ಹಲಸಿನ ಹಣ್ಣಿನಂತೆ ಕಾಣುವ ಇದು ವಿಶ್ವದ ಅತೀ ದುರ್ನಾತದ ಹಣ್ಣು! ಆದ್ರೆ ತಿಂದರೆ ನಿಮಿಷದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜು
Health Benefits Of Durian Fruit: ಡುರಿಯನ್ ತಿರುಳು ಅನೇಕ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಎ, ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಫೋಲಿಕ್ ಆಮ್ಲ, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ದೇಹಕ್ಕೆ ಸಿಗುತ್ತದೆ.
Health Benefits Of Durian Fruit: ಡುರಿಯನ್ ಎಂಬುದು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಮತ್ತು ಹಲಸಿನ ಹಣ್ಣಿನಂತೆ ಕಾಣುವ ಫಲ. ಇದು ಇಂಡೋನೇಷ್ಯಾ ಮತ್ತು ಸಿಂಗಾಪುರದ ರಾಷ್ಟ್ರೀಯ ಹಣ್ಣು. ಈ ಹಣ್ಣು ಪೌಷ್ಟಿಕಾಂಶದ ಮೌಲ್ಯ ಮತ್ತು ಅದರ ವಾಸನೆಗೆ ಹೆಸರುವಾಸಿಯಾಗಿದೆ. ಆಗ್ನೇಯ ಏಷ್ಯಾದಲ್ಲಿ ಅನೇಕ ಹೋಟೆಲ್’ಗಳು ಮತ್ತು ಸಾರಿಗೆ ವಾಹನಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಕಾರಣ ಇದರ ವಾಸನೆ. ಆದರೆ ಜೀವಸತ್ವಗಳು ಮತ್ತು ಖನಿಜಗಳು ಇತರ ಅನೇಕ ಹಣ್ಣುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.
ಇದನ್ನೂ ಓದಿ: ವಿಶ್ವಕಪ್ ಆರಂಭಕ್ಕೆ ನಾಲ್ಕೇ ದಿನ ಬಾಕಿ ಇರುವಾಗ ICC ಮುಂದೆ ಈ ಬೇಡಿಕೆ ಇಟ್ಟ ಪಾಕ್
ಡುರಿಯನ್ ತಿರುಳು ಅನೇಕ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಎ, ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಫೋಲಿಕ್ ಆಮ್ಲ, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ದೇಹಕ್ಕೆ ಸಿಗುತ್ತದೆ.
ಡುರಿಯನ್ ಹೇರಳವಾದ ಫೈಬರ್ ಅನ್ನು ಹೊಂದಿದ್ದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ನಿತ್ಯವೂ ಇದನ್ನು ತಿನ್ನುವವರಿಗೆ ಮಲಬದ್ಧತೆ, ಅಜೀರ್ಣ, ಅಸಿಡಿಟಿ, ಗ್ಯಾಸ್ ಸೇರಿದಂತೆ ಹಲವು ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಡುರಿಯನ್ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಅತ್ಯುತ್ತಮವಾದ ಹಣ್ಣಾಗಿದೆ. ಏಕೆಂದರೆ ಇದು ತುಂಬಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.
ಡುರಿಯನ್ ಪೊಟ್ಯಾಸಿಯಂಲ್ಲಿ ಸಮೃದ್ಧವಾಗಿದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಡಯೆಟರಿ ಫೈಬರ್ ಈ ಹಣ್ಣಿನಲ್ಲಿ ಕಂಡುಬರುವುದರಿಂದ ದೇಹದಲ್ಲಿರುವ ಅನಗತ್ಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಜೊತೆಗೆ ಶೀಘ್ರವಾಗಿ ತೂಕ ಇಳಿಸಲು ಸಹಾಯ ಮಾಡುತ್ತದೆ.
ಡುರಿಯನ್ ಹಣ್ಣನ್ನು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಬದಲಾಗುತ್ತಿರುವ ಹವಾಮಾನದಲ್ಲಿ ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರಗಳಿಂದ ಉಂಟಾಗುವ ಸೋಂಕುಗಳಿಂದ ರಕ್ಷಿಸುತ್ತದೆ. ವಿಟಮಿನ್ ಸಿ ಡುರಿಯನ್ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ಹೀಗಾಗಿ ಜ್ವರ, ಶೀತ, ಕೆಮ್ಮು, ಅನೇಕ ರೋಗಗಳಿಂದ ರಕ್ಷಣೆ ನೀಡುತ್ತದೆ.
ಇದನ್ನೂ ಓದಿ: ಕೂದಲಿನ ಎಲ್ಲಾ ಸಮಸ್ಯೆಗೂ ಈ ಕಾಯಿ ಪರ್ಫೆಕ್ಟ್ ಮನೆಮದ್ದು...! ಟ್ರೈ ಮಾಡಿ ನೋಡಿ
(ಸೂಚನೆ: ಪ್ರಿಯ ಓದುಗರೇ, ನಮ್ಮ ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ನಾವು ಇದನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI