Bad cholesterol Ayurveda Treatment : ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಅಪಾಯಕಾರಿ ಕಾಯಿಲೆಯಾಗಿ ಹೊರ ಹೊಮ್ಮುತ್ತಿದೆ. ಕೊಲೆಸ್ಟ್ರಾಲ್ ಜೀವನಶೈಲಿ ಸಂಬಂಧಿತ ಕಾಯಿಲೆಯಾಗಿದೆ. ಸೂಕ್ತ ಸಮಯಕ್ಕೆ ಕೊಲೆಸ್ಟ್ರಾಲ್ ನಿಯಂತ್ರಿಸದಿದ್ದರೆ, ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಗಂಭೀರ ಹೃದಯ ಸಂಬಂಧಿ ಕಾಯಿಲೆಗಳಿಗೂ ಕಾರಣವಾಗುತ್ತದೆ. ಕೊಲೆಸ್ಟ್ರಾಲ್‌ಗೆ ಯಾವುದೇ ಮೂಲ ಚಿಕಿತ್ಸೆ ಇಲ್ಲ. ಆದರೆ ಕೆಲವು ಮನೆಮದ್ದುಗಳ ಸಹಾಯದಿಂದ ಇದನ್ನು ನಿಯಂತ್ರಣದಲ್ಲಿ  ಇಟ್ಟುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಕೊಲೆಸ್ಟ್ರಾಲ್ ಗೆ ಆಯುರ್ವೇದ ಪರಿಹಾರ : 
ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಅನೇಕ ಆಯುರ್ವೇದ ಪರಿಹಾರಗಳನ್ನು ತೆಗೆದುಕೊಳ್ಳಬಹುದು. ಅವುಗಳಲ್ಲಿ ಒಂದು ನೆಲ್ಲಿಕಾಯಿ ಮತ್ತು ಶುಂಠಿ. ನೆಲ್ಲಿಕಾಯಿ ಮತ್ತು ಶುಂಠಿಯ ರಸವನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಆಯುರ್ವೇದದಲ್ಲಿ ಮಾತ್ರವಲ್ಲದೆ ಆಧುನಿಕ ವಿಜ್ಞಾನದಲ್ಲಿಯೂ ನೆಲ್ಲಿಕಾಯಿ ಮತ್ತು ಶುಂಠಿ ರಸದ ಪರಿಣಾಮವನ್ನು ಒಪ್ಪಿಕೊಳ್ಳಲಾಗಿದೆ. ನೆಲ್ಲಿಕಾಯಿ ಮತ್ತು ಶುಂಠಿಯ ರಸದಲ್ಲಿ ಎಲ್‌ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ  ಅನೇಕ ಅಂಶಗಳು ಕಂಡುಬಂದಿವೆ. 


ಇದನ್ನೂ ಓದಿ : ಎಳನೀರು ಕುಡಿಯುವಾಗ ಪ್ಲಾಸ್ಟಿಕ್ ಸ್ಟ್ರಾ ಬಳಸಿದರೆ ಎದುರಾಗುವುದು ಈ ಸಮಸ್ಯೆ


ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನೆಲ್ಲಿಕಾಯಿ ಮತ್ತು ಶುಂಠಿಯನ್ನು ಬಳಸುವುದು ಹೇಗೆ ? :
ದೇಹದಲ್ಲಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆಲ್ಲಿಕಾಯಿ ಮತ್ತು ಶುಂಠಿ ರಸವನ್ನು ಬಳಸುವ ವಿಧಾನ ತುಂಬಾ ಸುಲಭ. 


1. 2 ಮಧ್ಯಮ ಗಾತ್ರದ ನೆಲ್ಲಿಕಾಯಿ ಮತ್ತು ಅದೇ ಗಾತ್ರದ ಶುಂಠಿಯ ತುಂಡು ತೆಗೆದುಕೊಳ್ಳಿ
2. ನೆಲ್ಲಿಕಾಯಿ ಮತ್ತು ಶುಂಠಿ ಎರಡನ್ನೂ ಸಣ್ಣ ತುಂಡುಗಳಾಗಿ ಕತ್ತರಿಸಿ .
3. ಇವುಗಳನ್ನುಅರ್ಧ ಲೋಟ ನೀರಿನೊಂದಿಗೆ  ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
4. ಈಗ ಮಿಶ್ರಣವನ್ನು ಬಟ್ಟೆ ಅಥವಾ ಜರಡಿ ಸಹಾಯದಿಂದ ಫಿಲ್ಟರ್ ಮಾಡಿ  ಜ್ಯೂಸ್ ಅನ್ನು ಸೇವಿಸಿ.
5. ಈ ಜ್ಯೂಸ್ ನಾಲಿಗೆಗೆ ಹಿಡಿಸದೆ ಇರಬಹುದು.  ಅದಕ್ಕಾಗಿ ಇದರ ರುಚಿ ಹೆಚ್ಚಿಸಲು ನೀರಿನ ಬದಲಿಗೆ ಕಿತ್ತಳೆ ಅಥವಾ ದಾಳಿಂಬೆ ರಸವನ್ನು ಬಳಸಬಹುದು. ಜೊತೆಗೆ ಸ್ವಲ್ಪ ಉಪ್ಪನ್ನು ಕೂಡಾ ಸೇರಿಸಬಹುದು. 


ಇದನ್ನೂ ಓದಿ : Hair Care : ಖಾಲಿ ಹೊಟ್ಟೆಯಲ್ಲಿ ಈ ಡ್ರೈಫ್ರೂಟ್ಸ್‌ ಸೇವಿಸಿದರೆ, ಬಿಳಿ ಕೂದಲು ಬೇರಿನಿಂದ ಕಪ್ಪಾಗುತ್ತದೆ!


ನೆಲ್ಲಿಕಾಯಿ ಮತ್ತು ಶುಂಠಿ ರಸವನ್ನು ಯಾವಾಗ ಕುಡಿಯಬೇಕು ? :
ಈ ಎರಡೂ ರಸಗಳು ಸಂಪೂರ್ಣವಾಗಿ ನೈಸರ್ಗಿಕವಾಗಿರುತ್ತವೆ. ಇದನ್ನು  ಯಾವುದೇ ಸಮಯದಲ್ಲಿ ಸೇವಿಸಬಹುದು. ಆದರೆ, ಕೆಲವು ಆಯುರ್ವೇದ ತಜ್ಞರು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆಲ್ಲಿಕಾಯಿ ಮತ್ತು ಶುಂಠಿಯ ರಸದ ಮಿಶ್ರಣವನ್ನು ಬೆಳಿಗ್ಗೆ ಮಾತ್ರ ಸೇವಿಸಬೇಕು ಎಂದು  ಕೂಡಾ ಹೇಳುತ್ತಾರೆ. ಇದರ ಹೊರತಾಗಿ, ಮಧ್ಯಾಹ್ನಡ ಭೋಜನಕ್ಕೆ 1 ಗಂಟೆ ಮೊದಲು ಅಥವಾ ನಂತರ ಸೇವಿಸಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.