ನವದೆಹಲಿ: ನಟಿ-ಮಾಡೆಲ್ ಮತ್ತು ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಯಾವಾಗಲೂ ತಮ್ಮ ಬಟ್ಟೆಯ ವಿನ್ಯಾಸದ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಇದಕ್ಕಾಗಿ ಅವರು ನಿರಂತರವಾಗಿ ಟ್ರೋಲಿಂಗ್ ಗಳನ್ನು ಎದುರಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Pathaan kranti : ಕರುನಾಡಲ್ಲಿ ಕಿಂಗ್‌ ಖಾನ್‌ ʼಪಠಾಣ್‌ʼ ಕಲೆಕ್ಷನ್‌ಗೆ ದರ್ಶನ್‌ ʼಕ್ರಾಂತಿʼ ಕಿಚ್ಚು ತಟ್ಟುತ್ತಾ..!?


ಆದರೆ ಉರ್ಫಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅವುಗಳಿಗೆ ತಮ್ಮ ಹರಿತವಾದ ಟ್ವೀಟ್ ಮೂಲಕ ಉತ್ತರ ನೀಡುವುದರ ಮೂಲಕ ವಿಭಿನ್ನ ರೀತಿಯ ಬಟ್ಟೆ ಧರಿಸುವುದನ್ನು ಮುಂದುವರೆಸಿದ್ದಾರೆ.ಇದಕ್ಕೆ ಇತ್ತೀಚಿನ ನಿದರ್ಶನ ಎನ್ನುವಂತೆ ಐಸ್ ಕ್ರೀಮ್ ಕೋನ್ ಬ್ರ್ಯಾಲೆಟ್ ಮತ್ತು ವೆಲ್ವೆಟ್ ಸ್ಕರ್ಟ್‌ ಧರಿಸಿ ಪೋಸ್ ನೀಡಿರುವ ವಿಡಿಯೋ ಈಗ ವೈರಲ್ ಆಗಿದೆ.ಇದನ್ನು ನೋಡಿದ ನೆಟ್ಟಿಗರು ಒಂದು ಕ್ಷಣ ಅವಕ್ಕಾಗಿದ್ದಾರೆ.ಕೆಲವರು ಆಕೆಯನ್ನು ಬಹಿರಂಗಪಡಿಸುವ ಉಡುಪನ್ನು ಧರಿಸಿದ್ದಕ್ಕಾಗಿ ದೂಷಿಸಿದರೆ, ಇತರರು ಆಕೆಯ ಅಸಾಂಪ್ರದಾಯಿಕ ಮತ್ತು ಫ್ಯಾಷನ್ ಪ್ರಜ್ಞೆಯನ್ನು ಶ್ಲಾಘಿಸಿದರು.


ಇದನ್ನೂ ಓದಿ- Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್‌ ಫಿದಾ!


ಬಿಗ್ ಬಾಸ್ ಒಟಿಟಿ ಸೀಸನ್ 1 ರ ಮಾಜಿ ಸ್ಪರ್ಧಿಯಾಗಿರುವ ಉರ್ಫಿ ಇತ್ತೀಚೆಗೆ 'ಸಾರ್ವಜನಿಕ ನಗ್ನತೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ' ಬಿಜೆಪಿ ನಾಯಕಿ ಚಿತ್ರಾ ಕಿಶೋರ್ ವಾಘ್ ಅವರ ವಿರುದ್ಧ ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅಂಬೋಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದ ನಂತರ ಸುದ್ದಿಯಲ್ಲಿದ್ದರು.


 

 

 

 



 

 

 

 

 

 

 

 

 

 

 

A post shared by Voompla (@voompla)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.