ಇಂದು ತೆಲುಗು ನಟ ರಾಮ್‌ ಚರಣ್‌ಗೆ (Ram Charan Birthday) ಹುಟ್ಟುಹಬ್ಬದ ಸಂಭ್ರಮ. 37ನೇ ವಸಂತಕ್ಕೆ ಕಾಲಿಟ್ಟ ನಟ ಸದ್ಯ ‘ಆರ್​ಆರ್​ಆರ್​’ ಚಿತ್ರದಲ್ಲಿನ ಪಾತ್ರಕ್ಕಾಗಿ ಜನರ ಮನಸೆಳೆದಿದ್ದಾರೆ. ಅವರು ಅಭಿನಯಕ್ಕೆ  ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'ಕೆಜಿಎಫ್‌-2' ಜೊತೆ 'ಕೆಜಿಎಫ್‌-1' ರೀ ರಿಲೀಸ್..!‌ ಕೇರಳದಲ್ಲಿ ಹೇಗಿದೆ ಗೊತ್ತಾ ಯಶ್‌ ಹವಾ..?


ರಾಮ್​ ಚರಣ್​ಗೆ  (Ram Charan) ಸಾಕು ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಇತ್ತೀಚೆಗೆ ‘ಆರ್​ಆರ್​ಆರ್’ ಪ್ರಚಾರದ ಸಮಯದಲ್ಲೂ ತಮ್ಮ ಸಾಕುನಾಯಿಯೊಂದಿಗೆ ಕಾಣಿಸಿಕೊಂಡು, ಗಮನ ಸೆಳೆದಿದ್ದರು. 


RRR ಸಿನಿಮಾ ಬಳಿಕ ರಾಮ್‌ ಚರಣ್‌ ಸದ್ಯ ‘ಆಚಾರ್ಯ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ಮೆಗಾ ಸ್ಟಾರ್' ಚಿರಂಜೀವಿ ಪುತ್ರ ರಾಮ್ ಚರಣ್, ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ. 


ತೆಲುಗು ನಟ ರಾಮ್ ಚರಣ್‌ಗೆ RRR ಸಿನಿಮಾ ಬಹುದೊಡ್ಡ ಗೆಲುವನ್ನು ನೀಡಿದೆ. ಆ ಹಿನ್ನೆಲೆಯಲ್ಲಿ ರಾಮ್ ಚರಣ್ ಅಭಿಮಾನಿಗಳಿಗೆ, ಆತ್ಮೀಯರಿಗೆ, ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ. ವಿಶೇಷವೆಂದರೆ, ಅವರು ಕನ್ನಡದಲ್ಲೂ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.


ಇದನ್ನೂ ಓದಿ: KGF2 Trailer: ‘ಕೆಜಿಎಫ್​ 2’ ಟ್ರೇಲರ್‌ ರಿಲೀಸ್‌ಗೆ ಕೌಂಟ್​ಡೌನ್ ಶುರು!


'ಎಸ್‌ಎಸ್‌ ರಾಜಮೌಳಿ ಅವರ RRR ಸಿನಿಮಾಗಾಗಿ ಅಪಾರ ಪ್ರೀತಿ ಮತ್ತು ಮೆಚ್ಚುಗೆಗೆ ಧನ್ಯವಾದಗಳು. ಅತ್ಯಂತ ಉತ್ಸಾಹದಿಂದ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ. ಈ ಅದ್ಭುತ ಹುಟ್ಟುಹಬ್ಬದ ಉಡುಗೊರೆಯನ್ನು ನಾನು ನಮ್ರತೆಯಿಂದ ಸ್ವೀಕರಿಸುತ್ತೇನೆ..' ಎಂದು ರಾಮ್ ಚರಣ್ ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.