ಬೆಂಗಳೂರು: ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಜುಲೈ 28 ರಂದು ಬಿಡುಗಡೆಗೆ ಸಿದ್ಧವಾಗಿರುವ ಸಂದರ್ಭದಲ್ಲಿ ಅವರಿಗೆ ಕೊರೊನಾ ತಗುಲಿದೆ ಎನ್ನುವ ವದಂತಿ ಹರಡಿರುವ ಬೆನ್ನಲ್ಲೇ ಈಗ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ.
ಸುದೀಪ್ ಸರ್ ಗೆ ಕೊರೊನಾ ಅನ್ನೋದು ಸುಳ್ಳು ಮಾಹಿತಿ, ದೆಹಲಿಯಿಂದ ಬಂದು ಕ್ರಿಕೆಟ್ ಆಡೊವಾಗ ಮಳೆಯಲ್ಲಿ ನೆನೆದ ಕಾರಣ ವೈರಲ್ ಫೀವರ್ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಜುಲೈ 22, 23, 24 ಮೂರುದಿನಗಳು ಮುಂಬೈನಲ್ಲಿ ಪ್ರಚಾರದ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ತಾರೆ. ಅದೇ ರೀತಿಯಾಗಿ 25 ರಂದು ಹೈದರಾಬಾದ್ 26 ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಮುಗಿಸಿ 27ಕ್ಕೆ ದುಬೈನಲ್ಲಿ ನಡೆಯುವ ಪ್ರೀಮಿಯರ್ ಶೋನಲ್ಲಿ ಭಾಗವಹಿಸುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಳೆದ 15 ದಿನದಲ್ಲಿ 462 ಮಿ.ಮೀ ಮಳೆಯಾಗುವ ಮೂಲಕ ದಾಖಲೆ ಬರೆದ ಮಳೆರಾಯ
ಇದೆ ವೇಳೆ ವಿಕ್ರಾಂತ್ ರೋಣ ಸಿನಿಮಾ ವಿದೇಶದಲ್ಲಿ 1200ಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಯಾಗಲಿದೆ.ಈಗ ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಒನ್ ಟ್ವೆಂಟಿ 8 ಮೀಡಿಯಾ ಮತ್ತು ಕಾಸ್ಮೋಸ್ ಎಂಟರ್‌ಟೈನ್‌ಮೆಂಟ್‌ನ ಆಪರೇಷನ್ ಹೆಡ್ ಯೋಗೀಶ್ ದ್ವಾರಕೀಶ್ ಬುಂಗಾಲೆ (ದ್ವಾರಕೀಶ್ ಚಿತ್ರ) ವಿದೇಶದಲ್ಲಿ 30 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ.ಮತ್ತು ಸುಮಾರು 1200 ಪರದೆಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Udupi : ಚಾಕಲೇಟ್ ನುಂಗಿ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವು!
ವಿಕ್ರಾಂತ್ ರೋಣ ಚಿತ್ರವು ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಅಷ್ಟೇ ಅಲ್ಲದೆ ಅರೇಬಿಕ್, ಜರ್ಮನ್, ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆಗಳಲ್ಲಿಯೂ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಯೋಗಿ ದ್ವಾರಕೀಶ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.