ನವದೆಹಲಿ : ಉದ್ಯಮಿ ರಾಜ್ ಕುಂದ್ರಾ (Raj Kundra) ಮತ್ತು ಅವರ ಐಟಿ ಮುಖ್ಯಸ್ಥ ರಿಯಾನ್ ಥೋರ್ಪ್ ಅವರನ್ನು ಜುಲೈ 27 ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಇಬ್ಬರನ್ನೂ ಜುಲೈ 27 ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿ, ಮುಂಬೈನ ಮ್ಯಾಜಿಸ್ಟ್ರೇಟ್ ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ. ಇದೀಗ ಪತಿ ಬಂಧನದ ಬಗ್ಗೆ (Raj Kundra arrest) ಇದೆ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಹೇಳಿಕೆ ಹೊರ ಬಂದಿದೆ. 


COMMERCIAL BREAK
SCROLL TO CONTINUE READING

'ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಬಳಸಲಾಗುತ್ತಿತ್ತು ಪೋರ್ನೋಗ್ರಾಫಿ ಹಣ : 
ರಾಜ್ ಕುಂದ್ರ (Raj Kundra) ಅಶ್ಲೀಲ ಚಿತ್ರಗಳ ನಿರ್ಮಾಣದಲ್ಲಿ ತೊಡಗಿರುವ ವಿಚಾರ ಗಮನಕ್ಕೆ ಬಂದಿತ್ತೇ ಎನ್ನುವ ಬಗ್ಗೆ ಶಿಲ್ಪಾ ಶೆಟ್ಟಿಯನ್ನು (Shilpa Shetty) ಪ್ರಶ್ನಿಸಲಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ, ಈ ಅಶ್ಲೀಲ ಚಿತ್ರಗಳಿಂದ ಗಳಿಸಿರುವ ಹಣವನ್ನು ಆನ್‌ಲೈನ್ ಬೆಟ್ಟಿಂಗ್‌ ನಲ್ಲಿ (Online betting) ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಪರಾಧ ವಿಭಾಗವು ಈ ಹಣಕಾಸಿನ ವಹಿವಾಟಿನ ಬಗ್ಗೆ ತನಿಖೆ ನಡೆಸುತ್ತಿದೆ. 


ಇದನ್ನೂ ಓದಿ : Pornography Video Case: Raj Kundra ಕರೆದುಕೊಂಡು Shilpa Shetty ನಿವಾಸಕ್ಕೆ ತಲುಪಿದ Crime Branch ತಂಡ, ನೇರಾ-ನೇರ ವಿಚಾರಣೆ ಸಾಧ್ಯತೆ


'ನನ್ನ ಪತಿ ನಿರಪರಾಧಿ'
ಈಗ, ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿರುವ ಮುಂಬೈ ಪೊಲೀಸ್ (Mumbai Police) ಮೂಲಗಳ ಪ್ರಕಾರ, ಶಿಲ್ಪಾ ತನ್ನ ಪತಿ ರಾಜ್ ಕುಂದ್ರಾ ನಿರಪರಾಧಿ ಎಂದು ಅಪರಾಧ ವಿಭಾಗ ಪೋಲಿಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಹಾಟ್‌ಶಾಟ್‌ಗಳ ಅಪ್ಲಿಕೇಶನ್‌ (Hotshot App) ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದೂ  ಶಿಲ್ಪಾ ಹೇಳಿದ್ದಾರೆ. ಅಲ್ಲದೆ, ತನ್ನ ಪತಿ ರಾಜ್ ಕುಂದ್ರಾ ಯಾವುದೇ ರೀತಿಯ ಅಶ್ಲೀಲ ಚಿತ್ರ ನಿರ್ಮಾಣ ದಲ್ಲಿ ಭಾಗಿಯಾಗಿರಲಿಲ್ಲ ಎಂದಿದ್ದಾರೆ. 


ನಟಿ ಶಿಲ್ಪಾ ಶೆಟ್ಟಿ ಪತಿಗೆ ಮತ್ತಷ್ಟು ಸಂಕಷ್ಟ: ಪೊಲೀಸ್ ಕಸ್ಟಡಿ ಅವಧಿ ಮತ್ತಷ್ಟು ವಿಸ್ತರಣೆ..!


ಇಲ್ಲಿವರೆಗೆ ಹತ್ತು ಜನರ ಬಂಧನ : 
ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಮೊಬೈಲ್ ಆ್ಯಪ್‌ಗಳ (Mobile app) ಮೂಲಕ ಪ್ರಸಾರ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಈವರೆಗೆ ಕುಂದ್ರಾ ಅವರೊಂದಿಗೆ 10 ಜನರನ್ನು ಬಂಧಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮುಂಬೈ ಕ್ರೈಂ ಬ್ರಾಂಚ್ ನಲ್ಲಿ (Mumbai crime branch) ಪ್ರಕರಣ ದಾಖಲಾಗಿದೆ. ಮೊಬೈಲ್ ಅಪ್ಲಿಕೇಶನ್‌ನ ಹಾಟ್‌ಶಾಟ್‌ಗಳ ಮೂಲಕ ಅಶ್ಲೀಲ ಕಂಟೆಂಟ್ ಸ್ಟ್ರೀಮಿಂಗ್ ಮಾಡುವಲ್ಲಿ ತೊಡಗಿದ್ದ ಲಂಡನ್ ಮೂಲದ ಸಂಸ್ಥೆಯೊಂದಿಗೆ ಕುಂದ್ರಾ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.