Pushpa Movie - O Antava Song Was First Offered To Nora Fatehi - ಪುಷ್ಪಾ ಚಿತ್ರವು ತನ್ನ ವಿಭಿನ್ನ ಶೈಲಿಯ ಪಾತ್ರ ವರ್ಗ, ಕಥೆ, ಬಲವಾದ ಪಾತ್ರಗಳು ಮತ್ತು ಹಾಡುಗಳಿಗಾಗಿ ತುಂಬಾ ಚರ್ಚೆಗಿಟ್ಟಿಸುತ್ತಿದೆ.  ಚಿತ್ರ ಬಿಡುಗಡೆಯಾಗಿ 2 ತಿಂಗಳು ಕಳೆದರೂ ಪುಷ್ಪಾ ಕ್ರೇಜ್ ಮಾತ್ರ ಅಭಿಮಾನಿಗಳ ತಲೆಯಿಂದ ಕೆಳಕ್ಕೆ ಇಳಿಯುವ ಮಾತೆ ಎತ್ತುತ್ತಿಲ್ಲ. ಅದು ಅಲ್ಲು ಅರ್ಜುನ್‌ನ (Allu Arjun) ಸಿಗ್ನೇಚರ್ ಸ್ಟೆಪ್ ಆಗಿರಲಿ ಅಥವಾ 'ಹೂ ಅಂತಿಯಾ'  ಹಾಡಿನಲ್ಲಿ ಸಮಂತಾ ಪ್ರಭು (Samantha Ruth Prabhu) ಅವರ ಕಿಲ್ಲರ್ ಪರ್ಫಾಮೆನ್ಸ್ ಆಗಿರಲಿ. ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಅಂದ ಹಾಗೆ, 'O Antava Mava' ಹಾಡಿನ ವಿಷಯಕ್ಕೆ ಬಂದರೆ, ಅದಕ್ಕೆ ಸಂಬಂಧಿಸಿದ ವಿಶೇಷ ಸಂಗತಿಯೊಂದು ಇತ್ತೀಚಿಗೆ ಬಹಿರಂಗಗೊಂಡಿದೆ. ವಾಸ್ತವದಲ್ಲಿ ಈ ಹಾಡಿಗಾಗಿ ಮೊದಲು ಸಮಂತಾ ರುತ್ ಪ್ರಭು ಅವರಿಗೂ ಮುನ್ನ  ನೋರಾ ಫತೇಹಿ (Nora Fatehi) ಅವರನ್ನು ಸಂಪರ್ಕಿಸಲಾಗಿತ್ತು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಸಮಂತಾ-ನಾಗ ಚೈತನ್ಯ ಪ್ಯಾಚ್-ಅಪ್! ಮೊದಲು ವಿಚ್ಛೇದನ ಅರ್ಜಿ ಸಲ್ಲಿಸಿದ್ಯಾರು? ತಂದೆ ನಾಗಾರ್ಜುನ ಬಿಚ್ಚಿಟ್ಟರು ಸತ್ಯ!


ಪುಷ್ಪಾ ಚಿತ್ರದ 'ಹೂ ಅಂತಿಯಾ ಮಾವಾ' ಹಾಡಿನಲ್ಲಿ ಸಮಂತಾ ಪ್ರಭು ಅವರ ಬೋಲ್ಡ್ ಲುಕ್ ಸಾಕಷ್ಟು ಸುದ್ದಿಯಲ್ಲಿದೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ. ಈ ಹಾಡಿನಲ್ಲಿ ಸಮಂತಾ ವಿಶಿಷ್ಟ ಲುಕ್‌ನಲ್ಲಿದ್ದಾರೆ. ಹಾಡಿನ ಸಾಹಿತ್ಯವು ತುಂಬಾ ಬೋಲ್ಡ್ ಆಗಿದ್ದು, ಇದು ಸಾಕಷ್ಟು ಸುದ್ದಿ ಮಾಡಿದೆ. ಆದರೆ ಈ ಹಾಡು ಸಮಂತಾಗಿಂತ ಮೊದಲು ನಟಿ ಮತ್ತು ಖ್ಯಾತ ನೃತ್ಯಗಾರ್ತಿ ನೋರಾ ಫತೇಹಿಗೆ ನೀಡಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಮಾತುಕತೆಗಳಲ್ಲಿ ಹೊಂದಾಣಿಕೆಯಾಗದ ಕಾರಣ ಈ ಹಾಡಿಗಾಗಿ ಸಮಂತಾ ಅವರನ್ನು ಅಪ್ರೋಚ್ ಮಾಡಲಾಯಿತು ಎನ್ನಲಾಗಿದೆ. 


ಇದನ್ನೂ ಓದಿ-O Antava..Oo Oo Antava Video: 'ಪುಷ್ಪ' ಚಿತ್ರದ ಈ ಹಾಡಿನ ಚಿತ್ರೀಕರಣದ ಮತ್ತೊಂದು ವಿಡಿಯೋ ವೈರಲ್


ಯಾವ ಕಾರಣಕ್ಕೆ ನೋರಾ ಈ ಬ್ಲಾಕ್ ಬಸ್ಟರ್ ಹಾಡನ್ನು ಬಿಡಬೇಕಾಯಿತು
ಮಾಧ್ಯಮ ವರದಿಗಳ ಪ್ರಕಾರ, ಈ ಹಾಡನ್ನು ನೋರಾ ಫತೇಹಿಗೆ ಆಫರ್ ಮಾಡಿದ ಸಂದರ್ಭದಲ್ಲಿ ನೋರಾ ಹಾಡಿಗಾಗಿ ಭಾರಿ ಸಂಭಾವನೆಯನ್ನೇ ಕೇಳಿದ್ದರು ಎನ್ನಲಾಗಿದೆ. ಇದಕ್ಕೆ ನಿರ್ಮಾಪಕರು  ಒಪ್ಪಲಿಲ್ಲ, ಆದ್ದರಿಂದ ನೋರಾ ಈ ಹಾಡಿನಿಂದ ಹೊರಗುಳಿದರು ಎನ್ನಲಾಗಿದೆ. ಮಾಧ್ಯಮ ವರದಿಗಳನ್ನು ನಂಬುವುದಾದರೆ, ನೋರಾ ಹೊರತುಪಡಿಸಿ, ಈ ಹಾಡನ್ನು ಬಾಲಿವುಡ್ ನಟಿ ದಿಶಾ ಪಾಟ್ನಿಗೆ (Disha Patni) ಕೂಡ ಆಫರ್ ಮಾಡಲಾಗಿದೆ. ಆದರೆ ದಿಶಾ ಪಟ್ನಿ ಒಬ್ಬ ನಟಿ ಮತ್ತು ಈ ಕಾರಣದಿಂದಾಗಿ ಅವರು ಬಹುಶಃ ಸೌತ್ ಸಿನಿಮಾದಲ್ಲಿ ಐಟಂ ನಂಬರ್ ಮಾಡಲು ನಿರಾಕರಿಸಿದ್ದಾರೆ. ಇದಾದ ನಂತರ ಈ ಹಾಡು ಸಮಂತಾ ಪಾಲಾಯಿತು ಮತ್ತು ಅಲ್ಲು ಅರ್ಜುನ್ ಕಾರಣದಿಂದ ಅವರು ಈ ಹಾಡಿಗೆ ಯೆಸ್ ಹೇಳಿದ್ದಾರೆ ಎನ್ನಲಾಗಿದೆ. ಮತ್ತು ಈ ಹಾಡು ಇದೀಗ ಇಡೀ ವಿಶ್ವದಲ್ಲಿಯೇ ಭಾರಿ ಸಂಚಲನ ಮೂಡಿಸಿದೆ ಎಂಬುದು ಇದೀಗ ಇತಿಹಾಸ.


ಇದನ್ನೂ ಓದಿ-Oo Antava Mava: ಕೇವಲ ಮೂರೇ ನಿಮಿಷದ ಐಟಂ ಸಾಂಗ್ ಗಾಗಿ Samantha Ruth ಪಡೆದ ಸಂಭಾವನೆ ಎಷ್ಟು ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.