Diabetes Control Remedy: ಮಧುಮೇಹ ದೀರ್ಘಕಾಲದ ಕಾಯಿಲೆಯಾಗಿದ್ದು ಈ ಆರೋಗ್ಯ ಸಮಸ್ಯೆ ಇರುವವರು ರಕ್ತದಲ್ಲಿನ ಶುಗರ್ ಲೆವೆಲ್ ಹೆಚ್ಚಾಗದಂತೆ ವಿಶೇಷ ನಿಗಾವಹಿಸಬೇಕಾಗುತ್ತದೆ. ಕಾಯಿಲೆ ಬಂದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಕಾಯಿಲೆ ಬರದಂತೆ ತಡೆಯುವುದು ಒಳ್ಳೆಯದು. ನಿಮ್ಮ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಮಾತ್ರೆ, ಔಷಧಿ ಏನೂ ಇಲ್ಲದೆಯೇ ಶುಗರ್ ಲೆವೆಲ್ ಹೆಚ್ಚಾಗದಂತೆ ತಡೆಯಬಹುದು. 


COMMERCIAL BREAK
SCROLL TO CONTINUE READING

ಹೌದು, ಜೀವನ ಶೈಲಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಮೂಲಕ ದೇಹದಲ್ಲಿ ಎಂದಿಗೂ ಬ್ಲಡ್ ಶುಗರ್ ಹೆಚ್ಚಾಗದಂತೆ ತಡೆಯಬಹುದು. ಇದಕ್ಕಾಗಿ ಸಮತೋಲಿತ ಆಹಾರ, ನಿಯಮಿತ ದೈಹಿಕ ಚ್ಟುವಟಿಕೆ ಎಲ್ಲವೂ ಅಗತ್ಯ. 


ಮಧುಮೇಹ ನಿಯಂತ್ರಣಕ್ಕೆ ಈ ಕೆಳಗಿನ ಪರಿಣಾಮಕಾರಿ ಟಿಪ್ಸ್ ಅನುಸರಿಸಿ: 
* ಸಮತೋಲಿತ ಆಹಾರ: 

ನಿಮ್ಮ ದೈನಂದಿನ ಆಹಾರದಲ್ಲಿ ಸಮತೋಲಿತ ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ವಯಸ್ಸಿಗೆ ತಕ್ಕಂತೆ ದೇಹಕ್ಕೆ ಅಗತ್ಯ ಪೋಷಕಾಂಶಭರಿತ ಆಹಾರ ಸೇವನೆಯು ತೂಕ ನಿರ್ವಹಣೆ ಜೊತೆಗೆ ಮಧುಮೇಹ ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿ ಆಗಿದೆ. 


ಇದನ್ನೂ ಓದಿ- ಮನೆಯಲ್ಲೇ ಇರುವ ಈ ಪದಾರ್ಥಗಳನ್ನು ಬಳಸಿ ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಿ! 


* ಕಾರ್ಬೋಹೈಡ್ರೇಟ್‌ಗಳು: 
ದೈನಂದಿನ ಆಹಾರ ಪದ್ದತಿಯಲ್ಲಿ ಸಂಪೂರ್ಣ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಂತಹ ಸಂಕೀರ್ಣ ಕಾರ್ಬೋಹೈಡ್ರೇಟ್‌ ಆಹಾರಗಳನ್ನು ಸೇವಿಸುವುದರಿಂದ ಬ್ಲಡ್ ಶುಗರ್ ಹೆಚ್ಚಾಗುವುದನ್ನು ತಪ್ಪಿಸಬಹುದು. 


* ಆರೋಗ್ಯಕರ ಕೊಬ್ಬು: 
ಸ್ಯಾಚುರೇಟೆಡ್ ಕೊಬ್ಬಿನ ಆಹಾರಗಳ ಬದಲಿಗೆ ದೇಹಕ್ಕೆ ಆರೋಗ್ಯಕರ ಕೊಬ್ಬಿನ ಅವಶ್ಯಕತೆಯೂ ಇದೆ. ಹಾಗಾಗಿ, ಅವಕಾಡೊ, ನಟ್ಸ್, ಆಲಿವ್ ಎಣ್ಣೆಯಂತಹ ಆರೋಗ್ಯಕರ ಕೊಬ್ಬುಳ್ಳ ಆಹಾರಗಳನ್ನು ಸೇವಿಸಿ. 


* ನೇರ ಪ್ರೋಟೀನ್‌ಗಳಿಗೆ ಆದ್ಯತೆ: 
ಅಧಿಕ ಕೊಬ್ಬಿನ ಆಹಾರ ಅಥವಾ ಸಂಸ್ಕರಿಸಿದ ಮಾಂಸದ ಆಹಾರಗಳ ಬದಲಿಗೆ ನೇರ ಪ್ರೋಟೀನ್‌ಗಳಿಗೆ ಆದ್ಯತೆ ನೀಡುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ. 


ಇದನ್ನೂ ಓದಿ- ತೂಕ ಇಳಿಕೆಯಿಂದ ಬಿ‌ಪಿ ಕಂಟ್ರೋಲ್ ಮಾಡುವವರೆಗೂ ಆರೋಗ್ಯಕ್ಕೆ ವರದಾನವಿದ್ದಂತೆ, ಮಜ್ಜಿಗೆ... 


* ಆರೋಗ್ಯಕರ ಜೀವನಶೈಲಿ: 
ಆಹಾರಗಳ ಜೊತೆಗೆ ಸರಿಯಾದ ಸಮಯಕ್ಕೆ ಮಲಗುವುದು, ಬೆಳಿಗ್ಗೆ ಬೇಗ ಏಳುವುದು, ಜಂಕ್ ಫುಡ್ಸ್ ತಿನ್ನದಿರುವುದು, ನಿಯಮಿತವಾಗಿ ವಾಕಿಂಗ್, ವ್ಯಾಯಾಮಗಳನ್ನು ದೈನಂದಿನ ಜೀವನದ ಭಾಗವಾಗಿಸುವುದರಿಂದ ಮಧುಮೇಹಿಗಳು ಬ್ಲಡ್ ಶುಗರ್ ಹೆಚ್ಚಾಗದಂತೆ ನಿಗಾವಹಿಸಬಹುದು. 


ಇದೆಲ್ಲದರ ಜೊತೆಗೆ ವೈದ್ಯರು ಸೂಚಿಸಿದ್ದರೆ ಅವರ ಸಲಹೆ ಸೂಚನೆಗಳನ್ನು ಅನುಸರಿಸುವುದರಿಂದ ಶುಗರ್ ಲೆವೆಲ್ ಹೆಚ್ಚಾಗದಂತೆ ತಡೆಯಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.