ಪ್ರೇಕ್ಷಕರಿಗೆ ಬಿಗ್‌ ಟ್ವೀಸ್ಟ್‌ ನೀಡಿದ ʼಮುದ್ದುಮಣಿಗಳುʼ : ʼಮುದ್ದುಲಕ್ಷ್ಮಿʼ ಶಾರ್ವರಿ ರೀ ಎಂಟ್ರೀ..!

ಕನ್ನಡ ಕಿರುತೆರೆಗೆ ಸ್ಟಾರ್‌ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಧಾರಾವಾಹಿಗಳನ್ನು ನೀಡುತ್ತಿದೆ. ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾನೀನೇ, ಕಥೆಯೊಂದು ಶುರುವಾಗಿದೆ, ಜೇನುಗೂಡು, ಸುವರ್ಣ ಸೂಪರ್ ಸ್ಟಾರ್, ಹೊಂಗನಸು ಕಾರ್ಯಕ್ರಮಗಳು ವೀಕ್ಷಕರ ಮನಗೆದ್ದು ಮನೆಮಾತಾಗಿದೆ. ಸದ್ಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ʼಮುದ್ದುಮಣಿಗಳುʼ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ.

Written by - Krishna N K | Last Updated : Jan 20, 2023, 01:15 PM IST
  • ಜನಪ್ರಿಯ ಧಾರಾವಾಹಿ ʼಮುದ್ದುಮಣಿಗಳುʼ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ.
  • ಮುದ್ದುಮಣಿಗಳು ಧಾರಾವಾಹಿಯು ಪ್ರೇಕ್ಷಕರಿಗೊಂದು ಹೊಸ ಟ್ವಿಸ್ಟ್ ಒಂದನ್ನು ನೀಡುತ್ತಿದೆ.
  • ಇತ್ತೀಚಿಗಷ್ಟೇ ಧಾರಾವಾಹಿಯಲ್ಲಿ ಶಾರ್ವರಿ ಅನ್ನೋ ಹಳೆ ಪಾತ್ರವೊಂದು ರೀ ಎಂಟ್ರಿಯಾಗಿದೆ.
ಪ್ರೇಕ್ಷಕರಿಗೆ ಬಿಗ್‌ ಟ್ವೀಸ್ಟ್‌ ನೀಡಿದ ʼಮುದ್ದುಮಣಿಗಳುʼ : ʼಮುದ್ದುಲಕ್ಷ್ಮಿʼ ಶಾರ್ವರಿ ರೀ ಎಂಟ್ರೀ..! title=

Muddumanigalu serial : ಕನ್ನಡ ಕಿರುತೆರೆಗೆ ಸ್ಟಾರ್‌ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಧಾರಾವಾಹಿಗಳನ್ನು ನೀಡುತ್ತಿದೆ. ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾನೀನೇ, ಕಥೆಯೊಂದು ಶುರುವಾಗಿದೆ, ಜೇನುಗೂಡು, ಸುವರ್ಣ ಸೂಪರ್ ಸ್ಟಾರ್, ಹೊಂಗನಸು ಕಾರ್ಯಕ್ರಮಗಳು ವೀಕ್ಷಕರ ಮನಗೆದ್ದು ಮನೆಮಾತಾಗಿದೆ. ಸದ್ಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ʼಮುದ್ದುಮಣಿಗಳುʼ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ.

2018ರಲ್ಲಿ ಆರಂಭವಾದ ʼಮುದ್ದುಲಕ್ಷ್ಮಿʼ ಧಾರಾವಾಹಿಯು ಅದ್ಭುತವಾದ ಕತೆಯಿಂದಾಗಿ ಸಾವಿರ ಸಂಚಿಕೆಗಳನ್ನು ದಾಟಿ ಪ್ರೇಕ್ಷಕರ ಮನಗೆದ್ದಿತ್ತು. ಸದ್ಯ ಇದರ ಹೊಸ ಅಧ್ಯಾಯ ʼಮುದ್ದುಮಣಿಗಳುʼ ಧಾರಾವಾಹಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೀಗ ಮುದ್ದುಮಣಿಗಳು ಧಾರಾವಾಹಿಯು ಪ್ರೇಕ್ಷಕರಿಗೊಂದು ಹೊಸ ಟ್ವಿಸ್ಟ್ ಒಂದನ್ನು ನೀಡುತ್ತಿದೆ. ಇಲ್ಲಿವರೆಗೆ ಕಥೆ ಭೂಮಿ, ಶ್ರವಣ್ ಹಾಗು ಶಿವು, ದೃಷ್ಟಿಯ ಸುತ್ತ ಸಾಗುತ್ತಿತ್ತು ಆದರೆ ಇತ್ತೀಚಿಗಷ್ಟೇ ಧಾರಾವಾಹಿಯಲ್ಲಿ ಶಾರ್ವರಿ ಅನ್ನೋ ಹಳೆ ಪಾತ್ರವೊಂದು ರೀ ಎಂಟ್ರಿಯಾಗಿದೆ.

ಮುಂಬರುವ ದಿನಗಳಲ್ಲಿ ಹಳೆ ಪಾತ್ರಗಳು ಒಂದೊಂದಾಗಿ ಎಂಟ್ರಿಯಾಗುವ ಸಾಧ್ಯತೆಗಳಿವೆ. ಏಕೆಂದರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋ ನೋಡಿದ್ರೆ ಸತ್ತೋಗಿರೋ ಧ್ರುವಂತ್ ಬದುಕಿದ್ದನೇನೋ ಅನ್ನೋ ಅನುಮಾನ ವೀಕ್ಷಕರಲ್ಲಿ ಮೂಡುತ್ತಿದೆ. ಅದಲ್ಲದೆ ಅಪಘಾತದಲ್ಲಿ ಮೃತಪಟ್ಟಿರುವ ಮುದ್ದುಲಕ್ಷ್ಮಿಇದೀಗ ಮತ್ತೆ ಬಂದಿದ್ದಾಳೆ. ನಿಜವಾಗಿಯೂ ಆಕೆ ಮುದ್ದುಲಕ್ಷ್ಮಿನೇನಾ..? ಅಥವಾ ಯಾರೋ ಬೇರೇನಾ..? ಅನ್ನೋದನ್ನು ಧಾರಾವಾಹಿಯಲ್ಲಿ ಕಾದುನೋಡಬೇಕಿದೆ. ʼಮುದ್ದುಮಣಿಗಳುʼ ಸೋಮ-ಶನಿವಾರ ರಾತ್ರಿ 7.30 ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.
 

Trending News