ಬೇಸಿಗೆ ಕಾಲ ಪ್ರಾರಂಭವಾಗಿದೆ, ಕಳೆದ ವರ್ಷದಂತೆ, ಈ ವರ್ಷವೂ ಈ ಋತುವಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಬೇಸಿಗೆ ಇದರೊಂದಿಗೆ ಅನೇಕ ರೋಗಗಳನ್ನು ತರುತ್ತದೆ. ಈ ಹವಾಮಾನವು ನಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೂ ಭಾರೀ ಪರಿಣಾಮ ಬೀರುತ್ತದೆ, ಇದು ಜೀರ್ಣಕಾರಿ ಮತ್ತು ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಹಕ್ಕೆ ಡಿಹೈಡ್ರೇಶನ್ ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಕಂಡು ಬರುತ್ತದೆ, ಇದಕ್ಕಾಗಿ ನೀವು ಪ್ರತಿದಿನ ಸೌತೆಕಾಯಿ(Cucumber)ಯನ್ನು ಸೇವಿಸಬೇಕು. ಬೇಸಿಗೆ ಕಾಲದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸೌತೆಕಾಯಿ ಲಭ್ಯವಿರುತ್ತದೆ. ಇದು ಬೇಸಿಗೆಯ ಹಣ್ಣು ಎಂದು ಕರೆಯುತ್ತಾರೆ. ಇದನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿರುತ್ತದೆ.


ಇದನ್ನೂ ಓದಿ : Body Cleaning Tips: ಕತ್ತು ಕಂಕುಳಿನ ಕಪ್ಪು ಕಲೆಯನ್ನು ತೆಗೆಯುವ ಸುಲಭ ವಿಧಾನ ಇದು


ಸೌತೆಕಾಯಿಯಲ್ಲಿ ಸಾಕಷ್ಟು ನೀರಿನ(Water) ಪ್ರಮಾಣವಿರುತ್ತದೆ. ಅಲ್ಲದೆ, ಸಾಕಷ್ಟು ಫೈಬರ್ ಕೂಡ ಕಂಡು ಬರುತ್ತದೆ. ಇದರಲ್ಲಿ ಯಾವುದೇ ಕ್ಯಾಲೊರಿಗಳಿಲ್ಲ, ಆದ್ದರಿಂದ ಈ ಋತುವಿನಲ್ಲಿ ನೀವು ಸೌತೆಕಾಯಿಯನ್ನು ಸೇವಿಸಬಹುದು, ಇವುಗಳನ್ನ ಸೇವಿಸುವುದರಿಂದ ಹೆಚ್ಚಾಗಿ ಹಸಿವಾಗುವುದಿಲ್ಲ ಮತ್ತು ನಿಮ್ಮ ದೇಹ ತೂಕವೂ ನಿಯಂತ್ರಣದಲ್ಲಿರುತ್ತದೆ.


ಇದನ್ನೂ ಓದಿ : ತಲೆದಿಂಬಿನ ಕೆಳಗೆ ಬೆಳ್ಳುಳ್ಳಿ ಎಸಳು ಇಟ್ಟು ಮಲಗಿದರೆ ಸಿಗಲಿದೆ ಅದ್ಬುತ ಪ್ರಯೋಜನ


ಈ ಸೌತೆಕಾಯಿ ರುಚಿ ಮತ್ತು ತಂಪಿಗೆ ಹೆಸರುವಾಸಿಯಾಗಿದೆ. ಇದರಲ್ಲಿ ಶೇ. 90 ನೀರು ಕಂಡುಬರುತ್ತದೆ. ಇದು ದೇಹವನ್ನು ನಿರ್ಜಲೀಕರಣ(Dehydration)ದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿ ಫೈಬರ್, ವಿಟಮಿನ್, ಕ್ಯಾಲ್ಸಿಯಂ, ಅಯೋಡಿನ್, ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್ ಮುಂತಾದ ಅಂಶಗಳಿವೆ, ಇದು ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Immunity Booster : ರೋಗ ನಿರೋಧಕ ಶಕ್ತಿಗೆ ಸೇವಿಸಿ 'ಅಮೃತ ಬಳ್ಳಿ ಕಷಾಯ' : ಇಲ್ಲಿದೆ 5 ಪ್ರಯೋಜನಗಳು!


ಮಧುಮೇಹವನ್ನು ನಿಯಂತ್ರಿಸಲು ಸೌತೆಕಾಯಿ :


ಸೌತೆಕಾಯಿಯಲ್ಲಿರುವ ಖನಿಜಗಳು ದೇಹದಲ್ಲಿನ ಇನ್ಸುಲಿನ್(Insulin) ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರ ಬಳಕೆಯಿಂದ ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.


ಇದನ್ನೂ ಓದಿ : ಮಕ್ಕಳ ಪಾಲನೆಯಲ್ಲಿ ತಪ್ಪಿಯೂ ಈ ಐದು ತಪ್ಪು ಮಾಡಬಾರದು.!


ವಾಂತಿ ಮತ್ತು ಅತಿಸಾರ ಸಮಸ್ಯೆಗೆ ಸೌತೆಕಾಯಿ :


ಬೇಸಿಗೆಯಲ್ಲಿ ಜನರಲ್ಲಿ ವಾಂತಿ(Vomiting) ಅತಿಸಾರ ಸಮಸ್ಯೆ ಕಂಡು ಬರುತ್ತದೆ. ಬೇಸಿಗೆಯಲ್ಲಿ ಸೌತೆಕಾಯಿ ಫ್ರೈಡ್ ರೋಸ್ಟ್ ತಿನ್ನುವುದರಿಂದ ಆಹಾರ ವಿಷವೂ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸೌತೆಕಾಯಿಯನ್ನು ಸೇವಿಸುವುದು ಉತ್ತಮ. ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿಡುತ್ತದೆ.


ಇದನ್ನೂ ಓದಿ : Skin Care Tips: ಬೇಸಿಗೆಯಲ್ಲಿ ರವೆಯಿಂದ ಮಾಡಿದ ಈ ಫೇಸ್ ಸ್ಕ್ರಬ್ ಬಳಸಿ, ಉತ್ತಮ ತ್ವಚೆ ನಿಮ್ಮದಾಗಿಸಿ


ದೇಹ ತೂಕ ಇಳಿಸಿಕೊಳ್ಳಲು ಸೌತೆಕಾಯಿ :


ನಾವು ಸೌತೆಕಾಯಿಯನ್ನು ಸೇವಿಸಿದರೆ ತುಂಬಾ ವೇಗವಾಗಿ ದೇಹ ತೂಕ ಇಳಿಸಿಕೊಳ್ಳಬಹುದು(Weight Loss). ಏಕೆಂದರೆ ಸೌತೆಕಾಯಿಯಲ್ಲಿ ಬಹಳ ಕಡಿಮೆ ಕ್ಯಾಲೊರಿ ಕಂಡು ಬರುತ್ತದೆ. ಇದು ದೇಹ ತೂಕವನ್ನು ಹೆಚ್ಚಿಸುವ ಯಾವುದೇ ಪದಾರ್ಥಗಳನ್ನು ಹೊಂದಿರುವುದಿಲ್ಲ. ಸೌತೆಕಾಯಿಯಲ್ಲಿ ಸಾಕಷ್ಟು ಫೈಬರ್ ಕಂಡುಬರುತ್ತದೆ.


ಇದನ್ನೂ ಓದಿ : Raw Mangoes : ಕೊರೋನಾದಿಂದ ಬಚ್ಚವಾಗಲು ಸೇವಿಸಿ ಕಚ್ಚಾ ಮಾವಿನಹಣ್ಣು : ಇಲ್ಲಿದೆ ಅದರ ಪ್ರಯೋಜನಗಳು!


ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ :


ಸೌತೆಕಾಯಿ ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಬಹಳಷ್ಟು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ರಕ್ತದೊತ್ತಡವನ್ನು ಸಾಮಾನ್ಯವಾಗಿಸಲು ಸಹಾಯ ಮಾಡುತ್ತದೆ. ಬಿಪಿ ರೋಗಿಗಳು ಸಹ ಇದನ್ನು ಸೇವಿಸಬೇಕು.


ಇದನ್ನೂ ಓದಿ : ಮುಂಜಾನೆ ವಾಕ್‍ನಲ್ಲಿ ಈ ನಾಲ್ಕು ತಪ್ಪು ಆಗುತ್ತಿರಬಹುದು.! ಚೆಕ್ ಮಾಡಿ


ಮೂಳೆಗಳು ಬಲವಾಗಿರುತ್ತವೆ :


ನೀವು ಸೌತೆಕಾಯಿಯನ್ನು ಸೇವಿಸಿದರೆ ನಿಮ್ಮ ಮೂಳೆಗಳು ಬಲವಾಗಿರುತ್ತವೆ ಏಕೆಂದರೆ ಅದರಲ್ಲಿ ವಿಟಮಿನ್ ಕೆ ಕಂಡುಬರುತ್ತದೆ. ಈ ಕಾರಣದಿಂದಾಗಿ, ಮೂಳೆ ಸಾಂದ್ರತೆಯೂ ಹೆಚ್ಚಾಗುತ್ತದೆ ಮತ್ತು ಮೂಳೆಗಳು ಬಲಗೊಳ್ಳುತ್ತವೆ.


ಇದನ್ನೂ ಓದಿ : Covid-19 Warning Signs: ಶರೀರದಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ ಆಸ್ಪತ್ರೆಗೆ ಹೋಗಿ - Randeep Guleria


ಮೂತ್ರಪಿಂಡವು ಆರೋಗ್ಯಕ್ಕೆ ಸೌತೆಕಾಯಿ :


ಸೌತೆಕಾಯಿಯಲ್ಲಿ ಪೊಟ್ಯಾಸಿಯಮ್ ಜೊತೆಗೆ ಯೂರಿಕ್ ಆಸಿಡ್ ಮತ್ತು ಮೂತ್ರಪಿಂಡದ ಕಲ್ಮಶಗಳನ್ನು ದೇಹದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.