Rishab Shetty : ರಿಷಬ್‌ ಶೆಟ್ಟಿ ಪಂಜುರ್ಲಿ ದೈವದ ಹರಕೆ ತೀರಿಸಿದ ಕ್ಷಣ.! ಮೈನವಿರೇಳಿಸುವ ವಿಡಿಯೋ ನೋಡಿ

Rishabh Shetty : ದೈವಾರಾಧಕರು ತಯಾರಾಗುವುದು, ಕೋಲ ಕಟ್ಟುವುದು, ದೈವದ ಸಂತೋಷ, ಸಂಭ್ರಮ, ಆರ್ಭಟ ಎಲ್ಲವೂ ಈ ವಿಡಿಯೋದಲ್ಲಿದೆ. ದೈವ ಬಂದು ರಿಷಬ್‌ ಅವರನ್ನು ಅಪ್ಪುವ ದಶ್ಯವಂತೂ ಅದ್ಭುತ. ಚಿತ್ರತಂಡಕ್ಕೆ ದೈವ ಆಶೀರ್ವದಿಸುವ ಕ್ಷಣಗಳು ಈ ವಿಡಿಯೋದಲ್ಲಿವೆ. 

Written by - Chetana Devarmani | Last Updated : Jan 20, 2023, 01:35 PM IST
  • ರಿಷಬ್‌ ಶೆಟ್ಟಿ ಪಂಜುರ್ಲಿ ದೈವದ ಹರಕೆ ತೀರಿಸಿದ ಕ್ಷಣ
  • ರಿಷಬ್‌ ಶೆಟ್ಟಿಯನ್ನು ಅಪ್ಪಿ, ಆಶೀರ್ವದಿಸಿದ ದೈವ
  • ಮೈನವಿರೇಳಿಸುವ ವಿಡಿಯೋ ನೋಡಿ
Rishab Shetty : ರಿಷಬ್‌ ಶೆಟ್ಟಿ ಪಂಜುರ್ಲಿ ದೈವದ ಹರಕೆ ತೀರಿಸಿದ ಕ್ಷಣ.! ಮೈನವಿರೇಳಿಸುವ ವಿಡಿಯೋ ನೋಡಿ  title=
ಪಂಜುರ್ಲಿ ದೈವದ ಹರಕೆ ತೀರಿಸಿದ ಕ್ಷಣ

Rishabh Shetty : ಕಾಂತಾರ.. ನಿಜಕ್ಕೂ ಕನ್ನಡ ಚಿತ್ರಂಗದಲ್ಲಿ ಅಚ್ಚಳಿಯದೇ ಉಳಿಯುವ ಸಿನಿಮಾಳ ಸಾಲಿಗೆ ಸೇರುವ ಚಿತ್ರ. ಕರಾವಳಿ ಜನರ ಆಚರಣೆಯ ಅಮೋಘ ಕಥೆಯೇ ಕಾಂತಾರ. ದೈವದ ಭಕ್ತಿ, ಆರಾಧನೆ, ತುಳುನಾಡ ಸಂಸ್ಕೃತಿ ಬಿಂಬಿಸುವ ಸಿನಿಮಾ. ಅದರಲ್ಲೂ ರಿಷಬ್‌ ಶೆಟ್ಟಿ ಅವರ ಅಭಿನಯವಂತು ಜನರ ಮನಮುಟ್ಟುವಂಥದ್ದು. ಆಸ್ಕರ್‌ ಪ್ರಶಸ್ತಿ ಪಡೆಯಲು ಸಜ್ಜಾಗಿರುವ ಕಾಂತಾರ ಸಿನಿಮಾ ಬಗ್ಗೆ ಎಷ್ಟು ವರ್ಣಿಸಿದರು ಸದು ಸಾಲದು. ಇದೀಗ ಕಾಂತಾರ ಸಿನಿಮಾ ತಂಡ ಹೊಂಬಾಳೆ ಯೂಟೂಬ್‌ ಚಾನಲ್‌ನಲ್ಲಿ ಪಂಜುರ್ಲಿ ದೈವದ ಹರಕೆ ತೀರಿಸಿದ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ : Bheema Teaser : ದುನಿಯಾ ವಿಜಯ್ ಅಭಿನಯದ ʻಭೀಮಾʼ ಟೀಸರ್ ರಿಲೀಸ್

ದೈವಾರಾಧಕರು ತಯಾರಾಗುವುದು, ಕೋಲ ಕಟ್ಟುವುದು, ದೈವದ ಸಂತೋಷ, ಸಂಭ್ರಮ, ಆರ್ಭಟ ಎಲ್ಲವೂ ಈ ವಿಡಿಯೋದಲ್ಲಿದೆ. ದೈವ ಬಂದು ರಿಷಬ್‌ ಅವರನ್ನು ಅಪ್ಪುವ ದಶ್ಯವಂತೂ ಅದ್ಭುತ. ಚಿತ್ರತಂಡಕ್ಕೆ ದೈವ ಆಶೀರ್ವದಿಸುವ ಕ್ಷಣಗಳು ಈ ವಿಡಿಯೋದಲ್ಲಿವೆ. ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ಚಿತ್ರತಂಡ ಪಂಜುರ್ಲಿ ದೈವದ ಬಳಿ ಹರಕೆ ತೀರಿಸಿದ ಸಂದರ್ಭದ ವಿಡಿಯೋ ಇದಾಗಿದೆ. ಮೈನವಿರೇಳಿಸುವ ಕ್ಷಣದ ವಿಡಿಯೋವನ್ನು ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಿದೆ. 

ರಿಷಬ್‌ ಶೆಟ್ಟಿ ಅವರ ಮನೆ ಬಳಿ ಪಂಜುರ್ಲಿ ದೈವದ ಹರಕೆ ತೀರಿಸಲಾಗಿದೆ. ಈ ವೇಳೆ ಸಿನಿಮಾ ನಿರ್ಮಾಪಕ ವಿಜಯ್‌ ಕಿರಂಗಂದೂರು ಸಹ ಭಾಗವಹಿಸಿದ್ದರು. ಚಿತ್ರದ ನಾಯಕಿ ಸಪ್ತಮಿ ಗೌಡ ಕೂಡ ಭಾಗಿಯಾಗಿದ್ದರು. ರಿಷಬ್‌ ಶೆಟ್ಟಿ ದಂಪತಿ ಹಾಗೂ ಚಿತ್ರತಂಡ ಅತ್ಯಂತ ಭಕ್ತಿ ಭಾವದಿ ಹರಕೆ ತೀರಿಸಿದ್ದಾರೆ.

ಇದನ್ನೂ ಓದಿ : Anant - Radhika Engagement : ಸಲ್ಮಾನ್ ಖಾನ್ ಜೊತೆ ಬಂದ ಈ ಸುಂದರಿ ಯಾರು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News