ತಮನ್ನಾ ಭಾಟಿಯಾ ಫೋಟೋದಲ್ಲಿ ವಿರಾಟ್ ಕೊಹ್ಲಿ..? ಫ್ಯಾನ್ಸ್ ಹೇಳಿದ್ದೇನು ಗೊತ್ತಾ?
ಈ ಫೋಟೋದಲ್ಲಿ, ತಮನ್ನಾ ಭಾಟಿಯಾ ಹಿಂದೆ ಕುಳಿತ ವ್ಯಕ್ತಿಯು ವಿರಾಟ್ ಕೊಹ್ಲಿಯಂತೆ ಕಾಣುತ್ತಾರೆ. ಈ ಪೋಟೋದಲ್ಲಿರುವುದು ವಿರಾಟ್ ಕೊಹ್ಲಿಯೇ ಎನ್ನುವುದು ಅಭಿಮಾನಿಗಳ ಮಾತು.
ನವದೆಹಲಿ: ತಮನ್ನಾ ಭಾಟಿಯಾ (Tamanna Bhatia) ಸೌಂದರ್ಯ ಮತ್ತು ನಟನೆಯಿಂದಾಗಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ, ನಟಿ ತನ್ನ ಪೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಪೋಟೋ ನೋಡಿ, ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ಪೋಟೋದಲ್ಲಿ ತಯಮ್ಮನ್ನಾ ಸ್ಣಿರೂ ಇರವುದನ್ನು ಕಾಣಬಹುದು.
ತಮನ್ನಾ ಫೋಟೋದಲ್ಲಿ ಕಾಣಿಸಿಕೊಂಡ ವಿರಾಟ್ :
ಈ ಫೋಟೋದಲ್ಲಿ, ತಮನ್ನಾ ಭಾಟಿಯಾ (Tamanna Bhatia) ಹಿಂದೆ ಕುಳಿತ ವ್ಯಕ್ತಿಯು ವಿರಾಟ್ ಕೊಹ್ಲಿಯಂತೆ ಕಾಣುತ್ತಾರೆ. ಈ ಪೋಟೋದಲ್ಲಿರುವುದು ವಿರಾಟ್ ಕೊಹ್ಲಿಯೇ (Virat Kohli) ಎನ್ನುವುದು ಅಭಿಮಾನಿಗಳ ಮಾತು. ಈ ಕಾರಣದಿಂದಾಗಿಯೇ ಫೋಟೋ ಸಾಕಷ್ಟು ವೈರಲ್ (Viral) ಆಗುತ್ತಿದೆ. ಜನ ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ.
MAMI ಅಧ್ಯಕ್ಷೆ ಸ್ಥಾನಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರಾಜೀನಾಮೆ
ಆದರೆ ವಿಶೇಷವೆಂದರೆ ಈ ಫೋಟೋದಲ್ಲಿ ಕಾಣುತ್ತಿರುವುದು ವಿರಾಟ್ ಕೊಹ್ಲಿಯನ್ನು ಹೋಲುವ ವ್ಯಕ್ತಿಯೇ ಹೊರತು ವಿರಾಟ್ ಕೊಹ್ಲಿ ಅಲ್ಲ. ಈ ವ್ಯಕ್ತಿ ಬಾಲಿವುಡ್ ನ (Bollywood) ಖ್ಯಾತ ಮೇಕ್ ಅಪ್ ಆರ್ಟಿಸ್ಟ್ ಫ್ಲೋರಿಯನ್ ಹ್ಯೂರೆಲ್. ಇವರು ತಮನ್ನಾ ಅವರೊಂದಿಗೆ ವಿಮಾನದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ತಮನ್ನಾ ಖಾಸಗಿ ಜೆಟ್ ನಲ್ಲಿ (Private Jet) ಪ್ರಯಾಣ ಬೆಳೆಸಿರುವ ವೇಳೆ ಈ ಪೋಟೋ ಕ್ಲಿಕ್ಕಿಸಲಾಗಿದೆ.
ವಿರಾಟ್ ಕೊಹ್ಲಿ ಮತ್ತು ತಮನ್ನಾ ಭಾಟಿಯಾ ಸಂಬಂಧದ ಬಗ್ಗೆಯೂ ಸಾಕಷ್ಟು ಮಾತುಗಳು ಕೇಳಿ ಬಂದಿತ್ತು. ನಂತರ ಇಬ್ಬರ ಬ್ರೇಕ್ ಅಪ್ ಬಗ್ಗೆಯೂ ವರದಿಯಾಗಿತ್ತು. ಇದಾದ ನಂತರ ವಿರಾಟ್ ಮತ್ತು ಅನುಷ್ಕಾ ಶರ್ಮಾ (Anushka Sharma) ವಿವಾಹವಾಗಿದ್ದಾರೆ. ಇದೀಗ ಇವರಿಗೆ ಒಂದು ಹೆಣ್ಣು ಮಗುವಿದೆ.
ಇದನ್ನೂ ಓದಿ : Babil Khan: ಇರ್ಫಾನ್ ಖಾನ್ ಪುತ್ರನಿಗೆ ಅವಕಾಶ ನೀಡಿದ ಅನುಷ್ಕಾ ಶರ್ಮಾ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.