ಬೆಂಗಳೂರು : ಮತ್ತೆ ವೀಕ್ಷಕರನ್ನು ನಕ್ಕು ನಗಿಸಲು ಬರುತ್ತಿದೆ ದಿ ಕಪಿಲ್ ಶರ್ಮಾ ಶೋ'. ಕಳೆದ ಕೆಲವು  ವಾರಗಳಿಂದ ಈ ಶೋ ಪ್ರಸಾರವಾಗಿರಲಿಲ್ಲ.  ಆದರೆ ಇದೀಗ ಮತ್ತೆ ಈ ಕಾಮಿಡಿ ಶೋ ಪ್ರಸಾರವಾಗಲಿದೆ. ಇತ್ತೀಚಿನ ದಿನಗಳಲ್ಲಿ ಕಪಿಲ್ ಶರ್ಮಾ ತಮ್ಮ ತಂಡದೊಂದಿಗೆ ವಿದೇಶ ಪ್ರವಾಸದಲ್ಲಿದ್ದಾರೆ.  ವಿದೇಶಗಳಲ್ಲಿ ಶೋ ನಡೆಯುತ್ತಿದೆ. ಈ ಪ್ರವಾಸ ಮುಗಿದ ತಕ್ಷಣ, ಮತ್ತೆ 'ದಿ ಕಪಿಲ್ ಶರ್ಮಾ ಶೋ'  ಆರಂಭವಾಗಲಿದೆ. 


COMMERCIAL BREAK
SCROLL TO CONTINUE READING

ಮತ್ತೆ ವೀಕ್ಷಕರಿಗೆ ಹಾಸ್ಯ ಕಚಗುಳಿ : 
ಕಪಿಲ್ ಶರ್ಮಾ ನೇತೃತ್ವದ ‘ದಿ ಕಪಿಲ್ ಶರ್ಮಾ ಶೋ’ ಬಹಳ ಸಮಯದಿಂದ ಜನರನ್ನು ರಂಜಿಸುತ್ತಿದೆ. ಈ ಕಾರ್ಯಕ್ರಮದ ಪ್ರತಿ ಸೀಸನ್‌ ಅಪಾರ ಪ್ರಮಾಣದ ಪ್ರೀತಿಯನ್ನು ಗಳಿಸಿದೆ.  ಈ ಶೋವನ್ನು ನಿಲ್ಲಿಸಿದ ನಂತರ ಅಭಿಮಾನಿಗಳು ನಿರಾಸೆಗೊಂಡಿದ್ದರು.  ಅಭಿಮಾನಿಗಳ ನಿರಂತರ ಬೇಡಿಕೆ ಹಿನ್ನೆಲೆಯಲ್ಲಿ ಶೋ ಮತ್ತೆ ಮರಳುತ್ತಿದೆ ಎನ್ನಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಕಪಿಲ್ ಶರ್ಮಾ ಶೋ ಮತ್ತೆ ಆರಂಭವಾಗಲಿದೆ. ಪ್ರಾರಂಭವಾಗಲಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.


ಇದನ್ನೂ ಓದಿ : ಶೀಘ್ರದಲ್ಲೇ ಜೀ ಕನ್ನಡದಲ್ಲಿ ಅಬ್ಬರಿಸಲಿದ್ದಾನೆ ರಾಕಿ ಭಾಯ್...!


ಈ ದಿನದಿಂದ ಮೊದಲ ಸಂಚಿಕೆ : 
ಮಾಧ್ಯಮ ವರದಿಯ ಪ್ರಕಾರ,  ಸೆಪ್ಟೆಂಬರ್ 3 ರಿಂದ 'ದಿ ಕಪಿಲ್ ಶರ್ಮಾ ಶೋ' ಮತ್ತೆ ಪ್ರೇಕ್ಷಕರನ್ನು ನಕ್ಕು ನಗಿಸಲಿದೆ ಎಂದು ಹೇಳಲಾಗುತ್ತಿದೆ.  ಆದರೆ, ಈ ಬಗ್ಗೆ ಕಪಿಲ್ ಶರ್ಮಾ ಅಥವಾ ಅವರ ತಂಡ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಈ ಸುದ್ದಿ ಕೇಳಿ ಅಭಿಮಾನಿಗಳು ಮಾತ್ರ ಸಂತಸಗೊಂಡಿದ್ದಾರೆ. 


ಪ್ರವಾಸದಲ್ಲಿರುವ ಕಪಿಲ್ ಶರ್ಮಾ :
ಕೆಲವು ದಿನಗಳ ಹಿಂದೆ ಕಪಿಲ್ ಶರ್ಮಾ ತಮ್ಮ ತಂಡದೊಂದಿಗೆ ಯುಎಸ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಶೋಗಳನ್ನು ನಡೆಸುತ್ತಿದ್ದಾರೆ. ಇದಲ್ಲದೇ ಕೆನಡಾದ ಕೆಲವು ನಗರಗಳಿಗೂ ಭೇಟಿ ನೀಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. 


ಇದನ್ನೂ ಓದಿ : ಕಿಚ್ಚನಿಗೆ ಕೊರೊನಾ..! ಸುದೀಪ್ ಆರೋಗ್ಯದ ಬಗ್ಗೆ ಜಾಕ್ ಮಂಜು ಹೇಳಿದ್ದೇನು?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.