ಮುಂಜಾನೆ ವಾಕ್‍ನಲ್ಲಿ ಈ ನಾಲ್ಕು ತಪ್ಪು ಆಗುತ್ತಿರಬಹುದು.! ಚೆಕ್ ಮಾಡಿ

ದಿನಕ್ಕೆ 20 ನಿಮಿಷ ವಾಕ್ ತುಂಬಾ ಒಳ್ಳೆಯದು ಎನ್ನುತ್ತಾರೆ ಡಾಕ್ಟರ್ಸ್. ವಾಕ್ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಆಮ್ಲಜನಕ  ಸಿಗುತ್ತದೆ. ದೇಹ ಆಕ್ಟಿವ್ ಆಗುತ್ತದೆ.

Written by - Ranjitha R K | Last Updated : May 17, 2021, 09:26 AM IST
  • ಬೆಳಗೆದ್ದು ವಾಕ್ ಮಾಡುವುದು ಎಲ್ಲಾ ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮ
  • ವಾಕ್ ಮಾಡಿದರೆ ಹೃದಯಕ್ಕೆ ತುಂಬಾ ಒಳ್ಳೆಯದು
  • ಆದರೆ ಹೇಗೆ ವಾಕ್ ಮಾಡಬೇಕು ಅನ್ನೋದು ಕೂಡಾ ಅಷ್ಟೇ ಮುಖ್ಯ
ಮುಂಜಾನೆ ವಾಕ್‍ನಲ್ಲಿ ಈ ನಾಲ್ಕು ತಪ್ಪು ಆಗುತ್ತಿರಬಹುದು.! ಚೆಕ್ ಮಾಡಿ

ಬೆಂಗಳೂರು : ಬೆಳಗೆದ್ದು ವಾಕ್ (Morning walk) ಮಾಡುವುದು ತುಂಬಾ ಒಳ್ಳೆಯದು. ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದಿನಕ್ಕೆ 20 ನಿಮಿಷ ವಾಕ್ ತುಂಬಾ ಒಳ್ಳೆಯದು ಎನ್ನುತ್ತಾರೆ ಡಾಕ್ಟರ್ಸ್. ವಾಕ್ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಆಮ್ಲಜನಕ (Oxygen) ಸಿಗುತ್ತದೆ. ದೇಹ ಆಕ್ಟಿವ್ ಆಗುತ್ತದೆ. ಹೃದಯಕ್ಕೆ ಒಳ್ಳೆಯದು. ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಆವೆಲ್ಲಾ ಸರಿ. ನೀವು ಸರಿಯಾದ ರೀತಿಯಲ್ಲಿ ವಾಕ್ ಮಾಡುತಿದ್ದೀರಾ ಎಂಬುದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.
ವಾಕ್ ಮಾಡುವಾಗ ಖಂಡಿತಾ ಈ ನಾಲ್ಕು ತಪ್ಪು ಮಾಡಕೂಡದು..!

1. ಕೈಯನ್ನು ನೇರವಾಗಿಟ್ಟುಕೊಳ್ಳುವುದು. 
ಕೈಯನ್ನು ನೇರವಾಗಿಟ್ಟುಕೊಂಡರೆ ನಿಮ್ಮ ನಡಿಗೆ ನಿಧಾನವಾಗುತ್ತದೆ. ವಿಷಯ ತಜ್ಞರ ಪ್ರಕಾರ ನಡೆಯುವಾಗ ನಿಮ್ಮ ಕೈ ಶರೀರದ ನೇರಕ್ಕೆ ಕನಿಷ್ಠ 90ಡಿಗ್ರಿ ಕೋನಕ್ಕೆ ತಿರುಗಬೇಕು. ಈ ರೀತಿಯ ವಾಕ್ (walk) ಉಪಯುಕ್ತ

ಇದನ್ನೂ ಓದಿ : Covid-19 Warning Signs: ಶರೀರದಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ ಆಸ್ಪತ್ರೆಗೆ ಹೋಗಿ - Randeep Guleria

2. ಬಗ್ಗಿ ವಾಕ್ ಮಾಡುವುದು.
ವಿಷಯ ತಜ್ಞರ ಪ್ರಕಾರ ಬಗ್ಗಿಕೊಂಡು ವಾಕ್ ಮಾಡಿದರೆ ನಿಮ್ಮ ಶರೀರಕ್ಕೆ ಗಾಯವಾಗಬಹುದು. ಕತ್ತು ಉಳುಕಬಹುದು. ವಾಕ್ ಮಾಡುವಾಗ ಯಾವತ್ತಿಗೂ ಕತ್ತು ನೇರ ಇಟ್ಟುಕೊಳ್ಳಿ. ಅಂದರೆ ನಿಮ್ಮ ದೃಷ್ಟಿಗೆ 10 ರಿಂದ 30 ಅಡಿ ದೂರದ ವಸ್ತುಗಳು ಕಾಣಿಸುವ ಹಾಗೆ ಕತ್ತನ್ನು ಹೊಂದಿಸಿಕೊಂಡು ವಾಕ್ ಮಾಡಿ. 

3. ಉದ್ದುದ್ದ ಹೆಜ್ಜೆ ಹಾಕುವುದು.
ಉದ್ದುದ್ದ ಹೆಜ್ಜೆ ಹಾಕುವುದರಿಂದ ನಿಮ್ಮ ಕಾಲು ಗುರುತ್ವಾಕರ್ಷಣ ಕೇಂದ್ರದ ಮುಂದಕ್ಕೆ ತಲುಪುತ್ತದೆ. ಇದರಿಂದ ಗಂಟು ನೋವು (Joint pain) , ಎಲುಬು ಮುರಿಯುವ ಸಮಸ್ಯೆಗಳು ಉಂಟಾಗಬಹುದು. ದೇಹದ ಸಮತೋಲನ ಬಿಗಡಾಯಿಸಬಹುದು. ಹಾಗಾಗಿ, ಸಣ್ಣ ಸಣ್ಣ ಹೆಜ್ಜೆ ಇಟ್ಟು ನಡೆಯಿರಿ.

ಇದನ್ನೂ ಓದಿ : ಅಚ್ಚರಿಯ ಆರೋಗ್ಯ ಲಾಭಕ್ಕೆ ಬೆಳಗೆದ್ದು ಒಂದು ಮುಷ್ಟಿ ಹುರಿಗಡಲೆ ತಿನ್ನಿ

4. ನೆಲಕ್ಕೆ ಸಮತಲವಾಗಿ ಪಾದ ಊರುವುದು. 
ನಡೆಯುವಾಗ ಏಕಾಏಕಿ ನೆಲಕ್ಕೆ ಸಮತಲವಾಗಿ ಪಾದ (Feet) ಊರುವುದು ಸರಿಯಲ್ಲ. ಮೊದಲು ಪಾದದ ಹಿಮ್ಮಡಿ ನೆಲ ಮುಟ್ಟಬೇಕು. ನಂತರ ಪಾದ ರೋಲ್ ಆಗುತ್ತಾ ಪಾದದ ಮುಂಭಾಗ ನೆಲಮುಟ್ಟಬೇಕು. ಇದು ಸರಿಯಾದ ನಡಿಗೆ. ಇಲ್ಲದೆ ಹೋದರೆ ಕಾಲು ನೋವು (Pain) ಉಂಟಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News