ಬೆಂಗಳೂರು: ಕಿಚ್ಚ ಸುದೀಪ್ ಅಭಿನಯಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಇದೆ ಜುಲೈ 28 ರಂದು ಬಿಡುಗಡೆಗೆ ಸಿದ್ಧವಾಗಿದೆ.ಇದೆ ವೇಳೆ ಅದು ವಿದೇಶದಲ್ಲಿಯೂ ಕೂಡ ಸಾಕಷ್ಟು ಸದ್ದುಮಾಡಲು ಸನ್ನದ್ದವಾಗಿದೆ.
ಹೌದು, ಈಗ ಆರ್.ಆರ್.ಆರ್, ಕೆಜಿಎಫ್ 2 ನಂತರ ವಿಕ್ರಾಂತ್ ರೋಣ ಸಿನಿಮಾ ವಿದೇಶದಲ್ಲಿ 1200ಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಯಾಗಲಿದೆ.ಈಗ ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಒನ್ ಟ್ವೆಂಟಿ 8 ಮೀಡಿಯಾ ಮತ್ತು ಕಾಸ್ಮೋಸ್ ಎಂಟರ್‌ಟೈನ್‌ಮೆಂಟ್‌ನ ಆಪರೇಷನ್ ಮುಖಸ್ಥ ಯೋಗೀಶ್ ದ್ವಾರಕೀಶ್ ಬುಂಗಾಲೆ (ದ್ವಾರಕೀಶ್ ಚಿತ್ರ) ವಿದೇಶದಲ್ಲಿ 30 ಕ್ಕೂ ಹೆಚ್ಚು ದೇಶಗಳಲ್ಲಿ 1200 ಪರದೆಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Udupi : ಚಾಕಲೇಟ್ ನುಂಗಿ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವು!
"ಕಳೆದ ಮೂರು ತಿಂಗಳುಗಳಿಂದ ವಿಕ್ರಾಂತ್ ರೋಣ ಚಿತ್ರವನ್ನು ವಿದೇಶದಲ್ಲಿ ಬಿಡುಗಡೆ ಮಾಡುವ ಕಾರ್ಯದಲ್ಲಿ ನಿರತವಾಗಿದ್ದೇವೆ.ನಾವು ಈಗಾಗಲೇ ಯುಕೆ, ಯುಎಸ್, ಕೆನಡಾ, ಯುರೋಪಿಯನ್ ರಾಷ್ಟ್ರಗಳು, ಇಡೀ ಗಲ್ಫ್, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಾಪುರ್, ನೇಪಾಳದಲ್ಲಿ ಥಿಯೇಟರ್ ಬಿಡುಗಡೆಯನ್ನು ಖಚಿತಪಡಿಸಿದ್ದೇವೆ.ಆಯಾ ದೇಶಗಳಲ್ಲಿ ಸೆನ್ಸಾರ್ ಮಂಡಳಿಗೆ ಭೇಟಿ ನೀಡಿದ ನಂತರ ಚಿತ್ರಮಂದಿರಗಳ ಪಟ್ಟಿಯೊಂದಿಗೆ ಅಧಿಕೃತ ಪ್ರಕಟಣೆಯನ್ನು ಮಾಡಲಾಗುವುದು, ಆ ನಿಟ್ಟಿನಲ್ಲಿ ಕೆಲಸವು ಈಗ ಪ್ರಾರಂಭವಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಳೆದ 15 ದಿನದಲ್ಲಿ 462 ಮಿ.ಮೀ ಮಳೆಯಾಗುವ ಮೂಲಕ ದಾಖಲೆ ಬರೆದ ಮಳೆರಾಯ
ವಿಕ್ರಾಂತ್ ರೋಣ ಚಿತ್ರವು ಭಾರತೀಯ ಭಾಷೆಗಳಾದ ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತಮಿಳಿನಲ್ಲಿ ಅಷ್ಟೇ ಅಲ್ಲದೆ ಅರೇಬಿಕ್, ಜರ್ಮನ್, ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.ವಿದೇಶಿ ಭಾಷೆಗಳಲ್ಲಿ ಜನರ ಪ್ರತಿಕ್ರಿಯೆ ಆಧರಿಸಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.