Babil Khan: ಇರ್ಫಾನ್ ಖಾನ್ ಪುತ್ರನಿಗೆ ಅವಕಾಶ ನೀಡಿದ ಅನುಷ್ಕಾ ಶರ್ಮಾ..!

ಅಲೌಕಿಕ ವಿಷಯದ ಮನೋಭಾವದ ಕಥೆ ಹೊಂದಿರುವ ಬಾಬಿಲ್ ಮೊದಲ ಸಿನಿಮಾದ ಹೆಸರು 'ಕಾಲಾ' (Qala)

Last Updated : Apr 11, 2021, 03:55 PM IST
  • ದಿವಂಗತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಪುತ್ರ ಬಾಬಿಲ್ ಖಾನ್ ಶೀಘ್ರದಲ್ಲಿ ಬಾಲಿವುಡ್‌ಗೆ ಎಂಟ್ರಿ
  • ಅಲೌಕಿಕ ವಿಷಯದ ಮನೋಭಾವದ ಕಥೆ ಹೊಂದಿರುವ ಬಾಬಿಲ್ ಮೊದಲ ಸಿನಿಮಾದ ಹೆಸರು 'ಕಾಲಾ' (Qala)
  • ಅನುಷ್ಕಾ ಶರ್ಮಾ ಪ್ರೊಡಕ್ಷನ್ ಹೌಸ್ ನಲ್ಲಿ ರೆಡಿ ಆಗ್ತಿದೆ 'ಕಾಲಾ'
Babil Khan: ಇರ್ಫಾನ್ ಖಾನ್ ಪುತ್ರನಿಗೆ ಅವಕಾಶ ನೀಡಿದ ಅನುಷ್ಕಾ ಶರ್ಮಾ..! title=

ನವದೆಹಲಿ: ದಿವಂಗತ ಬಾಲಿವುಡ್ ನಟ ಇರ್ಫಾನ್ ಖಾನ್(Irrfan Khan) ಅವರ ಪುತ್ರ ಬಾಬಿಲ್ ಖಾನ್ ಶೀಘ್ರದಲ್ಲಿ ಬಾಲಿವುಡ್‌ಗೆ ಎಂಟ್ರಿ ನೀಡಲಿದ್ದಾರೆ. ಅಲೌಕಿಕ ವಿಷಯದ ಮನೋಭಾವದ ಕಥೆ ಹೊಂದಿರುವ ಬಾಬಿಲ್ ಅವರ ಈ ಮೊದಲ ಚಿತ್ರ ತುಂಬಾ ವಿಶೇಷವಾಗಿರಲಿದೆ. ಈ ಹೊಸ ನಟನ ಮೊದಲ ಸಿನಿಮಾದ ಹೆಸರು 'ಕಾಲಾ' (Qala). 

ಅನುಷ್ಕಾ ಶರ್ಮಾ ಪ್ರೊಡಕ್ಷನ್ ಹೌಸ್ ನಲ್ಲಿ ರೆಡಿ ಆಗ್ತಿದೆ 'ಕಾಲಾ' (Qala): ದಿ. ಇರ್ಫಾನ್ ಖಾನ್ ಅವರ ಪುತ್ರ ಬಾಬಿಲ್ ಖಾನ್(Babil Khan) ಗೆ ಬಾಲಿವುಡ್‌ಗೆ ಎಂಟ್ರಿ ನೀಡಲು ಅನುಷ್ಕಾ ಶರ್ಮಾ(Anushka Sharma) ಮುಂದಾಗಿದ್ದಾರೆ. ಹೌದು, 'ಕಾಲಾ' (ಖಲಾ) ಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್, ನಟಿ ಅನುಷ್ಕಾ ಶರ್ಮಾ ಅವರ ಪ್ರೊಡಕ್ಷನ್ ಹೌಸ್ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಜೊತೆ ಕೋ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿದೆ. ಈ ಚಿತ್ರದಲ್ಲಿ ಸ್ವಸ್ತಿಕ ಮುಖರ್ಜಿ, ಬಾಬಿಲ್ ಖಾನ್ ಜೊತೆಗೆ, ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : Anushka Sharma ಭೇಟಿಯಾಗುವ ಮೊದಲು ಈ ನಟಿಯ ಅಭಿಮಾನಿಯಾಗಿದ್ದರಂತೆ Virat Kohli

ಅಲೌಕಿಕ ಚಿತ್ರಕಥೆ ಹೊಂದಿರುವ 'ಕಾಲಾ': ಈ ಅಲೌಕಿಕ ಚಿತ್ರವನ್ನು ಅನ್ವಿತಾ ದತ್ ನಿರ್ದೇಶಿಸುತ್ತಿದ್ದಾರೆ. 2020 ರಲ್ಲಿ ಅನ್ವಿತಾ ಬಂದ 'ಬುಲ್ಬುಲ್' ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಶನಿವಾರ, ನೆಟ್ಫ್ಲಿಕ್ಸ್ ಇಂಡಿಯಾ(Netflix India) ಈ ಚಿತ್ರದ ಕೆಲವು ಝಲಕ್ ಗಳನ್ನ ಬಿಡುಗಡೆ ಮಾಡಿದೆ. ನೆಟ್‌ಫ್ಲಿಕ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಆ ಸಿನಿಮಾದ ವಿಡಿಯೋ ತುಣುಕುಗಳನ್ನ  ಹಂಚಿಕೊಂಡ. ಒಟಿಟಿ ಪ್ಲಾಟ್‌ಫಾರ್ಮ್ ಆದ ನೆಟ್‌ಫ್ಲಿಕ್ಸ್ ಮೂಲಕ ಈ ಚಿತ್ರ 'ಕಾಲಾ' ಬಿಡುಗಡೆಯಾಗಲಿದೆ.

ಇದನ್ನೂ ಓದಿ : Viral video : ನಡೆದೇ ಹೋಯಿತಾ ಗಾಯಕ ರಾಹುಲ್ ವೈದ್ಯ, ದಿಶಾ ಪರ್ಮಾರ್ ವಿವಾಹ ..!

ಬಾಬಿಲ್ ಖಾನ್ ನೀಡಿರುವ ಮಾಹಿತಿ ಪ್ರಕಾರ: ಇನ್ಸ್ಟಾಗ್ರಾಮ್(Instagram) ಮೂಲಕ ತನ್ನ ಚಿತ್ರದ ಬಗ್ಗೆ ಹೇಳಿರುವ ಬಾಬಿಲ್ ಖಾನ್, 'ಟ್ರುಪ್ಟಿ ಡಿಮ್ರಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಅವರನ್ನ ನೋಡಿ ನನಗೂ ಸಹ ಸ್ವಲ್ಪ ಲವ್ ಆಯಿತು. 'ಲಾಂಚ್ಡ್' ಎಂಬ ಪದ  ಕೇಳಿ ನಾನು ಗೊಂದಲಕ್ಕೊಳಗಾಗಿದ್ದೇನೆ  ಎಂದು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News