ನವದೆಹಲಿ: ಅಶ್ಲೀಲ ಚಿತ್ರಗಳನ್ನು (ನೀಲಿ ಚಿತ್ರ) ತಯಾರಿಸಿದ ಮತ್ತು ಕೆಲವು ಆ್ಯಪ್ಗಳ ಮೂಲಕ ಅವುಗಳನ್ನು ಹಂಚಿಕೆ ಮಾಡಿರುವ ಆರೋಪದ ಮೇರೆಗೆ ಬಂಧಿತರಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಜು.19ರಂದು ಬಂಧಿತರಾಗಿದ್ದ ರಾಜ್ ಕುಂದ್ರಾರನ್ನು ಜು.23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಈ ಅವಧಿಯನ್ನು ಜು.27ರವರೆಗೆ ವಿಸ್ತರಣೆ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ(Raj Kundra) ತನಿಖೆಗೆ ಸಹಕಾರ ನೀಡುತ್ತಿಲ್ಲ. ಇನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಕಾಲ ರಾಜ್ ಕುಂದ್ರಾರನ್ನು ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮನವಿ ಮಾಡಿದ್ದರು. ಅಂತಿಮವಾಗಿ ನ್ಯಾಯಾಲಯವು ಕುಂದ್ರಾ ಮತ್ತು ಅವರ ಆಪ್ತ ಸಹಾಯಕ ರಿಯಾನ್ ಥಾರ್ಪ್ ಯನ್ನು 4 ದಿನ ಮಾತ್ರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ.
ಇದನ್ನೂ ಓದಿ: Maharashtra Rain: ಮಹಾರಾಷ್ಟ್ರದಲ್ಲಿ ಮುಂದುವರೆದ ವರುಣನ ಆರ್ಭಟ, ಹಲವು ಜಿಲ್ಲೆಗಳು ಜಲಾವೃತ್ತ
Maharashtra: Businessman Raj Kundra & one Ryan Thorpe have been sent to police custody till 27th July
(File pic) pic.twitter.com/SGLb8xJTwg
— ANI (@ANI) July 23, 2021
ಪ್ರಕರಣದ ತನಿಖೆಯಲ್ಲಿ ಅನೇಕ ಮಹತ್ವದ ಅಂಶಗಳು ಬೆಳಕಿಗೆ ಬರುತ್ತಿವೆ. ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ(Porn Films)ಗಳನ್ನು ನಿರ್ಮಾಣ ಮಾಡಿ ಅದರಿಂದ ಬರುತ್ತಿದ್ದ ಆದಾಯವನ್ನು ಬೆಟ್ಟಿಂಗ್ ಗೆ ಬಳಸಿಕೊಂಡಿರಬಹುದೆಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಶಂಕಿಸಿದ್ದಾರೆ. ಹಾಟ್ಶಾಟ್ ಅಪ್ಲಿಕೇಶನ್ ನಲ್ಲಿನ ವಯಸ್ಕರ ಸಿನಿಮಾಗಳು ಮತ್ತು ಸ್ಯಾನ್ ಬಾಕ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. 19 ವಯಸ್ಕ ಚಿತ್ರಗಳಿಗೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಮತ್ತು ಉದ್ಯಮಿಯೊಬ್ಬರ ನಡುವೆ ನಡೆದಿರುವ ಒಪ್ಪಂದದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Police suspect that money earned from pornography was used for online betting. This is why transactions between Raj Kundra's Yes bank account and United Bank of Africa account need to be investigated, Mumbai Police tells Court
— ANI (@ANI) July 23, 2021
ನೀಲಿ ಚಿತ್ರಗಳಿಂದ ಗಳಿಸಿದ ಆದಾಯವನ್ನು ಆನ್ಲೈನ್ ಬೆಟ್ಟಿಂಗ್(Online Betting) ಗೆ ಉಪಯೋಗಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಕುಂದ್ರಾ ಅವರ ಲ್ಯಾಪ್ ಟಾಪ್ ಸೀಜ್ ಮಾಡಲಾಗಿದ್ದು, 51 ಅಡಲ್ಟ್ ಸಿನಿಮಾಗಳು ಸೇರಿ 48 ಟಿಬಿ ಡೇಟಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Mumbai: ಮುಂಬೈನಲ್ಲಿ ಭಾರೀ ಮಳೆ ಮಧ್ಯೆ ಕಟ್ಟಡ ಕುಸಿದು ಮೂವರ ಮೃತ್ಯು, 7 ಮಂದಿಗೆ ಗಾಯ
ತನಿಖೆಯ ಭಾಗವಾಗಿ ಪೊಲೀಸರು ಕುಂದ್ರಾ ಅವರ ‘ವಯಾನ್ ಇಂಡಸ್ಟ್ರೀಸ್’(Viaan Industries) ಅಕೌಂಟೆಂಟ್ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಪ್ರತಿತಿಂಗಳು 4 ರಿಂದ 10 ಸಾವಿರ ಪೌಂಡ್ಸ್ ಹಣವನ್ನು ಖರ್ಚು ಮಾಡಲಾಗುತ್ತಿತ್ತು ಎಂದು ಅಕೌಂಟೆಂಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪೊಲೀಸರು ಕುಂದ್ರಾರನ್ನು ಅರೆಸ್ಟ್ ಮಾಡಿದ ಮರುದಿನವೇ ಅಕೌಂಟೆಂಟ್ ಕೆಲವು ಮಹತ್ವದ ಡೇಟಾವನ್ನು ಡಿಲೀಟ್ ಮಾಡಿದ್ದಾರೆ. ಅವುಗಳನ್ನು ಮತ್ತೆ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ನಮಗೆ ಅನೇಕ ಮಹತ್ವದ ದಾಖಲೆಗಳು ಸಿಕ್ಕಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.