ದೈವದ ಹರಕೆ ತೀರಿಸಿದ ಕ್ಷಣ.! ಮೈನವಿರೇಳಿಸುವ ವಿಡಿಯೋ ನೋಡಿ


ಆದರೆ ಮಗಳ ಮುಖವನ್ನು ಮರೆಮಾಚುವುದಾದ್ರೆ ಒಬ್ಬರೆ ಫೋಟೋಶೂಟ್ ಮಾಡಿಸಿಕೊಳ್ಳಬೇಕಿತ್ತು. ಇಲ್ಲವೇ ಈ ಫೋಟೋಶೂಟ್‌ ಅವಶ್ಯಕತೆ ಇರಲಿಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸೆಲೆಬ್ರಿಟಿಗಳು, ವಿಶೇಷವಾಗಿ ಬಾಲಿವುಡ್‌ನಲ್ಲಿ ತಮ್ಮ ಮಕ್ಕಳ ಚಿತ್ರಗಳನ್ನು ಹಂಚಿಕೊಳ್ಳುವ ಪ್ರವೃತ್ತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಅವರ ಮುಖವನ್ನು ತೋರಿಸುತ್ತಿಲ್ಲ. ಇದೀಗ ಪ್ರಿಯಾಂಕಾ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.


ಪ್ರೇಕ್ಷಕರಿಗೆ ಬಿಗ್‌ ಟ್ವೀಸ್ಟ್‌ ನೀಡಿದ ʼಮುದ್ದುಮಣಿಗಳುʼ : ʼಮುದ್ದುಲಕ್ಷ್ಮಿʼ ಶಾರ್ವರಿ ರೀ ಎಂಟ್ರೀ..!


ಪ್ರಿಯಾಂಕಾ ಚೋಪ್ರಾ ಅವರು ಬಾಡಿಗೆ ತಾಯ್ತನ ಹೊಂದಿದ್ದಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಅಲ್ಲದೆ, ತಮ್ಮ ನಿರ್ಧಾರದ ಕಾರಣವನ್ನು ಬಹಿರಂಗಪಡಿಸಿದರು. ಪ್ರಿಯಾಂಕಾ 2018 ರಲ್ಲಿ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಕಳೆದ ವರ್ಷವಷ್ಟೇ ಅವರು ಮಾಲ್ಟಿಯ ಪೋಷಕರಾಗುವುದಾಗಿ ಘೋಷಿಸಿದರು. ಈ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್‌ ನೀಡಿತ್ತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.