ನಿಮಗಿದು ಗೊತ್ತಾ ? ಮಧುಮೇಹಿಗಳ ಯಕೃತ್ತಿನ ಆರೋಗ್ಯಕ್ಕೆ ಕಾಫಿ ಬಹಳ ಮುಖ್ಯ .!

ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ  ಮುಖ್ಯವಾಗಿ ಅನಾರೋಗ್ಯಕರ ಜೀವನಶೈಲಿಯಿಂದ ಉಂಟಾಗುತ್ತದೆ. ವ್ಯಕ್ತಿಯು ದೈಹಿಕ  ಚಟುವಟಿಕೆ ಕಡಿಮೆ ಮಾಡಿ, ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವ ಕಾರಣದಿಂದ ಈ ಕಾಯಿಲೆ ಉಂಟಾಗುತ್ತದೆ.

Written by - Ranjitha R K | Last Updated : Jan 18, 2023, 12:36 PM IST
  • ಡಯಾಬಿಟಿಸ್ ರೋಗಿಗಳಲ್ಲಿ ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಕಂಡುಬರುತ್ತದೆ.
  • ಈ ರೋಗವು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಿಂದ ಉಂಟಾಗುತ್ತದೆ.
  • ಕಾಫಿ ಇದಕ್ಕೆ ಪರಿಹಾರವಾಗಬಹುದು
ನಿಮಗಿದು ಗೊತ್ತಾ ? ಮಧುಮೇಹಿಗಳ ಯಕೃತ್ತಿನ ಆರೋಗ್ಯಕ್ಕೆ ಕಾಫಿ ಬಹಳ ಮುಖ್ಯ .! title=

ಬೆಂಗಳೂರು : ಬೊಜ್ಜು ಹೊಂದಿರುವ ಟೈಪ್ ಟು ಡಯಾಬಿಟಿಸ್ ರೋಗಿಗಳಲ್ಲಿ ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ (NAFLD) ಕಂಡುಬರುತ್ತದೆ. ಈ ರೋಗವು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಿಂದ ಉಂಟಾಗುತ್ತದೆ. ಇದು ಯಕೃತ್ತಿನ ಫೈಬ್ರೋಸಿಸ್‌ನಂತಹ ಕಾಯಿಲೆಯ ಅಪಾಯವನ್ನು ಕೂಡಾ ಉಂಟುಮಾಡಬಹುದು. ಇದು ಅಂತಿಮವಾಗಿ ಸಿರೋಸಿಸ್‌ಗೆ ಕಾರಣವಾಗಬಹುದು. ಆದರೆ ಕಾಫಿಯಲ್ಲಿ ಕಂಡುಬರುವ ಕೆಫೀನ್ ಮಧುಮೇಹ ರೋಗಿಗಳಲ್ಲಿ ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು. ಆದರೆ ಈ ಅಂಶ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. 

ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ  ಮುಖ್ಯವಾಗಿ ಅನಾರೋಗ್ಯಕರ ಜೀವನಶೈಲಿಯಿಂದ ಉಂಟಾಗುತ್ತದೆ. ವ್ಯಕ್ತಿಯು ದೈಹಿಕ  ಚಟುವಟಿಕೆ ಕಡಿಮೆ ಮಾಡಿ, ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವ ಕಾರಣದಿಂದ ಈ ಕಾಯಿಲೆ ಉಂಟಾಗುತ್ತದೆ. ದೇಹದಲ್ಲಿ ಬೊಜ್ಜು ಕೂಡಾ ಹೆಚ್ಚಾಗುತ್ತದೆ. ಒಮ್ಮೆ ಫ್ಯಾಟಿ ಲಿವರ್ ಕಾಯಿಲೆ ಕಾಣಿಸಿಕೊಂಡರೆ ನಂತರ  ಗಂಭೀರವಾದ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಆದರೆ ಈ ಸಮಸ್ಯೆಯನ್ನು ಕಾಫಿ ಕುಡಿಯುವ ಮೂಲಕ ಕಡಿಮೆ ಮಾಡಬಹುದು ಅನ್ನುವುದು ಪೋರ್ಚುಗಲ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. 

ಇದನ್ನೂ ಓದಿ :  ಈ ಕಾಯಿಲೆಗಳಿರುವ ಜನರು ಅರಿಶಿಣ ಮಿಶ್ರಿತ ಹಾಲಿನಿಂದ ಅಂತರ ಕಾಯ್ದುಕೊಳ್ಳಬೇಕು

ಮೂತ್ರದಲ್ಲಿ ಕಂಡುಬರುವ ಕೆಫೀನ್ ಮತ್ತು ನಾನ್-ಕೆಫೀನ್ ಪ್ರಮಾಣವನ್ನು ಫ್ಯಾಟಿ ಲಿವರ್ ರೋಗಿಗಳೊಂದಿಗೆ ಜೋಡಿಸುವ ಮೂಲಕ ಸಂಶೋಧನೆ ನಡೆಸಲಾಯಿತು. ಈ ಸಂಶೋಧನೆಯಲ್ಲಿ ಇದರಲ್ಲಿ ಅತಿಯಾಗಿ ಕಾಫಿ ಸೇವಿಸಿದವರ ಲಿವರ್ ಆರೋಗ್ಯವಾಗಿರುವುದು ಕಂಡು ಬಂದಿದೆ. ಕಾಫಿ ಸೇವಿಸಿದವರಲ್ಲಿ ಫೈಬ್ರೋಸಿಸ್ ಅಪಾಯವೂ ಕಡಿಮೆ. ದೇಹದಲ್ಲಿ ಕಡಿಮೆ ಪ್ರಮಾಣದ ಕೆಫೀನ್ ಹೊಂದಿರುವ ಜನರು, ತಮ್ಮ ದೇಹದಲ್ಲಿ ಫ್ಯಾಟಿ ಲಿವರ್ ಅಪಾಯವನ್ನು ಹೊಂದಿರುವುದು ಪತ್ತೆಯಾಗಿದೆ. 

ಟೈಪ್ 2 ಡಯಾಬಿಟಿಸ್ ಇರುವವರು ಮತ್ತು ಅಧಿಕ ತೂಕ ಹೊಂದಿರುವ ಜನರು ಕಾಫಿಯನ್ನು ಸೇವಿಸಲು ಪ್ರಾರಂಭಿಸಿದರೆ ಯಕೃತ್ತು ಆರೋಗ್ಯಕರವಾಗಿರುತ್ತದೆ ಎನ್ನುವುದು ಈ ಅಧ್ಯಯನದಿಂದ ತಿಳಿದು ಬಂದಿದೆ. ಈ ಮೂಲಕ ಫ್ಯಾಟಿ ಲಿವರ್ ನಂಥಹ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. 

ಇದನ್ನೂ ಓದಿ : Green peas Side Effects: ಈ ಜನರು ಅಪ್ಪಿತಪ್ಪಿಯೂ ಬಟಾಣಿ ತಿನ್ನಬಾರದು: ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುತ್ತದೆ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News