Pornography Video Case: Raj Kundra ಕರೆದುಕೊಂಡು Shilpa Shetty ನಿವಾಸಕ್ಕೆ ತಲುಪಿದ Crime Branch ತಂಡ, ನೇರಾ-ನೇರ ವಿಚಾರಣೆ ಸಾಧ್ಯತೆ

Pornography Video Case: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿತನಾಗಿರುವ ಉದ್ಯಮಿ ರಾಜ್ ಕುಂದ್ರಾನನ್ನು  (Raj Kundra) ಕರೆದುಕೊಂಡು ಮುಂಬೈ ಕ್ರೈಂ ಬ್ರಾಂಚ್ ಪೋಲೀಸರ ತಂಡ ಶಿಲ್ಪಾ ಶೆಟ್ಟಿ (Shilpa Shetty) ನಿವಾಸಕ್ಕೆ ತಲುಪಿದೆ. 

Written by - Nitin Tabib | Last Updated : Jul 23, 2021, 05:22 PM IST
  • ಶಿಲ್ಪಾ ಶೆಟ್ಟಿ ಮನೆ ಮೇಲೆ ದಾಳಿ ನಡೆಸಲು ತಲುಪಿದ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು.
  • ಅಶ್ಲೀಲ ವಿಡಿಯೋ ನಿರ್ಮಾಣ ಆರೋಪ ಎದುರಿಸುತ್ತಿದ್ದಾನೆ ರಾಜ್ ಕುಂದ್ರಾ.
  • ಶಿಲ್ಪಾ ಹಾಗೂ ರಾಜ್ ಕುಂದ್ರಾ ಮುಖಾಮುಖಿ ವಿಚಾರಣೆ ನಡೆಸುವ ಸಾಧ್ಯತೆ.
Pornography Video Case: Raj Kundra ಕರೆದುಕೊಂಡು Shilpa Shetty ನಿವಾಸಕ್ಕೆ ತಲುಪಿದ Crime Branch ತಂಡ, ನೇರಾ-ನೇರ ವಿಚಾರಣೆ ಸಾಧ್ಯತೆ

ಮುಂಬೈ: Pornography Video Case - ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಉದ್ಯಮಿ ರಾಜ್ ಕುಂದ್ರಾ (Raj Kundra) ಅವರ ಮನೆ ಮೇಲೆ ದಾಳಿ ನಡೆಸಲು ಮುಂಬೈ ಅಪರಾಧ ವಿಭಾಗದ ತಂಡ (Mumbai Crime Branch) ಜುಹುವಿನ ಶಿಲ್ಪಾ ಶೆಟ್ಟಿಯ (Shilpa Shetty) ನಿವಾಸಕ್ಕೆ ಬಂದು ತಲುಪಿದೆ. ದಾಳಿಯ ಸಮಯದಲ್ಲಿ ಮುಂಬೈ ಪೊಲೀಸರು ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಯನ್ನು ಮುಖಾಮುಖಿ ಕುಳ್ಳಿರಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜುಲೈ 27ರವರೆಗೆ ಬಂಧನ ಅವಧಿ ವಿಸ್ತರಣೆ
ಈ ದಾಳಿಗೂ ಕೆಲ ಗಂಟೆಗಳು ಮೊದಲು ಮುಂಬೈ ನ್ಯಾಯಾಲಯ ರಾಜ್ ಕುಂದ್ರಾ ಅವರ ಪೊಲೀಸ್ ಕಸ್ಟಡಿಯನ್ನು ಜುಲೈ 27ರವರೆಗೆ ವಿಸ್ತರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದ ಪೊಲೀಸರು ಇನ್ನೂ ಈ ಪ್ರಕರಣದ ವಿಚಾರಣೆ ಬಾಕಿ ಇದ್ದು, ಹಲವಾರು ಸಾಕ್ಷಾಧಾರಗಳು ಸಿಗುವ ನಿರೀಕ್ಷೆ ಇದೆ ಮತ್ತು ಇದಕ್ಕಾಗಿ ಸಮಯಾವಕಾಶ ಬೇಕು ಎಂದು ಹೇಳಿದ್ದರು. ಹೀಗಾಗಿ ನ್ಯಾಯಾಲಯ ರಾಜ್ ಕುಂದ್ರಾ ಸಹಪಾಟಿ ರಿಯಾನ್ ಥೋರ್ಪೆಯನ್ನು ಕೂಡ ಬಂಧನದಲ್ಲಿರಿಸುವಂತೆ ಆದೇಶ ನೀಡಿದೆ. ಫೆಬ್ರುವರಿ 2021ರಲ್ಲಿ ಬೆಳಕಿಗೆ ಬಂದ ಈ ಪ್ರಕರಾದಲ್ಲಿ ಇದುವರೆಗೆ ರಾಜ್ ಕುಂದ್ರಾ ಸೇರಿದಂತೆ 11 ಜನರನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಮುಂಬೈ ಪೊಲೀಸರು ರಾಜ್ ಕುಂದ್ರಾನನ್ನು ಇನ್ನೂ 7 ದಿನಗಳ ಕಾಲ ಪೋಲೀಸರ ವಶದಲ್ಲಿರಿಸಲು ಮನವಿ ಮಾಡಿದ್ದರು.

ಇದನ್ನೂ ಓದಿ-ನಟಿ ಶಿಲ್ಪಾ ಶೆಟ್ಟಿ ಪತಿಗೆ ಮತ್ತಷ್ಟು ಸಂಕಷ್ಟ: ಪೊಲೀಸ್ ಕಸ್ಟಡಿ ಅವಧಿ ಮತ್ತಷ್ಟು ವಿಸ್ತರಣೆ..!

ಜುಲೈ 19ರಂದು ಕುಂದ್ರಾನನ್ನು ಬಂಧಿಸಲಾಗಿತ್ತು
ರಾಜ್ ಕುಂದ್ರಾ, ಖ್ಯಾತ ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿಯ ಪತಿಯಗಿದ್ದಾನೆ. ಅಶ್ಲೀಲ ವಿಡಿಯೋ ನಿರ್ಮಾಣದ ಆರೋಪದ ಮೇಲೆ ಮುಂಬೈ ಪೋಲೀಸರ ಕ್ರೈಂ ಬ್ರಾಂಚ್ ತಂಡ ಕುಂದ್ರಾನನ್ನು (Raj Kundra) ಜುಲೈ 19 ಕ್ಕೆ ಬಂಧಿಸಿತ್ತು. ಭಾರತೀಯ ದಂಡ ಸಂಹಿತೆ (IPC) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ರಾಜ್ ಕುಂದ್ರಾ ಅವರ ಆ್ಯಪ್ ಹಾಟ್‌ಶಾಟ್‌ನಲ್ಲಿ (Hotshots) ಅಶ್ಲೀಲ ಚಿತ್ರಗಳನ್ನು ಮಾಡಲು ಪ್ರತಿದಿನ ಹೊಸ ವಾಟ್ಸಾಪ್ ಗ್ರೂಪ್ ರಚಿಸಲಾಗುತ್ತಿತ್ತು ಎನ್ನಲಾಗಿದೆ. ಮತ್ತೊಂದೆಡೆ, ರಾಜ್ ಕುಂದ್ರಾ ತಮ್ಮ ಈ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯುತ್ತಿದ್ದರು ಎಂದು ಆರೋಪಿಸಲಾಗಿದೆ. 

ಇದನ್ನೂ ಓದಿ-Shilpa Shetty First Post After Raj Kundra Arrest: ಪತಿ Raj Kundra ಬಂಧನದ ಬಳಿಕ ಮೌನ ಮುರಿದ Shilpa Shetty ಹೇಳಿದ್ದೇನು?

ವಿವಾದಗಳ ಜೊತೆ ಹಳೆ ಸಂಬಂಧ
2009 ರಲ್ಲಿ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಖರೀದಿಸಿದ್ದರು ಇದರ ನಂತರ, 2013 ರಲ್ಲಿ, ಅವರು ಐಪಿಎಲ್ನಲ್ಲಿ ಬೆಟ್ಟಿಂಗ್ ಆರೋಪ ಎದುರಿಸಿದ್ದರು. ಈ ಪ್ರಕರಣದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಶ್ರೀ ಸಂತ ಸೇರಿದಂತೆ ಇತರ 3 ಆಟಗಾರರನ್ನು ಸಹ ಬಂಧಿಸಲಾಗಿದೆ. ರಾಜ್ ಅವರನ್ನು ದೆಹಲಿ ಪೊಲೀಸರು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ-ಉದ್ಯಮಿ ರಾಜ್ ಕುಂದ್ರಾಗೆ ಹೆಚ್ಚಿದ ಸಂಕಷ್ಟ , ಉಮೇಶ್ ಕಾಮತ್ ಜೊತೆ ನಡೆಸಿದ ವ್ಯವಹಾರಗಳ ಸಾಕ್ಷಿ ಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News