Viral Video: ಸೆಲ್ಪಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯ ಪೋನ್ ಕಿತ್ತೆಸೆದ ರಣಬೀರ್ ಕಪೂರ್!

ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಯನ್ನು ಕಾಣುವುದು ಹಾಗೂ ಅವರ ಜೊತೆ ಫೋಟೋ ತೆಗೆಸಿಕೊಳ್ಳುವುದು ತಮ್ಮ ಜೀವನದ ಪರಮ ಬಯಕೆಯಾಗಿರುತ್ತದೆ.ಹೀಗಾಗಿ ಸ್ಟಾರ್ ನಟರು ಸಿಕ್ಕಾಗಲೆಲ್ಲಾ ಫೋಟೋ ತೆಗೆಸಿಕೊಳ್ಳುವ ಅವಕಾಶಕ್ಕೆ ಕಾತರದಿಂದ ಕಾದಿರುತ್ತಾರೆ.

Written by - Zee Kannada News Desk | Last Updated : Jan 27, 2023, 07:23 PM IST
  • ಅಭಿಮಾನಿಯೋಬ್ಬ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆ ಸೆಲ್ಪಿ ತೆಗೆಸಿಕೊಳ್ಳಲು ಮನವಿ ಮಾಡುತ್ತಾನೆ.
  • ಇದಕ್ಕೆ ತಕ್ಷಣ ಸ್ಪಂದಿಸಿದ ನಟ ರಣಬೀರ್ ಕಪೂರ್ ಫೋಟೋಗೆ ಪೋಸ್ ನೀಡಲು ಮುಂದಾಗುತ್ತಾರೆ.
  • ಆಗ ತಕ್ಷಣ ಫೋಟೋ ಕ್ಲಿಕ್ ಆಗದ ಕಾರಣ ಎರಡನೇ ಬಾರಿ ಅಭಿಮಾನಿ ಮನವಿ ಮಾಡುತ್ತಾನೆ.
Viral Video: ಸೆಲ್ಪಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯ ಪೋನ್ ಕಿತ್ತೆಸೆದ ರಣಬೀರ್ ಕಪೂರ್! title=
screengrab

ಮುಂಬೈ: ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಯನ್ನು ಕಾಣುವುದು ಹಾಗೂ ಅವರ ಜೊತೆ ಫೋಟೋ ತೆಗೆಸಿಕೊಳ್ಳುವುದು ತಮ್ಮ ಜೀವನದ ಪರಮ ಬಯಕೆಯಾಗಿರುತ್ತದೆ.ಹೀಗಾಗಿ ಸ್ಟಾರ್ ನಟರು ಸಿಕ್ಕಾಗಲೆಲ್ಲಾ ಫೋಟೋ ತೆಗೆಸಿಕೊಳ್ಳುವ ಅವಕಾಶಕ್ಕೆ ಕಾತರದಿಂದ ಕಾದಿರುತ್ತಾರೆ.

ಈಗ ವೈರಲ್ ಆಗಿರುವ ವಿಡಿಯೋ ವೊಂದರಲ್ಲಿ ಅಭಿಮಾನಿಯೋಬ್ಬ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆ ಸೆಲ್ಪಿ ತೆಗೆಸಿಕೊಳ್ಳಲು ಮನವಿ ಮಾಡುತ್ತಾನೆ. ಇದಕ್ಕೆ ತಕ್ಷಣ ಸ್ಪಂದಿಸಿದ ನಟ ರಣಬೀರ್ ಕಪೂರ್ ಫೋಟೋಗೆ ಪೋಸ್ ನೀಡಲು ಮುಂದಾಗುತ್ತಾರೆ.ಆಗ ತಕ್ಷಣ ಫೋಟೋ ಕ್ಲಿಕ್ ಆಗದ ಕಾರಣ ಎರಡನೇ ಬಾರಿ ಅಭಿಮಾನಿ ಮನವಿ ಮಾಡುತ್ತಾನೆ.ಈ ವೇಳೆ ರೊಚ್ಚಿಗೆದ್ದ ರಣಬೀರ್ ಕಪೂರ್ ಅಭಿಮಾನಿ ಕೈಯಿಂದ ಫೋನ್ ಕಸಿದುಕೊಂಡು ಕಿತ್ತೆಸೆಯುತ್ತಾರೆ.

ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ನಟ ರಣಬೀರ್ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News