ನಡುರಾತ್ರಿ Aishwarya Rai ಮನೆಗೆ Salman Khan ಭೇಟಿ ನೀಡಿದ್ದಾಗ ನಡೆದಿದ್ದೇನು?

Bollywoodನಲ್ಲಿ ನಡೆದ ಪ್ರೇಮಕಥೆಗಳ ಉಲ್ಲೇಖಗೊಂಡಾಗ Salman Khan ಹಾಗೂ Aishwarya Rai ಜೋಡಿಯ ಹೆಸರು ತಪ್ಪದೆ ಉಲ್ಲೇಖಗೊಳ್ಳುತ್ತದೆ.

Written by - Nitin Tabib | Last Updated : Apr 5, 2021, 08:20 PM IST
  • ಬಾಲಿವುಡ್ ನ ಪ್ರೇಮ ಕಥೆಗಳಲ್ಲಿ ಸಲ್ಮಾನ್-ಐಶ್ವರ್ಯ ರೈ ಪ್ರೇಮಕಥೆ ಕೂಡ ಒಂದು.
  • ಐಶ್ವರ್ಯ ರೈ ಮನೆಗೆ ನಡುರಾತ್ರಿ ಭೇಟಿ ನೀಡಿದ ಸಲ್ಮಾನ್ ಮಾಡಿದ್ದೇನು?
  • ಇಬ್ಬರ ಪ್ರೇಮ ಕಥೆಗೆ ತೆರೆ ಬೀಳಲು ಕಾರಣವಾಯ್ತಾ ಸಲ್ಮಾನ್ ಕೋಪ.
ನಡುರಾತ್ರಿ Aishwarya Rai ಮನೆಗೆ Salman Khan ಭೇಟಿ ನೀಡಿದ್ದಾಗ ನಡೆದಿದ್ದೇನು? title=
Salman Khan-Aishwarya Rai Love Story

ನವದೆಹಲಿ: Bollywoodನಲ್ಲಿ ನಡೆದ ಪ್ರೇಮಕಥೆಗಳ ಉಲ್ಲೇಖಗೊಂಡಾಗ Salman Khan ಹಾಗೂ Aishwarya Rai ಜೋಡಿಯ ಹೆಸರು ತಪ್ಪದೆ ಉಲ್ಲೇಖಗೊಳ್ಳುತ್ತದೆ. ಇವರು 1999 ರಲ್ಲಿ ಖ್ಯಾತ ನಿರ್ಮಾಪಕ-ನಿರ್ದೇಶಕ ಸಂಜಯ್ ಲೀಲಾ ಭಂಸಾಲಿ (Sanjay Leela Bhansali)  ಅವರ ಚಿತ್ರ 'ಹಮ್ ದಿಲ್ ದೆ ಚುಕೆ ಸನಮ್' (Hum Dil De Chuke Sanam)ನ ಸೆಟ್ ಮೇಲೆ ಪರಸ್ಪರ ಹತ್ತಿರಕ್ಕೆ ಬಂದಿದ್ದರು ಹಾಗೂ ಇಲ್ಲಿಂದಲೇ ಸಲ್ಮಾನ್-ಐಶ್ವರ್ಯಾ ಪ್ರೇಮ ಕಥೆ (Salman-Aishwarya Love Story) ಆರಂಭಗೊಂಡಿತು ಎನ್ನಲಾಗುತ್ತದೆ.

ಇದನ್ನೂ ಓದಿ-Rashmika Mandanna: ಅಮಿತಾಬ್ ಬಚ್ಚನ್ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿರಿಕ್ ಬೆಡಗಿ

ವರ್ಷ 1997ರವರೆಗೆ ಸಲ್ಮಾನ್ ಖಾನ್ ಇದು ಬಾಲಿವುಡ್ (Bollywood) ನ ಒಂದು ದೊಡ್ಡ ಹೆಸರಾಗಿತ್ತು ಹಾಗೂ ಐಶ್ವರ್ಯ ರೈ ಆಗ ತಾನೇ ಚಿತ್ರೋದ್ಯೋಮದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದಳು. ಇದಲ್ಲದೆ ಆಗಿನ ಕಾಲದಲ್ಲಿ ಸಲ್ಮಾನ್ ಖಾನ್ ಖ್ಯಾತ ನಟಿ ಸೋಮಿ ಅಲಿ ಜೊತೆಗಿನ ತಮ್ಮ ಸಂಬಂಧದ ಕಾರಣ ಭಾರಿ ಚರ್ಚೆಯಲ್ಲಿದ್ದರು. ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ ಸಲ್ಮಾನ್ ಖಾನ್ ಸೋಮಿ ಅಲಿ ಜೊತೆ ವಿವಾಹವಾಗಲು ಕೂಡ ಮುಂದಾಗಿದ್ದರು ಎನ್ನಲಾಗುತ್ತದೆ. ಆದರೆ, ಸಲ್ಮಾನ್, ಐಶ್ವರ್ಯ ರೈ ಜೊತೆಗೆ ಭೇಟಿಯಾದಾಗ ಅವಳಿಗೆ ಮನಸೋತರು. ಇನ್ನೊಂದೆಡೆ ಐಶ್ವರ್ಯ ರೈ ಕೂಡ ಸಲ್ಮಾನ್ ಗೆ ತಮ್ಮ ಹೃದಯದಲ್ಲಿ ಜಾಗ ನೀಡಿದಳು. ಆದರೆ, ಸಲ್ಮಾನ್ ಜೊತೆಗಿನ ಐಶ್ವರ್ಯ ಸಂಬಂಧ ಐಶ್ವರ್ಯ ಕುಟುಂಬ ಸದಸ್ಯರಿಗೆ ಇಷ್ಟ ಇರಲಿಲ್ಲ. ಆದರೆ, ಪ್ರೀತಿಯ ವಿಷಯದಲ್ಲಿ ಮೂರನೇ ವ್ಯಕ್ತಿಯ ಸದ್ದು ಕೇಳಿಸುವುದಿಲ್ಲ ಎನ್ನುತ್ತಾರೆ. ಐಶ್ವರ್ಯ ವಿಷಯದಲ್ಲಿಯೂ ಕೂಡ ಇದೆ ನಡೆಯಿತು ಹಾಗೂ ಐಶ್ವರ್ಯ ತಮ್ಮ ತಂದೆ-ತಾಯಿಯರ ಮನೆಯನ್ನು ತೊರೆದು ಬೇರೆ ವಾಸಿಸಲು ಆರಂಭಿಸಿದರು.

ಇದನ್ನೂ ಓದಿ-Ajay Devgn: ಬರ್ಥ್ ಡೇ ಸಂಭ್ರಮದಲ್ಲಿರುವ ಅಜಯ್ ದೇವ್ಗನ್ ರಾಜಮೌಳಿಯಿಂದ 'ಬಂಪರ್ ಗಿಫ್ಟ್'! 

ಕೆಲ ಸಮಯದವರೆಗೆ ಎಲ್ಲವೂ ಇಬ್ಬರು ಅಂದುಕೊಂಡಂತೆ ಸಾಗಿತು. ಆದರೆ, ಬಳಿಕ ಸಲ್ಮಾನ್ ಕೋಪ ಅವರಿಬ್ಬರ ಪ್ರೀತಿಗೆ ಹುಳಿಹಿಂಡುವ ಕೆಲಸ ಮಾಡಿತು. ಮಾಧ್ಯಮ ವರದಿಗಳ ಪ್ರಕಾರ. ಒಂದು ರಾತ್ರಿ ಐಶ್ವರ್ಯ ರೈ ಮನೆಗೆ ತಲುಪಿದ ಸಲ್ಮಾನ್ ಖಾನ್, ಜೋರಾಗಿ ಬಾಗಿಲು ತಟ್ಟಲು ಆರಂಭಿಸಿದರು ಹಾಗೂ ಬೆಳಗಿನ ಜಾವ 3 ಗಂಟೆಯವರೆಗೆ ಅವರು ಅದನ್ನೇ ಮುಂದುವರೆಸಿದರು ಎನ್ನಲಾಗಿದೆ.  ಈ ಕುರಿತು ಹೇಳುವ ಸ್ಥಳಿಯರು, ಸಲ್ಮಾನ್, ಐಶ್ವರ್ಯ ರೈ ಬಾಗಿಲು ಯಾವ ರೀತಿ ತಟ್ಟಿದರು ಎಂದರೆ, ಅವರ ಎರಡೂ ಕೈಗಳಿಂದ ರಕ್ತ ಸೋರುತ್ತಿತ್ತು ಎನ್ನುತ್ತಾರೆ. ವರದಿಗಳ ಪ್ರಕಾರ ಸಲ್ಮಾನ್, ಐಶ್ವರ್ಯ ರೈ ಜೊತೆಗೆ ವಿವಾಹವಾಗಲು ಬಯಸಿದ್ದರು. ಆದರೆ ಐಶ್ವರ್ಯ ರೈ ತಮ್ಮ ವೃತ್ತಿಜೀವನದ ಮೇಲೆ ತಮ್ಮ ಗಮನ ಕೇಂದ್ರೀಕರಿಸಲು ಬಯಸಿದ್ದರು ಎನ್ನಲಾಗುತ್ತದೆ. ಸಲ್ಮಾನ್ ಖಾನ್ ಅವರ ಈ ವರ್ತನೆಯ ಕುರಿತು ಐಶ್ವರ್ಯ ರೈ ಅವರ ತಂದೆ ಪೊಲೀಸ್ ಠಾಣೆ ಕದ ಕೂಡ ತಟ್ಟಿದ್ದರು ಎನ್ನಲಾಗುತ್ತದೆ. ಈ ಘಟನೆಯ ಬಳಿಕ ಇಬ್ಬರ ಪ್ರೇಮಕಥೆ ಶಾಶ್ವತವಾಗಿ ಮುಗಿದು ಹೋಯಿತು.

ಇದನ್ನೂ ಓದಿ-Yuvarathnaa Twitter Review: ಪವರ್ ಫುಲ್ ಸಂದೇಶ ಹೊತ್ತು ತಂದ ಯುವರತ್ನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News