ತೂಕ ಇಳಿಕೆಯಿಂದ ಬಿ‌ಪಿ ಕಂಟ್ರೋಲ್ ಮಾಡುವವರೆಗೂ ಆರೋಗ್ಯಕ್ಕೆ ವರದಾನವಿದ್ದಂತೆ, ಮಜ್ಜಿಗೆ...

Written ByYashaswini V
Published: Oct 09, 2024, 12:26 PM IST|Updated: Oct 09, 2024, 12:26 PM IST

Buttermilk: ಭಾರತದಲ್ಲಿ ಊಟದ ಬಳಿಕ ಮಜ್ಜಿಗೆ ಕುಡಿಯುವ ಸಂಪ್ರದಾಯವಿದೆ. ಇದು ಸಂಪ್ರದಾಯವಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನವಿದ್ದಂತೆ. 

Buttermilk Benefits: ನಿತ್ಯ ಭೋಜನದ ಬಳಿಕ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Buttermilk 1/8

ಮಜ್ಜಿಗೆ

ಊಟವಾದ ನಂತರ ಮಜ್ಜಿಗೆ ಕುಡಿದರೆ ಆಹಾರ ಪೂರ್ಣ ಎಂಬಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲ, ಆರೋಗ್ಯದ ಪ್ರಯೋಜನಗಳಿಗಾಗಿಯೂ ಊಟದ ಬಳಿಕ ಮಜ್ಜಿಗೆಯನ್ನು ಕುಡಿಯಲೇಬೇಕು ಎನ್ನಲಾಗುತ್ತದೆ. 

Buttermilk Benefits2/8

ನೈಸರ್ಗಿಕ ಜೀರ್ಣಕಾರಿ

ಮಜ್ಜಿಗೆಯಲ್ಲಿ ಪ್ರೋಬಯೊಟಿಕ್ ಗಳು ಸಮೃದ್ಧವಾಗಿರುವುದರಿಂದ ಇದು ಕರುಳಿನ ಬ್ಯಾಕ್ಟೀರಿಯಾ ಬೆಳವಣಿಗೆ ಉತ್ತೇಜಿಸಿ ನೈಸರ್ಗಿಕ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ. 

Buttermilk Benefits3/8

ಮೂಳೆಗಳ ಆರೋಗ್ಯ

ಮಜ್ಜಿಗೆಯು ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಅನ್ನು ಪೂರೈಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. 

Buttermilk Benefits4/8

ತೂಕ ಇಳಿಕೆ

ಕಡಿದ ಮಜ್ಜಿಗೆಯಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ಇದು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಲಾಭದಾಯಕವಾಗಿದೆ. 

Buttermilk Benefits5/8

ದೇಹವನ್ನು ನಿರ್ವಿಷಗೊಳಿಸಲು

ಭೋಜನದ ಬಳಿಕ ಕುಡಿಯುವುದರಿಂದ ಇದು ದೇಹದಿಂದ ಬೇಡದ ಹಾನಿಕಾರಕ ವಸ್ತುಗಳನ್ನು ಹೊರಹಾಕಿ ದೇಹವನ್ನು ನಿರ್ವಿಷಗಳಿಸಲು ಸಹಕಾರಿ ಆಗಲಿದೆ. 

Buttermilk Benefits6/8

ಬಿಪಿ ನಿಯಂತ್ರಣ

ಮಜ್ಜಿಗೆಯಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾದ ಜೈವಿಕ ಸಕ್ರಿಯ ಪ್ರೊಟೀನ್ ಗಳಿರುವುದರಿಂದ ಇದು ಬಿಪಿ ಸಮಸ್ಯೆ ಇರುವವರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. 

Buttermilk Benefits7/8

ಆಮ್ಲೀಯತೆಗೆ ಪರಿಹಾರ

ಭೋಜನದ ಬಳಿಕ ಮಜ್ಜಿಗೆ ಕುಡಿಯುವುದರಿಂದ ಗ್ಯಾಸ್ಟ್ರಿಕ್, ಅಸಿಡಿಟಿಯಂತಹ ಆಮ್ಲೀಯತೆ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. 

Buttermilk Benefits8/8

ಆರೋಗ್ಯಕ್ಕೆ ಮಜ್ಜಿಗೆ ಪ್ರಯೋಜನಗಳು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.